ತೊಕ್ಕೊಟ್ಟು; ತೊಕ್ಕೊಟ್ಟಿನ ಅಯ್ಯಪ್ಪ ವೃತಧಾರಿಗಳು ಸಾಯಿ ಪರಿವಾರ್ ಸೇವಾಲಯಕ್ಕೆ ಆಗಮಿಸಿ, ಬಾಬಾರಿಗೆ ಆರತಿ ಬೆಳಗಿ, ಫಲಹಾರ ಸ್ವೀಕರಿಸಿದರು.

ಈ ಸಂದರ್ಭದಲ್ಲಿ 108 ದಿನಗಳ ಕಾಲ ಸಾಯಿ ಪರಿವಾರ್‌ನಲ್ಲಿ ವೃತಾಚರಣೆಗೈದು, ಕೊಲ್ಲೂರಿನಿಂದ ಶಬರಿಮಲೆಗೆ ಪಾದಯಾತ್ರೆ ಕೈಗೊಂಡ ವಿಜಯ ಪಂಡಿತ್ ಹೌಸ್‌ರವರನ್ನು ಗೌರವಿಸಲಾಯಿತು.

ಸಾಯಿ ಪರಿವಾರ್‌ನ ಟ್ರಸ್ಟಿ ಪುರುಷೋತ್ತಮ ಕಲ್ಲಾಪು ಸಾಯಿ ಪರಿವಾರ್ ನಿಂದ ಶಬರಿಮಲೆ ಯಾತ್ರೆ ಕೈಗೊಂಡರು.
ಪುಟ್ಟಪ್ಪ ಗುರುಸ್ವಾಮಿ ಅಯ್ಯಪ್ಪ ಭಕ್ತವೃಂದದ ಗುರುಸ್ವಾಮಿ ಪ್ರವೀಣ್ ಮೆಸ್ಕಾಂ ಮತ್ತು ವೃತಧಾರಿಗಳು, ಸಾಯಿ ಪರಿವಾರ್ ಸದಸ್ಯರು, ಮಹಿಳಾ ಸದಸ್ಯರು ಉಪಸ್ಥಿತರಿದ್ದರು.



