Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
BANTWALA

ಬಂಟ್ವಾಳದ ಬಡಗಕಜೆಕಾರು ಗ್ರಾಮ ಪಂಚಾಯತ್‌ನ ತೆಂಕಕಜೆಕಾರು ಪ್ರದೇಶವ್ಯಾಪಕ ಕಲ್ಲುಗಳ ಸ್ಫೋಟ; ಹೈಕೋರ್ಟ್‌ ಆದೇಶ ಪಾಲಿಸದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ..!

UllalaVaniBy UllalaVaniNovember 22, 2025No Comments3 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp


ಬಂಟ್ವಾಳ: ಅರಣ್ಯ ಪ್ರದೇಶದ ನಡುವಿನ ಖಾಸಗಿ ಜಾಗದಲ್ಲಿ ಕ್ವಾರಿ ಕಾರ್ಯಾಚರಣೆ, ದಿನವೊಂದಕ್ಕೆ ಮೂರು ಬಾರಿ ಜಿಲೆಟಿನ್‌ ಮುಖೇನ ಕಲ್ಲುಗಳ ಸ್ಫೋಟ, ಭಾರೀ ಸದ್ದಿನ ಜೊತೆಗೆ ಮನೆಗಳ ಸುತ್ತಮುತ್ತಲೂ ಕಲ್ಲುಗಳ ಅವಶೇಷಗಳು ಬೀಳುತ್ತಿವೆ, ರಸ್ತೆಯಲ್ಲಿ ನಾಲ್ಕರಷ್ಟು ಶಾಲಾ ವಾಹನಗಳು ಸಂಚರಿಸುತ್ತಿದ್ದರೂ ರಸ್ತೆಯಿಂದ ಮೀ. ಅಂತರ ದೂರದಲ್ಲಿನ ಕ್ವಾರಿಯಲ್ಲಿ ನಿರಂತರ ಸ್ಫೋಟಕಗಳ ಬಳಕೆ, ಹೊಸ ಮನೆ ನಿರ್ಮಾಣವನ್ನೇ ಮೊಟಕುಗೊಳಿಸಿದ ಕುಟುಂಬ, ನೀರಿಲ್ಲದೇ ಬಂಜರು ಭೂಮಿಯಾಗುತ್ತಿರುವ ಕೃಷಿ ಭೂಮಿ, ಆತಂಕದ ನಡುವೆ ಜೀವನ ಕಳೆದುಕೊಳ್ಳುತ್ತಿರುವ ಕುಟುಂಬಗಳಿಗೆ ಹೈಕೋರ್ಟ್‌ ಆದೇಶವಿದ್ದರೂ ಪಾಲಿಸದ ಅಧಿಕಾರಿಗಳು. ಇದು ಬಡಗಕಜೆಕಾರು ಗ್ರಾಮ ಪಂಚಾಯತ್‌ನ ತೆಂಕಕಜೆಕಾರು ಪ್ರದೇಶದಲ್ಲಿ ನಡೆಯುತ್ತಿರುವ ಕ್ವಾರಿ ಕಾರ್ಯಾಚರಣೆಯಿಂದಾಗಿ ಗ್ರಾಮಸ್ಥರು ಅನುಭವಿಸುತ್ತಿರುವ ನರಕಯಾತನೆ ಬಡಗಕಜೆಕಾರು ಗ್ರಾಮ ಪಂಚಾಯತ್‌ನ ತೆಂಕಕಜೆಕಾರು ಪ್ರದೇಶದಲ್ಲಿ ನಡೆಯುತ್ತಿರುವ ಕ್ವಾರಿಯಿಂದಾಗಿ ಪರಿಸರವಿಡೀ ಮಾಲಿನ್ಯದಿಂದ ಕೂಡಿದ್ದು, ಮನೆ, ಅಂಗನವಾಡಿ ಕಟ್ಟಡಗಳಲ್ಲಿ ಬಿರುಕು ಕಾಣಿಸಿಕೊಂಡಿದೆ.

ಈ ಕುರಿತು ಹೈಕೋರ್ಟ್‌ ನಲ್ಲಿ ಗ್ರಾಮಸ್ಥರು ಹೂಡಿರುವ ದಾವೆಗೆ ರಾಜ್ಯ ಕಂದಾಯ ಇಲಾಖೆ, ಜಿಲ್ಲಾಧಿಕಾರಿಗಳು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ ನಿರ್ದೇಶಕರಿಗೆ ತಕ್ಷಣವೇ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುವಂತೆ ಸೆ.5 ರಂದು ಆದೇಶಿಸಿದರೂ, ನ.22 ಕ್ಕೆ ಬರುವ ನೋಟೀಸು ನೀಡಿ, ಕೊನೆ ಘಳಿಗೆಯಲ್ಲಿ ಮತ್ತೊಂದು ನೋಟೀಸು ನೀಡಿ ನ.26ಕ್ಕೆ ಪರಿಶೀಲನೆಯನ್ನು ಮುಂದೂಡಲಾಗಿದೆ ಎಂದು ಗ್ರಾಮಸ್ಥರ ದಿಕ್ಕು ತಪ್ಪಿಸಲು ಯತ್ನಿಸಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಅದು ಪ್ರಕೃತಿ ರಮಣೀಯ ದಟ್ಟ ಕಾಡು, ಕೃಷಿ ಸಂಬಂಧಿಸಿದ ಪ್ರದೇಶ. ಮೀಸಲು ಅರಣ್ಯವಿರುವ ಹತ್ತಿರದಲ್ಲೇ ಕ್ವಾರಿಯನ್ನು ತೆರೆಯಲು ಅನುಮತಿಯನ್ನು ಸರಕಾರ ನೀಡಿದೆ. ಆದರೆ ಅನುಮತಿಯಲ್ಲಿರುವ ನಿಯಮಗಳೆಲ್ಲವನ್ನೂ ಉಲ್ಲಂಘಿಸಿ ಕ್ವಾರಿ ಅಪಾಯಕಾರಿಯಾಗಿ ಕಾರ್ಯಾಚರಿಸುತ್ತಿದೆ. ಇದರಿಂದ ಕ್ವಾರಿ ಸಮೀಪವೇ ಇರುವ ಗ್ರಾಮದ ಜನತೆ ಆತಂಕಕ್ಕೀಡಾಗಿದ್ದಾರೆ. ಹಲವು ಮನೆಗಳ ಗೋಡೆಗಳು ಕ್ವಾರಿಯಲ್ಲಿನ ಅಪಾಯಕಾರಿ ಸ್ಫೋಟಕ ಸಿಡಿಸುವುದರಿಂದಾಗಿ ಬಿರುಕುಬಿಟ್ಟಿದೆ. ಜಾನುವಾರು ಕೊಠಡಿಗಳ ಶೀಟುಗಳು ಮುರಿದುಬಿದ್ದಿದೆ. ಸ್ಫೋಟದ ಸದ್ದು ಒಮ್ಮೆಗೆ ಕಿವಿಯನ್ನು ಮುಚ್ಚಿಸಿ, ಹೃದಯ ಬಡಿತ ಹೆಚ್ಚಿಸುವಂತೆ ಮಾಡುತ್ತಿದೆ. ಜಿಲೆಟಿನ್‌ ಬಳಸಿ ನಡೆಸುತ್ತಿರುವ ಸ್ಫೋಟದಿಂದಾಗಿ ಗಾಳಿಯಿಡೀ ಮಲಿನಗೊಳ್ಳುತ್ತಿದೆ. ಜಲ್ಲಿ ಧೂಳುಗಳು ಮನೆ ಸೇರುತ್ತಿವೆ. ಜಾನುವಾರುಗಳು ಸ್ಫೋಟದ ಸದ್ದು ಕೇಳಿ ಹಗ್ಗವನ್ನು ತುಂಡರಿಸಿ ಓಡುವಂತಹ ವಾತಾವರಣ ಇಲ್ಲಿದೆ. ಹೊಸ ಮನೆಯನ್ನು ಕಟ್ಟುತ್ತಿರುವ ಮನೆಮಂದಿ ಕ್ವಾರಿ ಆತಂಕದಿಂದ ಅರ್ಧದಲ್ಲೇ ಕಾಮಗಾರಿಯನ್ನು ಮೊಟಕುಗೊಳಿಸಿದ್ದಾರೆ.

ಪ್ರಮುಖವಾಗಿ ನಾಲ್ಕು ಶಾಲಾ ಬಸ್ಸುಗಳು ಕ್ವಾರಿ ಕಾರ್ಯಾಚರಿಸುವ ಮೀ. ಅಂತರದಲ್ಲಿರುವ ರಸ್ತೆಯಲ್ಲಿ ಸಂಚರಿಸುತ್ತಿರುವುದು ಗ್ರಾಮಸ್ಥರನ್ನು ಆತಂಕಕ್ಕೀಡು ಮಾಡಿದೆ. ಕಳೆದ ಆರು ತಿಂಗಳಿನಿಂದ ಕಾರ್ಯಾಚರಿಸುತ್ತಿರುವ ಕ್ವಾರಿಯ ಅಧ್ವಾನದಿಂದಾಗಿ ಭತ್ತದ ಕೃಷಿಯನ್ನು ಮೊಟಕುಗೊಳಿಸಿದ ಪರಿಣಾಮವಾಗಿ ಹಲವು ಎಕ್ರೆ ಗದ್ದೆಗಳು ಪಾಳುಬಿದ್ದಿವೆ. ಬಾವಿಗಳು ನೀರಿಲ್ಲದೆ ಬರಿದಾಗುತ್ತಿದೆ. ಪ್ರಮುಖವಾಗಿ ಅರ್ಧ ಕಿ.ಮೀ ದೂರದಲ್ಲೇ ಅಂಗನವಾಡಿ ಕಾರ್ಯಾಚರಿಸುತ್ತಿದ್ದು, ಸುಮಾರು 20 ರಷ್ಟು ಮಕ್ಕಳು ಅಂಗನವಾಡಿಯಲ್ಲಿ ನೆಲೆಸುತ್ತಾರೆ. ಅಂತಹ ಹೊತ್ತಿನಲ್ಲೇ ಸ್ಫೋಟಕ ಸಿಡಿಸಿರುವುದರಿಂದಾಗಿ ಅಂಗನವಾಡಿ ಕಟ್ಟಡವೂ ಬಿರುಕು ಬಿಟ್ಟು ಮಕ್ಕಳು ಅಪಾಯವನ್ನು ಎದುರಿಸುತ್ತಿದ್ದಾರೆ. ಈ ಕುರಿತು ಸ್ಥಳೀಯಾಡಳಿತ, ಜಿಲ್ಲಾಡಳಿತಕ್ಕೆ ದೂರು ನೀಡಿರುವ ಗ್ರಾಮಸ್ಥರ ದೂರುಗಳಿಗೆ ಸ್ಪಂಧನೆಯೇ ಸಿಗದ ಹಿನ್ನೆಲೆಯಲ್ಲಿ ರಾಜ್ಯ ಹೈಕೋರ್ಟ್‌ ನಲ್ಲಿ ಜಯಾನಂದ, ವಿಶ್ವನಾಥ, ನಾರಾಯಣ, ಜಾರಪ್ಪ ಹಾಗೂ ಡೀಕಮ್ಮ ಸೇರಿಕೊಂಡು ದಾವೆ ಹೂಡಿದ್ದರು. ಅದರಂತೆ ಎಲ್ಲಾ ಇಲಾಖೆಗಳಿಗೆ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುವಂತೆ ಆದೇಶವನ್ನು ಹೊರಡಿಸಿತ್ತು. ಆದರೆ ಆದೇಶ ಸೇರಿ ಎರಡು ತಿಂಗಳುಗಳ ಬಳಿಕ ನ.22 ಕ್ಕೆ ಅಧಿಕಾರಿಗಳು ಸ್ಥಳಕ್ಕೆ ಬರುವ ನೋಟೀಸು ನೀಡಿದ್ದರು. ಅದರಂತೆ ಗ್ರಾಮಸ್ಥರು ಎಲ್ಲರೂ ನೋಟೀಸಿನಲ್ಲಿ ನೀಡಿರುವಂತೆ ನ.22ರ 11 ಗಂಟೆಗೆ ಕಾಯುತ್ತಿದ್ದರು. ಆದರೆ 11.15ರ ಹೊತ್ತಿಗೆ ಪೋಸ್ಟ್‌ ಮೆನ್‌ ಸ್ಥಳಕ್ಕೆ ಧಾವಿಸಿ ಮತ್ತೊಂದು ನೋಟೀಸು ನೀಡಿ ಸ್ಥಳ ಪರಿಶೀಲನೆಯನ್ನು ನ.26ಕ್ಕೆ ಮುಂದೂಡಲಾಗಿದೆ ಎಂದು ಸೂಚಿಸಿದ್ದರು. ಇದನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ದ.ಕ ಜಿಲ್ಲಾ ಕಚೇರಿಗೆ ಗ್ರಾಮಸ್ಥರು ದೂರವಾಣಿ ಮಾಡಿ ಕೇಳಿದಾಗ ಅಲ್ಲಿರುವ ಸಿಬ್ಬಂದಿ ನಿನ್ನೆಯಷ್ಟೇ ಸಭೆ ನಿಗದಿಯಾಗಿದ್ದು, ಅದಕ್ಕಾಗಿ ಸ್ಥಳ ಪರಿಶೀಲನೆಯನ್ನು ಕೊನೆ ಕ್ಷಣದಲ್ಲಿ ಕೈಬಿಡಲಾಗಿದೆ ಅಂದಿದ್ದಾರೆ. ಆದರೆ ಕೂಲಿ ಮಾಡಿಕೊಂಡು ಬದುಕುತ್ತಿರುವ ಗ್ರಾಮಸ್ಥರು ಈ ಕುರಿತು ಕೆಲಸವನ್ನು ಬಿಟ್ಟು ಸ್ಥಳ ಪರಿಶೀಲನೆ ನಿಂತಿರುವುದನ್ನು ಪ್ರಶ್ನಿಸಿದಾಗ ನಾವು ಏನು ಮಾಡಲು ಬರುವುದಿಲ್ಲ ಎಂದು ಉದ್ಧಟತನದಿಂದ ಪ್ರತಿಕ್ರಯಿಸಿದ್ದಾರೆ.,. ಇದರಿಂದ ನೊಂದ ಗ್ರಾಮಸ್ಥರು ಅಧಿಕಾರಿಗಳು ಕೆಲವರ ಒತ್ತಡಕ್ಕೆ ಮಣಿದು ಬರಲು ಹಿಂದೇಟು ಹಾಕುತ್ತಿದ್ದಾರೆ. ಈ ಮೂಲಕ ರಾಜ್ಯದ ಉಚ್ಛನ್ಯಾಯಾಲಯದ ಆದೇಶವನ್ನೇ ಉಲ್ಲಂಘಿಸುತ್ತಿದ್ದಾರೆ. ಮುಂದೆಯೂ ಬಾರದೇ ಇದ್ದಲ್ಲಿ ಕ್ವಾರಿಯೊಳಗಡೆ ಕುಳಿತು ಪ್ರತಿಭಟನೆ ನಡೆಸುವುದು ಅನಿವಾರ್ಯ ಎಂದು ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳು ಈ ಕುರಿತು ಹೆಚ್ಚಿನ ಮುತುವರ್ಜಿ ವಹಿಸಿ ಪರಿಸರ ಸಂರಕ್ಷಣೆ , ಜೀವ ಸಂಕುಲದ ವಿರುದ್ಧವಾಗಿರುವ ಕ್ವಾರಿಯನ್ನು ತಕ್ಷಣಕ್ಕೆ ನಿಲ್ಲಿಸುವಂತೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಕ್ವಾರಿ ಆರಂಭದ ನಂತರ ನಿರಂತರ ಭೂಕುಸಿತ
ಕ್ವಾರಿ ಆರಂಭದ ನಂತರದ ದಿನಗಳಲ್ಲಿ ಮಳೆ ಸಂದರ್ಭ ಪ್ರದೇಶದಲ್ಲಿ ನಿರಂತರ ಭೂಕುಸಿತಗಳು ಸಂಭವಿಸುತ್ತಲೇ ಇದೆ. ಮನೆಗಳಿಗೆ ಗುಡ್ಡ ಜರಿದು ಬಿದ್ದು ವ್ಯಾಪಕ ಹಾನಿಯುಂಟಾಗಿದೆ. ಮಂಜನಾಡಿಯಲ್ಲಿ ನಡೆದ ದುರಂತದಂತೆ ಮುಂದಿನ ದಿನಗಳಲ್ಲಿ ತೆಂಕಕಜೆಕಾರು ಪ್ರದೇಶವೂ ದೂರವಿಲ್ಲ ಅನ್ನುವ ಆತಂಕವನ್ನು ಗ್ರಾಮಸ್ಥರು ವ್ಯಕ್ತಪಡಿಸುತ್ತಿದ್ದಾರೆ. ಆಘಾತಗಳು ಸಂಭವಿಸಿದ ಬಳಿಕ ತಮಗೆ ಬೇಕಾದ ರೀತಿಯಲ್ಲಿ ಅಧಿಕಾರಿಗಳು ಸುಳ್ಳು ವರದಿಗಳನ್ನು ನೀಡಲು ಸಿದ್ಧರಿದ್ದಾರೆ ಎಂದು ಅಳಲು ವ್ಯಕ್ತಪಡಿಸಿದ್ದಾರೆ.

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಮಾಲೀಕನ ಮೇಲೆ ಆ್ಯಸಿಡ್ ದಾಳಿ ನಡೆಸಿದ ವ್ಯಕ್ತಿಗೆ 10 ವರ್ಷ ಜೈಲು ಶಿಕ್ಷೆ….!!

May 1, 2026

ಎಸ್ ವೈ ಎಸ್ ಹಿದಾಯತ್ ನಗರ ಶಾಖೆ ನೂತನ ಪಧಾಧಿಕಾರಿಗಳ ಆಯ್ಕೆ

May 1, 2026

ಅತ್ಯಾಚಾರ ಕೇಸಲ್ಲಿ ಅಪ್ರಾಪ್ತೆಯ ಗರ್ಭಪಾತದ ಕಾನೂನು ಬದಲಾಯಿಸಿ- ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ತರಾಟೆ

April 30, 2026

Comments are closed.

Advertise
ಸಂಪರ್ಕಿಸಿ

13ಗಂಟೆಗಳ ಶಸ್ತ್ರಚಿಕಿತ್ಸೆ; ಯೆನೆಪೋಯ ವೈದ್ಯರ ತಂಡಕ್ಕೆ ಬಿಗ್ ಸೆಲ್ಯೂಟ್

April 28, 2026

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ

December 15, 2025

ಸೋಮೇಶ್ವರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನೇತ್ರಾ ತಪಾಸಣಾ ಶಿಬಿರ

December 6, 2025
suddi

ಮಾಲೀಕನ ಮೇಲೆ ಆ್ಯಸಿಡ್ ದಾಳಿ ನಡೆಸಿದ ವ್ಯಕ್ತಿಗೆ 10 ವರ್ಷ ಜೈಲು ಶಿಕ್ಷೆ….!!

By UllalaVaniMay 1, 20260

ಉಡುಪಿ, ಮೇ. 01 : ಕೆಲಸದ ವಿಷಯದಲ್ಲಿ ಉಂಟಾದ ಸಣ್ಣ ಜಗಳದಿಂದಾಗಿ ತನ್ನ ಮಾಲೀಕನ ಮೇಲೆ ಆ್ಯಸಿಡ್ ಸುರಿದು ಕೊಲೆಗೆ ಯತ್ನಿಸಿದ…

ಎಸ್ ವೈ ಎಸ್ ಹಿದಾಯತ್ ನಗರ ಶಾಖೆ ನೂತನ ಪಧಾಧಿಕಾರಿಗಳ ಆಯ್ಕೆ

May 1, 2026

ಅತ್ಯಾಚಾರ ಕೇಸಲ್ಲಿ ಅಪ್ರಾಪ್ತೆಯ ಗರ್ಭಪಾತದ ಕಾನೂನು ಬದಲಾಯಿಸಿ- ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ತರಾಟೆ

April 30, 2026

2017ರ ಮುಕ್ಕಚ್ಚೇರಿ ಕೊಲೆ ಪ್ರಕರಣ; ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ

April 30, 2026
1 2 3 … 1,891 Next
Automatic YouTube Gallery

|| ULLALA TALUK HIGHLIGHTS || 01.05.2026

|| ULLALA TALUK HIGHLIGHTS

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted ...
and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
|| ULLALA TALUK HIGHLIGHTS || 01.05.2026
Now Playing
|| ULLALA TALUK HIGHLIGHTS || 01.05.2026
|| ULLALA TALUK HIGHLIGHTS 📍 Ullal | Dakshina Kannada | Coastal ...
|| ULLALA TALUK HIGHLIGHTS

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted ...
and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
"ಅಕ್ರಮ ಮಣ್ಣು ದಂಧೆಗೆ ಯಾರ ಬೆಂಬಲ..?ಅಧಿಕಾರಿಗಳ ಮೌನದ ಹಿಂದಿನ ಕಾರಣ..?
Now Playing
"ಅಕ್ರಮ ಮಣ್ಣು ದಂಧೆಗೆ ಯಾರ ಬೆಂಬಲ..?ಅಧಿಕಾರಿಗಳ ಮೌನದ ಹಿಂದಿನ ಕಾರಣ..?
ಉಳ್ಳಾಲದ ಬೆಲ್ಮಾ ಗ್ರಾಮದಲ್ಲಿ ಅಕ್ರಮ ಮಣ್ಣು ದಂಧೆ...!;ಸ್ಥಳದಲ್ಲಿದ್ದ ದೈವದ ಕಲ್ಲು ...
ಉಳ್ಳಾಲದ ಬೆಲ್ಮಾ ಗ್ರಾಮದಲ್ಲಿ ಅಕ್ರಮ ಮಣ್ಣು ದಂಧೆ...!;ಸ್ಥಳದಲ್ಲಿದ್ದ ದೈವದ ಕಲ್ಲು ತೆರವು

ಗ್ರಾಮಸ್ಥರ ಅಳಲು; ಅಧಿಕಾರಿಗಳ ಮೌನ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ...
ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates #Belma #Ullala
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version