
ಸೇವಾ ಕಾರ್ಯ ಚುರುಕು ಗೊಳಿಸಲು ಉಳ್ಳಾಲಕ್ಕೆ ಪೂರ್ಣ ಅವಧಿಯ ಉತ್ತಮ ಪೌರಾಯುಕ್ತರ ನೇಮಕ ಮಾಡಿ ಎಂದು ನಾಗರಿಕರ ಆಗ್ರಹಕ್ಕೆ ಸ್ಪಂದಿಸಿರುವ ಮಾನ್ಯ ಸಭಾಧ್ಯಕ್ಷ UT ಖಾದರ್ ರವರ ಶಿಫಾರಸು ಮೇರೆಗೆ ಸರ್ಕಾರ ಇದೀಗ ಉಳ್ಳಾಲ ನಗರ ಸಭೆಗೆ ಪೌರಾಯುಕ್ತರಾಗಿ ಸಂತೋಷ್ ರನ್ನು ನೇಮಕ ಮಾಡಿದೆ .
ಮೂಲತಃ ತೀರ್ಥಹಳ್ಳಿಯ ಸಂತೋಷ್ ರವರು ಈ ಮೊದಲು ಕುಂದಾಪುರ, ಕಾಪು ಪುರ ಸಭೆ ಮುಖ್ಯಾಧಿಕಾರಿ, ಉಡುಪಿ ನಗರ ಸಭೆಯ ಕಂದಾಯ ಅಧಿಕಾರಿ ಯಾಗಿ (RO) ಹೀಗೆ ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಸುಮಾರು 15 ವರ್ಷ ಗಳ ಕಾಲ ಕರ್ತವ್ಯ ನಿಷ್ಠೆ, ಪ್ರಾಮಾಣಿಕ ಸೇವೆ ಸಲ್ಲಿಸುವ ಮೂಲಕ ಅಲ್ಲಿನ ಜನರ ಪ್ರೀತಿ,ವಿಶ್ವಾಸ, ಗೌರವಕ್ಕೆ ಪಾತ್ರರಾಗಿದ್ದಾರೆ.
ಉಳ್ಳಾಲಕ್ಕೆ ಓರ್ವ ಉತ್ತಮ KMAS (Karnataka municipal administrative service) ಅಧಿಕಾರಿಯ ಹುಡುಕಾಟದಲ್ಲಿದ್ದ ಮಾನ್ಯ ಶಾಸಕರಿಗೆ ಸಂತೋಷ ರವರ ಕಾರ್ಯ ವೈಖರಿ ಬಗ್ಗೆ ತಿಳಿದು ಕೊಂಡು ಉಳ್ಳಾಲಕ್ಕೆ ಇವರೇ ಸೂಕ್ತ ಎಂದು ಸರ್ಕಾರಕ್ಕೆ ಶಿಫಾರಸು ಮಾಡಿ ಇವರನ್ನು ನೇಮಕ ಮಾಡುವಲ್ಲಿ ಶಾಸಕರು ಯಶಸ್ವಿಯಾಗಿದ್ದು ಜನರ ಬೇಡಿಕೆಗೆ ಸ್ಪಂದಿಸಿರುವ ಮಾನ್ಯ ಶಾಸಕ – ಸಭಾಧ್ಯಕ್ಷ UT ಖಾದರ್ ರವರಿಗೆ ಉಳ್ಳಾಲದ ನಾಗರಿಕರು ಕೃತಜ್ಞತೆ ಸಲ್ಲಿಸಿದ್ದಾರೆ.

