ಉಳ್ಳಾಲ: ಸೋಮೇಶ್ವರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಕೋಟೆಕಾರಿನ ಸಹಯೋಗದೊಂದಿಗೆ, ಬೀರಿಯ ಸ್ಟೆಲ್ಲಾ ಮೇರಿಸ್ ಅನುದಾನಿತ ಶಾಲೆಯ ಮಕ್ಕಳಿಗಾಗಿ “ಸೈಟ್ ಫಾರ್ ಕಿಡ್ಸ್” ಕಾರ್ಯಕ್ರಮದ ಭಾಗವಾಗಿ ಕಣ್ಣಿನ ತಪಾಸಣಾ ಶಿಬಿರ ನಡೆಯಿತು.

ಪ್ರಸಿದ್ಧ ನೇತ್ರ ತಪಾಸಣಾ ತಜ್ಞರ ನೇತೃತ್ವದಲ್ಲಿ ನಡೆದ ಶಿಬಿರವನ್ನು ಮಾಜಿ ಸೈನಿಕ ಕೃಷ್ಣ ಬೋಳಾರ್ ಅವರು ಉದ್ಘಾಟಿಸಿದರು.
ಈ ಸಂದರ್ಭ ಕ್ಲಬ್ ಅಧ್ಯಕ್ಷ ಲಯನ್ ವಿಜಯನ್ ಕೆ. ಖಜಾಂಜಿ, ಲಯನ್ ನಿತೀಶ ಕೃಷ್ಣ, ಕಮಾಂಡರ್ ಲಯನ್ ವಿಜಯಕುಮಾರ್, ಸಬ್ ಲೆಫ್ಟಿಂನೆAಟ್ ಲಯನ್ ಶಶಿಕುಮಾರ್ ನಾಯರ್, ಲಯನ್ ರಾಘವನ್ ಮೂತಾಲ್ , ಲಯನ್ ನಿರ್ಮಿತಾ ಭಂಡಾರಿ, ಲಯನ್ ಡಿ. ದಾಮೋದರನ್ ಉಪಸ್ಥಿತರಿದ್ದರು.
ಮುಂಬರುವ ದಿನಗಳಲ್ಲಿ ಅಗತ್ಯವಿರುವ ಮಕ್ಕಳಿಗೆ ಉಚಿತ ಕನ್ನಡಕವನ್ನು ವಿತರಿಸಲಾಗುವುದು.



