ಮಂಜನಾಡಿ; ಮಂಗಳೂರು ತಾಲೂಕಿನ ಮಂಜನಾಡಿ ಗ್ರಾಮದಲ್ಲಿ ಸೆಪ್ಟೆಂಬರ್‌ನಲ್ಲಿ ಸಂಭವಿಸಿದ ಗುಡ್ಡ ಕುಸಿತ ಒಂದು ಕುಟುಂಬವನ್ನೇ ನಾಶ ಮಾಡಿದ ದುರಂತ.

ಈ ಘಟನೆಯನ್ನು “ಪ್ರಕೃತಿ ವಿಕೋಪ” ಎಂದು ಕರೆಯುವ ಮೂಲಕ ಆಡಳಿತ ತನ್ನ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದರೂ, ನಿಜವಾದ ಕಾರಣ ಅವೈಜ್ಞಾನಿಕ ರಸ್ತೆ ಕಾಮಗಾರಿ, ನಿಯಮ ಉಲ್ಲಂಘನೆ ಮತ್ತು ತಾಂತ್ರಿಕ ನಿರ್ಲಕ್ಷ್ಯ.
ಈ ದುರಂತದಲ್ಲಿ ಆಶ್ವಿಯಾ ಎಂಬ ಯುವ ತಾಯಿಯ ಎದುರು ಆಕೆಯ ಇಬ್ಬರು ಮಕ್ಕಳು ಮತ್ತು ಅತ್ತೆ ಮಣ್ಣಿನೊಳಗೈದು ಸಾವನ್ನಪ್ಪಿದರು. ಆಶ್ವಿಯಾ ತನ್ನ ಎರಡೂ ಕಾಲುಗಳನ್ನು ಕಳೆದುಕೊಂಡಳು. ಮಾವನ ಒಂದು ಕಾಲು ಶಾಶ್ವತವಾಗಿ ಛಿದ್ರಗೊಂಡಿತು. ಒಂದು ಸಂಸಾರ ಕ್ಷಣದಲ್ಲಿ ನಾಶವಾಯಿತು.
ಇಷ್ಟೊಂದು ಭೀಕರ ದುರಂತಕ್ಕೂ ಜಿಲ್ಲಾಡಳಿತ ನೀಡಿದ ಪರಿಹಾರ—ಮೂರು ಪ್ರಾಣಗಳಿಗೆ ₹15 ಲಕ್ಷ, ಆಶ್ವಿಯಾ ಅವರ ಎರಡು ಕಾಲುಗಳಿಗೆ ₹2 ಲಕ್ಷ, ಮಾವನ ಒಂದು ಕಾಲಿಗೆ ₹1 ಲಕ್ಷ. ಒಟ್ಟು ₹18 ಲಕ್ಷ.
ಮಾನವ ಜೀವಕ್ಕೆ ಮತ್ತು ಬದುಕಿನ ಶಾಶ್ವತ ನಾಶಕ್ಕೆ ಕಟ್ಟಿದ ಈ “ಬೆಲೆ” ಮಾನವೀಯತೆಗೂ ನ್ಯಾಯಕ್ಕೂ ತಕ್ಕದ್ದೇ?
ದುರಂತದ ಬಗ್ಗೆ ಮಾಧ್ಯಮ ವರದಿಗಳು ಬೆಳಕಿಗೆ ಬಂದ ನಂತರ, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ ತಕ್ಷಣ ಸ್ಪಂದಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದೆ. ಅಧ್ಯಕ್ಷ ಶ್ಯಾಮ ಭಟ್ ಅವರ ನೇತೃತ್ವದಲ್ಲಿ ಆಯೋಗವು ಘಟನೆಯ ಸಂಪೂರ್ಣ ವಿವರ, ಪರಿಹಾರದ ಪ್ರಕ್ರಿಯೆ, ಗುತ್ತಿಗೆದಾರರ ಜವಾಬ್ದಾರಿ ಮತ್ತು ತನಿಖೆಯ ಪ್ರಗತಿ ಕುರಿತು ಸಂಪೂರ್ಣ ವರದಿ ಸಲ್ಲಿಸಲು ಸೂಚಿಸಿದೆ.
ಇದು ದುರಂತಕ್ಕೆ ಕನಿಷ್ಠ ಮಟ್ಟದಲ್ಲಿ accountability ಸ್ಥಾಪಿಸುವ ಮೊದಲ ಹೆಜ್ಜೆ.
ಆಶ್ವಿಯಾ ತನ್ನ ಮಕ್ಕಳನ್ನು ಕಳೆದುಕೊಂಡಳು, ತಾನೇ ಜೀವನಪೂರ್ತಿ ವ್ಹೀಲ್‌ಚೇರ್‌ಗೆ ಸೀಮಿತಳಾದಳು. ಆಕೆಯ ಸಂಸಾರ, ಬದುಕಿನ ಭವಿಷ್ಯ—all ended in minutes. ಆದರೆ ಸರಕಾರದ ದೃಷ್ಟಿಯಲ್ಲಿ ಪ್ರಾಣಕ್ಕೆ ₹5 ಲಕ್ಷ, ಎರಡು ಕಾಲಿಗೆ ₹2 ಲಕ್ಷವೇ?
ಮಂಜನಾಡಿ ದುರಂತ ಕೇವಲ ಒಂದು ಸ್ಥಳೀಯ ಘಟನೆ ಅಲ್ಲ—
ಅವೈಜ್ಞಾನಿಕ ಅಭಿವೃದ್ಧಿ, ಗುತ್ತಿಗೆದಾರರ ಲಾಭದ ಹಂಬಲ, ತಾಂತ್ರಿಕ ನಿರ್ಲಕ್ಷ್ಯ ಮತ್ತು ಆಡಳಿತದ ಜವಾಬ್ದಾರಿಯಿಲ್ಲದ ವ್ಯವಸ್ಥೆಯ ಜೀವಂತ ಉದಾಹರಣೆ.
ಮಾನವ ಹಕ್ಕುಗಳ ಆಯೋಗದ ನೋಟಿಸ್ ಈಗ ಒಂದೇ ಪ್ರಶ್ನೆಯನ್ನು ಎತ್ತಿದೆ:
ಈ ದುರಂತಕ್ಕೆ ನಿಜವಾದ ನ್ಯಾಯ ಯಾವಾಗ?
ಅಗತ್ಯ ಕ್ರಮಗಳು:
1) ನ್ಯಾಯಾಂಗ ಸಮಿತಿಯಿಂದ ತಾಂತ್ರಿಕ ತನಿಖೆ
2) ಸಂಬಂಧಿಸಿದ ಅಧಿಕಾರಿಗಳು ಇಂಜಿನಿಯರ್ ಗಳ ಮತ್ತು ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ
3)ಪರಿಹಾರವನ್ನು ಮಾನವೀಯ ಮತ್ತು ನ್ಯಾಯಯುತ ರೀತಿಯಲ್ಲಿ ಪುನರ್‌ಮೌಲ್ಯಮಾಪನ
4) ಆಶ್ವಿಯಾ ಕುಟುಂಬಕ್ಕೆ ಶಾಶ್ವತ ಆರ್ಥಿಕ ಭದ್ರತೆ
ಭವಿಷ್ಯದ ಅಪಾಯ ತಡೆಗಟ್ಟಲು ಗುಡ್ಡ ಪ್ರದೇಶ ಕಾಮಗಾರಿಗಳಿಗೆ ಕಠಿಣ ಮಾರ್ಗಸೂಚಿ
ಒಂದು ಕುಟುಂಬ ನಾಶವಾದ ಬೆಲೆಯನ್ನು ಹಣದಲ್ಲಿ ಅಳೆಯುವುದು ಅಸಾಧ್ಯ. ಆದರೆ ನ್ಯಾಯ ವ್ಯವಸ್ಥೆ, ಅದನ್ನು ಈಗಲಾದರೂ ಕಟ್ಟಬೇಕು.



