Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
UllalavaniUllalavani
suddi

ಭಾರತೀಯ ವೈದ್ಯ ಪರಂಪರೆಯ ಮಹತ್ವವನ್ನು ಅರಿತು, ಮುನ್ನಡೆಸಬೇಕಾಗಿದೆ ಯುವ ವೈದ್ಯರು; ಸಂಸದ ಕ್ಯಾ.ಬ್ರಿಜೇಶ್ ಚೌಟ

UllalaVaniBy UllalaVaniDecember 23, 2025No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಕಣಚೂರು;ವೈದ್ಯರನ್ನು ದೇವರ ಸ್ಥಾನದಲ್ಲಿ ನೋಡುವ ಸಂಸ್ಕೃತಿ ಭಾರತೀಯರದ್ದು. ಭಾರತೀಯ ವೈದ್ಯರ ಸಾಮರ್ಥ್ಯ ಹಾಗೂ ವೃತ್ತಿ ನಿಷ್ಠೆ ಬೇರೆ ಯಾವ ದೇಶದಲ್ಲೂ ಕಾಣಲು ಸಾಧ್ಯವಿಲ್ಲ. ಇಂತಹ ಭಾರತೀಯ ವೈದ್ಯ ಪರಂಪರೆಯ ಮಹತ್ವವನ್ನು ಅರಿತುಕೊಂಡು ಆ ಪರಂಪರೆಯನ್ನು ಮುನ್ನಡೆಸಿಕೊಂಡು ಹೋಗುವ ಜವಬ್ದಾರಿ ಇಂದಿನ ಯುವ ವೈದ್ಯರಿಗಿದೆ ಎಂದು ಸಂಸದರಾದ ಕ್ಯಾ.ಬ್ರಿಜೇಶ್ ಚೌಟ ಹೇಳಿದ್ದಾರೆ. ಇವರು ದೇರಳಕಟ್ಟೆಯ ಕಣಚೂರು ಮೆಡಿಕಲ್ ಕಾಲೇಜಿನ ಎಂಬಿಬಿಎಸ್‌ನ ಪ್ರಥಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳಿಗೆ ವೈಟ್‌ಕೋಟ್ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.

ವೈದ್ಯಕೀಯ ವೃತಿ ಕೇವಲ ವೃತ್ತಿ ಮಾತ್ರವಲ್ಲ ಜನರ ಆರೋಗ್ಯ ಜೀವದ ರಕ್ಷಣೆಯೊಂದಿಗೆ ನಮ್ಮ ಸಮಾಜಕ್ಕೆ ರಾಷ್ಟçಕ್ಕೆ ಅವರ ಕೊಡುಗೆ ಅಪಾರವಾದುದು. ಈ ವೃತ್ತಿ ಬದುಕಿಗೆ ಸ್ಪೂರ್ತಿಯೂ ಹೌದು, ತಪಸ್ಸು ಕೂಡಾ ಆಗಿದೆ ಎಂದರು.

ನರೇಂದ್ರ ಮೋದಿಯವರು ಪ್ರಧಾನಮಂತ್ರಿಯಾದ ಬಳಿ ದೇಶದ ಜನರ ವೈದ್ಯಕೀಯ ಕ್ಷೇತ್ರ ಮತ್ತು ಆರೋಗ್ಯ ಸಂರಕ್ಷಣೆಯ ವಲಯಗಳಲ್ಲಿ ಅನೇಕ ಮಹತ್ತರವಾದ ಬದಲಾವಣೆಗಳಾಗಿವೆ. ಆಯುಷ್ಮಾನ್ ಭಾರತ್, ಪ್ರಧಾನಮಂತ್ರಿ ಜನೌಷಧಿ ಯೋಜನೆ, ಇಂದ್ರಧನುಷ್ ಸೇರಿದಂತೆ ಅನೇಕ ಯೋಜನೆಗಳ ಮೂಲಕ ಹೆಲ್ತ್ ಕೇರ್ ಕ್ಷೇತ್ರದ ಭದ್ರಬುನಾದಿಯನ್ನು ಗಟ್ಟಿಗೊಳಿಸಿದೆ.

ಮಂಗಳುರು ದಕ್ಷಿಣ ಕ್ಷೇತ್ರದ ಶಾಸಕರಾದ ವೇದವ್ಯಾಸ್ ಕಾಮತ್ ಅವರು ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಇಂತಹ ವೈದ್ಯಕೀಯ ಕಾಲೇಜಿಗೆ ಪ್ರವೇಶ ಪಡೆದ ಬಿಳಿ ಕೋಟ್ ಧರಿಸುವ ಅವಕಾಶ ಹೆಚ್ಚಿನವರಿಗೆ ಸಿಗುವುದಿಲ್ಲ. ಇದೊಮದು ಜೀವನದ ಭಾಗ್ಯ ಮತ್ತು ಜೀವನದ ಸುವರ್ಣಾವಕಾಶವಾಗಿದೆ. ಪದವಿ ಗಳಿಸಿದ ಬಳಿಕ ಈ ವೃತ್ತಿಗೆ ಸಿಗುವ ಗೌರವಯುತ ಸ್ಥಾನ ಬಹಳ ವಿಶೇಷವಾದುದು ಎಂದರು.

ಕಣಚೂರು ಶಿಕ್ಷಣ ಸಮೂಹ ಸಂಸ್ಥೆಯ ಅಧ್ಯಕ್ಷರಾದ ಡಾ.ಯು.ಕೆ.ಮೋನು ಅವರ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಇಮದು ವೈಟ್ ಕೋಟ್ ಪಡೆದ ವಿದ್ಯಾರ್ಥಿಗಳು ಮುಂದೆ ಪದವಿಯೊಂದಿಗೆ ಸಮಾಜದಲ್ಲಿ ಮೆಲ್ಪಂಕ್ತಿಯ ಸ್ಥಾನದಲ್ಲಿ ಗುರುತಿಸಲಿದ್ದೀರಿ. ಅವಕಾಶಗಳ ಸದ್ಭಳಕೆ ಮಾಡಿಕೊಂಡು ಸಮಾಜಕ್ಕೆ ಉತ್ತಮ ಕೊಡುಗೆ ನೀಡುವಂತಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಸತೀಶ್ ಕುಂಪಲ, ಸಲಹಾ ಸಮಿತಿ ಸದಸ್ಯ ವೈದ್ಯರಾದ ಡಾ.ಎಂ.ಬಿ ಪ್ರಭು, ಕಣಚೂರು ಮೆಡಿಕಲ್ ಕಾಲೇಜಿನ ಸಲಹಾ ಸಮಿತಿ ಅಧ್ಯಕ್ಷರಾದ ಡಾ.ಇಸ್ಮಾಯಿಲ್ ಹೆಜಮಾಡಿ, ಡೀನ್ ಡಾ.ಶಾನವಾಝ್ ಮನ್ನಿಪ್ಪಾಡಿ, ಮೆಡಿಕಲ್ ಸುಪರಿಡೆಂಟ್ ಡಾ.ಅಂಜನ್ ಕುಮಾರ್, ಅಡ್ಮಿನಿಸ್ಟೇಷನ್ ಮೆಡಿಕಲ್ ಆಫೀಸರ್ ಡಾ.ರೋಹನ್ ರೋನಿಸ್ ಮೊದಲಾದವರು ಉಪಸ್ಥಿರಿದ್ದರು.

ಆಡಳಿತ ನಿರ್ದೇಶಕರಾದ ಅಬ್ದುಲ್ ರಹಿಮಾನ್ ಅವರು ಸ್ವಾಗತಿಸಿ,ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ರೋಶನ್ ಕಾರ್ಯಕ್ರಮ ನಿರೂಪಿಸಿದರು. ಡಾ.ಹ್ಯಾನಿಯಲ್ ಮತ್ತು ಡಾ.ಮಮತಾ ಕಾರ್ಯಕ್ರಮ ನಿರೂಪಿಸಿದರು.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...
Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

19 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ..!

February 5, 2026

ಕೆನರಾ ಬ್ಯಾಂಕ್ ದೇರಳಕಟ್ಟೆ ಶಾಖೆಯ ಶಿವರಾಮ ಕಾಸರಗೋಡು ಅವರಿಗೆ ಬೀಳ್ಕೊಡುಗೆ

February 4, 2026

ಫೆ, 8.ಹಿದಾಯತ್ ನಗರ ಹುಸೈನಿಯಾ ದರ್ಸ್ ವಾರ್ಷಿಕ ಮಹ್ಳರತುಲ್ ಬದ್ರಿಯಾ

February 4, 2026

Comments are closed.

Advertise
ಸಂಪರ್ಕಿಸಿ

ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ

December 15, 2025

ಸೋಮೇಶ್ವರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನೇತ್ರಾ ತಪಾಸಣಾ ಶಿಬಿರ

December 6, 2025

ನೂತನ ಅತ್ಯಾಧುನಿಕ ಫಿಸಿಯೋಥೆರಪಿ ಚಿಕಿತ್ಸಾ ಕ್ಲಿನಿಕ್ ಉದ್ಘಾಟನೆ

November 12, 2025

ಕ್ಯಾನ್ಸರ್ ಹಾಗೂ ಸ್ತ್ರೀ ರೋಗ ಜಾಗ್ರತಿ ಅರಿವು

November 11, 2025
suddi

19 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ..!

By UllalaVaniFebruary 5, 20260

ಉಳ್ಳಾಲ: 19 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟ್‌ ಹೊಂದಿದ್ದ ಆರೋಪಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಕೈಕೋ ರೋಡ್‌ ಸುಭಾಷನಗರ ನಿವಾಸಿ ಅನ್ವರ್…

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

ಕೆನರಾ ಬ್ಯಾಂಕ್ ದೇರಳಕಟ್ಟೆ ಶಾಖೆಯ ಶಿವರಾಮ ಕಾಸರಗೋಡು ಅವರಿಗೆ ಬೀಳ್ಕೊಡುಗೆ

February 4, 2026

ಫೆ, 8.ಹಿದಾಯತ್ ನಗರ ಹುಸೈನಿಯಾ ದರ್ಸ್ ವಾರ್ಷಿಕ ಮಹ್ಳರತುಲ್ ಬದ್ರಿಯಾ

February 4, 2026

ಪಟ್ಲ ಫೌಂಡೇಶನ್ ಟ್ರಸ್ಟ್: ಕೇಂದ್ರೀಯ ಮಹಿಳಾ ಘಟಕದ ವಾರ್ಷಿಕೋತ್ಸವ

February 4, 2026
1 2 3 … 1,793 Next
Automatic YouTube Gallery

ಉಮಾಮಹೇಶ್ವರಿ ಕ್ಷೇತ್ರದಲ್ಲಿ ನಡೆದ ಸಭಾ ಕಾರ್ಯಕ್ರಮ

ಕಾಪಿಕಾಡ್ ಉಮಾಮಹೇಶ್ವರಿ ಕ್ಷೇತ್ರದಲ್ಲಿ ಬ್ರಹ್ಮಲಕಶೋತ್ಸವ;ಮೂರನೇ ದಿನದ ಸಭಾ ಕಾರ್ಯಕ್ರಮಕ್ಕೆ ಚಾಲನೆ

ಕಟೀಲು ಕ್ಷೇತ್ರದ ಅರ್ಚಕರಾದ ಹರಿನಾರಾಯಣದಾಸ ಅಸ್ರಣ್ಣರಿಂದ ಆಶೀವರ್ಚನ
ಉಮಾಮಹೇಶ್ವರಿ ಕ್ಷೇತ್ರದಲ್ಲಿ ನಡೆದ ಸಭಾ ಕಾರ್ಯಕ್ರಮ
Now Playing
ಉಮಾಮಹೇಶ್ವರಿ ಕ್ಷೇತ್ರದಲ್ಲಿ ನಡೆದ ಸಭಾ ಕಾರ್ಯಕ್ರಮ
ಕಾಪಿಕಾಡ್ ಉಮಾಮಹೇಶ್ವರಿ ಕ್ಷೇತ್ರದಲ್ಲಿ ಬ್ರಹ್ಮಲಕಶೋತ್ಸವ;ಮೂರನೇ ದಿನದ ಸಭಾ ...
ಕಾಪಿಕಾಡ್ ಉಮಾಮಹೇಶ್ವರಿ ಕ್ಷೇತ್ರದಲ್ಲಿ ಬ್ರಹ್ಮಲಕಶೋತ್ಸವ;ಮೂರನೇ ದಿನದ ಸಭಾ ಕಾರ್ಯಕ್ರಮಕ್ಕೆ ಚಾಲನೆ

ಕಟೀಲು ಕ್ಷೇತ್ರದ ಅರ್ಚಕರಾದ ಹರಿನಾರಾಯಣದಾಸ ಅಸ್ರಣ್ಣರಿಂದ ಆಶೀವರ್ಚನ
ಮಹಿಷಾಸುರನ್ ಕೆರ್ನಗ ದೇವಿಗ್ ಬೇಜಾರ್..??
Now Playing
ಮಹಿಷಾಸುರನ್ ಕೆರ್ನಗ ದೇವಿಗ್ ಬೇಜಾರ್..??
ಮಹಿಷಾಸುರನ ಜೊತೆ ತಾಯಿ 9 ದಿನ ಯುದ್ಧ ಮಾಡಿದ ಕಾರಣವೇ ರೋಚಕ.. ಸ್ವರ್ಗದತ್ತ ಮಹಿಷಾ ...
ಮಹಿಷಾಸುರನ ಜೊತೆ ತಾಯಿ 9 ದಿನ ಯುದ್ಧ ಮಾಡಿದ ಕಾರಣವೇ ರೋಚಕ..

ಸ್ವರ್ಗದತ್ತ ಮಹಿಷಾ ಹೋಗಲು ಇದೇ ಕಾರಣ; ಕಟೀಲು ಅಸ್ರಣ್ಣರಿಂದ ಅದ್ಭುತ ವಿವರಣೆ
Follow us on Facebook
Recent Editions
JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version
%d