ಉಳ್ಳಾಲ,ಡಿ.16: ಕಾಮಗಾರಿ ಸಂದರ್ಭ ಗುಡ್ಡ ಕುಸಿದು ಕಾರ್ಮಿಕ ಸಾವನ್ನಪ್ಪಿರುವ ಘಟನೆ ತೊಕ್ಕೊಟ್ಟು ಕಲ್ಲಾಪು ಸೇವಂತಿಗುತ್ತು ಸಮೀಪ ಸಂಭವಿಸಿದೆ.

ಹುನಗುಂದ ತಾಲೂಕು ನಿವಾಸಿ ಬಾಳಪ್ಪ (45) ಮೃತ ಕಾರ್ಮಿಕ. ಐದು ಮಂದಿ ಕಾರ್ಮಿಕರು ಒಟ್ಟಾಗಿ ರಿಟೈನಿಂಗ್ ವಾಲ್ ಕಾಮಗಾರಿಯನ್ನು ನಡೆಸುತ್ತಿದ್ದು, ಈ ಸಂದರ್ಭ ಅವಘಢ ಸಂಭವಿಸಿ ಬಾಳಪ್ಪ ಮಣ್ಣಿನಡಿಗೆ ಸಿಲುಕಿದ್ದಾರೆ. ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ.
ಖಾಸಗಿ ಜಾಗದ ರಿಟೈನಿಂಗ್ ವಾಲ್ ಕಾಮಗಾರಿ ನಡೆಯುತ್ತಿದ್ದು, ಈ ಸಂದರ್ಭ ಜೆಸಿಬಿ ಮೂಲಕ ಗುಡ್ಡವನ್ನು ಅಗೆಯಲಾಗುತಿತ್ತು. ಇದೇ ಸಂದರ್ಭ ಗಾರೆ ಹಿಡಿದುಕೊಂಡು ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕ ಬಾಳಪ್ಪ ಮೇಲೆ ಏಕಾಏಕಿ ಗುಡ್ಡ ಕುಸಿದಿದೆ. ಉಳ್ಳಾಲ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ಕೈಗೆತ್ತಿಕೊಂಡದ್ದಾರೆ.

