ಉಳ್ಳಾಲ: ಭೀಕರ ನಾಯಿ ದಾಳಿಯಿಂದ ಕುಂಪಲ ಬೈಪಾಸ್ ಸಮೀಪದ ನಿವಾಸಿ ದಯಾನಂದ ಗಟ್ಟಿ ಸಾವನ್ನಪ್ಪಿ ತಿಂಗಳಾಗುತ್ತಾ ಬಂದರೂ 48 ಗಂಟೆಯೊಳಗೆ ಸಿಗಬೇಕಾದ ಪರಿಹಾರ ಮಾತ್ರ ಮರೀಚಿಕೆಯಾಗಿದೆ.

ಅವರು ನ.14ರಂದು ಬೆಳಿಗ್ಗೆ ಸುಮಾರು 7.30 ಗಂಟೆಗೆ ಕುಂಪಲ ಮುಖ್ಯರಸ್ತೆಯಲ್ಲಿ ನಡೆದ ಬೀದಿ ನಾಯಿಯ ಕ್ರೂರ ದಾಳಿಗೆ ತುತ್ತಾಗಿ ಮರಣ ಹೊಂದಿದ್ದರು. ಈ ಕುರಿತು ಅಸ್ವಾಭಾವಿಕ ಮರಣ ಎಂಬ ಪ್ರಥಮ ಮಾಹಿತಿ ದೊರಕುತ್ತಿದ್ದಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಳಿಕ ಪೋಸ್ಟ್ಮಾರ್ಟಂ ವೈದ್ಯಕೀಯ ವರದಿಯೇ ‘ಪ್ರಾಣಿ ದಾಳಿಯಿಂದಾದ ಗಂಭೀರ ಗಾಯಗಳೇ ದಯಾನಂದ ಗಟ್ಟಿಯವರ ಮರಣಕ್ಕೆ ನೇರ ಕಾರಣ’ ಎಂದು ಸ್ಪಷ್ಟಪಡಿಸಿದೆ.

ಇವುಗಳನ್ನು ಪರಿಗಣಿಸಿ ಜಿಲ್ಲಾಡಳಿತದ ಬೇಜವಬ್ದಾರಿಗೆ ಬಲಿಯಾದ ದಯಾನಂದ ಅವರ ಬಡಕುಟುಂಬಕ್ಕೆ ಕರ್ನಾಟಕ ಹೈಕೋರ್ಟ್ ಧಾರವಾಡ ಪೀಠದ ರಿಟ್ ಪಿಟೀಷನ್ ಸಂಖ್ಯೆ 110352/2019 ಹಾಗೂ ಸರ್ಕಾರದ ಆದೇಶ ÀDE 159 ಜಿಇಯಲ್ 2023 (ದಿನಾಂಕ: 30.10.2023) ಪ್ರಕಾರ, ಬೀದಿ ನಾಯಿಗಳ ದಾಳಿ ಅಥವಾ ಜೀವಹಾನಿ ಸಂಭವಿಸಿದಲ್ಲಿ ಸ್ಥಳೀಯ ಸಂಸ್ಥೆಯಿoದ ಕಮಿಟಿ ರಚಿಸಿ,ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರವನ್ನು ಘಟನೆ ನಡೆದ 48 ಗಂಟೆಗಳೊಳಗೆ ನೀಡುವಂತೆ ಸರಕಾರವು ಸ್ಪಷ್ಟ ನಿರ್ದೇಶನ ನೀಡಿತ್ತು.
ಆದರೆ ಸಂಬAಧಪಟ್ಟವರು ಪರಿಹಾರದ ವಿಚಾರವಾಗಿ ಮೌನ ವಹಿಸಿದಂತೆ ಕಾಣುತ್ತಿವೆ. ತನ್ನದಲ್ಲದ ತಪ್ಪಿಗೆ ಜೀವ ಕಳೆದುಕೊಂಡ ಕುಟುಂಬಕ್ಕೆ ನೆರವಾಗದೇ ಪರೋಕ್ಷವಾಗಿ ಕಾಡಿಸುತ್ತಿದೆ. ಪ್ರಶ್ನಿಸಿದರೆ ಇಲ್ಲಸಲ್ಲದ ನೆಪಗಳನ್ನೊಡ್ಡಿ ತಮ್ಮ ಜವಬ್ದಾರಿಗಳಿಂದ ನುಣುಚಿಕೊಳ್ಳುತ್ತಿದ್ದಾರೆ. ಘಟನೆಯ ಗಂಭೀರತೆಯನ್ನು ಅರಿತಿದ್ದರೂ ಇಷ್ಟೊಂದು ನಿರ್ಲಕ್ಯ÷್ಷತನ ಸ್ಥಳೀಯ ನಾಗರಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಬೀದಿ ನಾಯಿಗಳ ಹಾವಳಿ ತಡೆಗಟ್ಟುವಲ್ಲಿ ಸಂಪೂರ್ಣ ವಿಫಲರಾಗಿದ್ದ ಜಿಲ್ಲಾಡಳಿತ ಕೊನೆ ಪಕ್ಷ ಭಯಾನಕ ರೀತಿಯಲ್ಲಿ ಮುಖ, ಕೈ, ಕಾಲು ಸೇರಿದಂತೆ ದೇಹದ ಹಲವು ಭಾಗಗಳಲ್ಲಿ ಗಂಭೀರ ಕಚ್ಚುಗಾಯಗಳು, ಎಡಗಣ್ಣು ಸಂಪೂರ್ಣ ಕಿತ್ತುಹೋಗಿರುವುದು ಹಾಗೂ ಮುಖದ ಎಡಭಾಗ ಹರಿದುಹೋಗಿ ಸಾವನ್ನಪ್ಪಿದ ಮೃತ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ದೊರಕಿಸಿ ಕೊಡಬಹುದಿತ್ತು ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.
ಈ ಘಟನೆಯಿಂದ ಮಾನವೀಯತೆ, ಸರಕಾರದ ಆದೇಶ, ಮನುಷ್ಯನ ಜೀವ ಇವುಗಳಿಗೆ ಯಾವುದೇ ಬೆಲೆ ಇಲ್ಲ ಎಂಬುವುದು ಸಾಬೀತಾದಂತಾಗಿದೆ.


