Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
suddi

ಮಂಗಳೂರು ಯಾಂತ್ರಿಕ ಮೀನುಗಾರರ ಪ್ರಾಥಮಿಕ ಸಹಕಾರ ಸಂಘದ ವತಿಯಿಂದ ; ನವೀಕೃತ ಮಂಜುಗಡ್ಡೆ ಸ್ಥಾವರ ಉದ್ಘಾಟನೆ , 210  ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

UllalaVaniBy UllalaVaniNovember 17, 2025No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp


ಮಂಗಳೂರು: ಕರಾವಳಿ ಪ್ರದೇಶದ ವಿದ್ಯಾರ್ಥಿಗಳಲ್ಲಿ ಯುಪಿಎಸ್‌ಸಿ ಹಾಗೂ ಕೆಪಿಎಸ್‌ಸಿಯಂತಹ  ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವವರು ಬಹಳ ಕಡಿಮೆ ಸಂಖ್ಯೆಯಲ್ಲಿದ್ದಾರೆ. ಪದವಿ ಪೂರ್ಣಗೊಳಿಸಿದ ನಂತರವೇ ಪರೀಕ್ಷಾ ಸಿದ್ಧತೆ ಆರಂಭಿಸುವ ಪ್ರವೃತ್ತಿ ಜಾಗೃತಿಯ ಕೊರತೆಯ ಪ್ರಮುಖ ಕಾರಣವಾಗಿದೆ. ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳು ಪ್ರಚಲಿತ ವಿದ್ಯಮಾನಗಳು ಹಾಗೂ ಸಮಕಾಲೀನ ವಿಚಾರಗಳತ್ತ ನಿರಂತರ ಗಮನಹರಿಸಿದಾಗ ಯಶಸ್ಸು ಸಾಧ್ಯ ಎಂದು ಬಲ್ಮಠ ದಯಾನಂದ ಪೈ ಸತೀಶ್‌  ಸರಕಾರಿ ಪ್ರಥಮ ದರ್ಜೆ ಕಾಲೇಜು ಸಹಾಯಕ ಮಹಿಳಾ ಪ್ರಾಧ್ಯಾಪಕಿ ಡಾ. ಸುಮನ ಸುಧಾಕರ್ ಬೋಳಾರ್ ಹೇಳಿದರು.


ಅವರು ಮಂಗಳೂರು ಯಾಂತ್ರಿಕ ಮೀನುಗಾರರ ಪ್ರಾಥಮಿಕ ಸಹಕಾರ ಸಂಘ ನಿಯಮಿತ , ಸೌತ್‌ವಾರ್ಫ್‌, ಬಂದರು, ಮಂಗಳೂರು ಇವರ ಆಶ್ರಯದಲ್ಲಿ ನವೀಕೃತ ಮಂಜುಗಡ್ಡೆ ಸ್ಥಾವರ ಉದ್ಘಾಟನಾ ಸಮಾರಂಭ ಹಾಗೂ ರೂ.17 ಲಕ್ಷ ವೆಚ್ಛದಲ್ಲಿ 210  ವಿದ್ಯಾರ್ಥಿಗಳಿಗಾಗಿ ಜರಗಿದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು   ಉದ್ಘಾಟಿಸಿ ಮಾತನಾಡಿದರು.
ಸುದ್ದಿಪತ್ರ ಓದುವುದನ್ನು ವಿದ್ಯಾರ್ಥಿಗಳು ಎರಡು ರೀತಿಯಲ್ಲಿ ಅಭ್ಯಾಸ ಮಾಡಬೇಕಿದೆ. ಕನಿಷ್ಠ ಅರ್ಧಗಂಟೆಯಾದರೂ ಪ್ರತಿನಿತ್ಯ ವಿಷಯಾಧ್ಯಯನಕ್ಕೆ ಮೀಸಲಿಡುವುದರಿಂದ ಜ್ಞಾನವೃದ್ಧಿಗೆ ನೆರವಾಗುತ್ತದೆ. ಡಿಜಿಟಲ್ ಮೀಡಿಯಾ ಮತ್ತು ಮೊಬೈಲ್‌ ಬಳಕೆಯನ್ನು ಸಮಯ ವ್ಯರ್ಥ ಮಾಡುವ ಸಾಧನವಲ್ಲದೆ, ಪಾಸಿಟಿವ್‌ ಮಾಹಿತಿಯನ್ನು ಪಡೆದುಕೊಳ್ಳುವ ಉಪಕರಣಗಳಾಗಿ ಬಳಸುವವರಾಗಿರಿ ಎಂದರು.


ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಹಕಾರ ಸಂಘಗಳ ಸಹಾಯಕ ನಿಬಂಧಕಿ ಮಂಗಳೂರು ಉಪವಿಭಾಗ ತ್ರಿವೇಣಿ ರಾವ್ ಕೆ.  ಮಾತನಾಡಿ,  ಸಹಕಾರ ಸಪ್ತಾಹದ ಆಚರಣೆ ದೇಶದುದ್ದಕ್ಕೂ ಆಚರಿಸಲಾಗುತ್ತಿದೆ.  ಸಮುದಾಯದ ಚೇತನ್‌ ಬಂಗೇರ ಸಹಕಾರ ರತ್ನ ಪ್ರಶಸ್ತಿಯನ್ನು ಪಡೆದುಕೊಂಡಿರುವುದು ಅಭಿನಂದನೀಯ.  ಮಕ್ಕಳ ಹಾಗೂ ಸಹಕಾರಿ ಹಬ್ಬವನ್ನು ಆಚರಿಸಿದ ವಾತಾರವಣವಿದೆ. ಸ್ಪರ್ಧಾತ್ಮಕ ವಿಚಾರಗಳ ಪರೀಕ್ಷೆ ಎದುರಿಸುವ ವಿಚಾರವಾಗಿ  ಮಾಹಿತಿ ಕೊಡುವ ಪ್ರಯತ್ನ ವಿಶಿಷ್ಟವಾದುದು.  ಪ್ರತಿಭಾ ಪುರಸ್ಕಾರ ಪಡೆದುಕೊಂಡವರು ಮುಂದೆ ಭವಿಷ್ಯದಲ್ಲಿ ಸಮಾಜಕ್ಕೆ ಏನು ಕೊಡುತ್ತೇವೆ ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು  ಯಶಸ್ಸು ಸಾಧಿಸುವವರಾಗಿರಿ ಎಂದರು.
ಮಂಗಳೂರು ಮೀನುಗಾರಿಕೆ ಬಂದರು ಉಪ ನಿರ್ದೇಶಕಿ ರೇವತಿ ಜೆ.ಎ. ಮಾತನಾಡಿ ಸಂಘವು ತನ್ನ ಚಟುವಟಿಕೆಗಳನ್ನು ವಿಸ್ತರಿಸಿ, ಸಮಾಜಮುಖಿ ಕಾರ್ಯಗಳಲ್ಲಿ ಮತ್ತಷ್ಟು ತೊಡಗಿ, ಸಮುದಾಯಕ್ಕೆ ಮತ್ತು ವಿಶೇಷವಾಗಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸಲಿ. ಸಮಾಜದ ನಾಡಿ ಸ್ಪಂದಿಸುವ ಸಂಘಟನೆಗಳು ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಮಾನವೀಯ ಕ್ಷೇತ್ರಗಳಲ್ಲಿ ನಿಸ್ವಾರ್ಥ ಸೇವೆ ಗೈದಾಗ ಮಾತ್ರ ಶಕ್ತಿಶಾಲಿಯಾಗಿ ಬೆಳೆಯುತ್ತವೆ. ಅದೇ ದೃಷ್ಟಿಯಿಂದ ಸಂಘವು ತನ್ನ ಕಾರ್ಯವ್ಯಾಪ್ತಿಯನ್ನು ಹೆಚ್ಚಿಸಿಕೊಂಡು, ಕೇವಲ ಕಾರ್ಯಕ್ರಮಗಳಲ್ಲದೇ, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ವಿವಿಧ ಚಟುವಟಿಕೆಗಳಿಗೆ ಆದ್ಯತೆ ನೀಡಬೇಕೆಂದು ಎಂದರು.
ಭಾರತ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್ ನ  ಮಂಗಳೂರಿನ  ಟೆರಿಟರಿ ಮ್ಯಾನೇಜರ್  ವಿಪಿಎನ್ ದಾಸ್ ಬನ್ಸ್ವಾಲ್‌  ನವೀಕೃತ ಮಂಜುಗಡ್ಡೆ ಸ್ಥಾವರವನ್ನು ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಸಹಕಾರಿ ಸಂಘದ ಸ್ಥಾಪಕ ಸದಸ್ಯ ಹಾಗೂ ಮಾಜಿ ಅಧ್ಯಕ್ಷ ಮತ್ಸ್ಯರಾಜ್‌, ಹಿರಿಯ ಮತ್ಸ್ಯೋದ್ಯಮಿ  ಉಮೇಶ್‌ ಡಿ ಕರ್ಕೇರ, ಉತ್ತ ಮ ಫುಟ್ಬಾಲ್‌ ಆಟಗಾರ ,   ನಿರ್ದೇಶಕರುಗಳಾದ  ಮೋಹನ್‌ ಬೆಂಗ್ರೆ,  ವಿಲಿಯಂ ಡಿಸೋಜ, ಸರಿತಾ ಪುತ್ರನ್‌, ವಾಣಿ ಜಿ. ಸಾಲ್ಯಾನ್‌,  ಗುಲ್ಷನ್‌ ಪುತ್ರನ್‌, ರವಿಕಿರಣ್‌ ಬೆಂಗ್ರೆ, ಮಹೇಶ್‌ ಉಳ್ಳಾಲ್‌, ದಯಾನಂದ್‌ ಪುತ್ರನ್‌, ಕಿರಣ್‌ ಪುತ್ರನ್‌,
ಯಾಂತ್ರಿಕ ಸಂಘದ  ಮಂಜುಗಡ್ಡೆ ಸ್ಥಾವರದ ಪುನರುತ್ಥಾನದ ರೂವಾರಿ, ಲೋಕನಾಥ್‌ ಬೋಳಾರ ಬ್ಲಾಕ್‌ ದ್ವಿ ಅಂತಸ್ತಿನ ಕಟ್ಟಡದ ನಿರ್ಮಾತೃ, ಅದ್ವಿತೀಯ ಸಾಹಸಿ, ಅಪ್ರತಿಮ ದಾನಿ  ಮೋಹನ್‌ ಬೆಂಗ್ರೆ  ಇವರನ್ನು ಅಭಿನಂದಿಸಲಾಯಿತು.
ಇಂಜಿನಿಯರ್‌ ಗಳಾದ ಉದಯ್‌ ಕುಮಾರ್‌, ಮನೋಹರ್‌,  ಸಿವಿಲ್‌ ಗುತ್ತಿಗೆದಾರ  ಲ್ಯಾನ್ಸಿ  ಇವರನ್ನು ಸನ್ಮಾನಿಸಲಾಯಿತು.
ಸಂಘದ ಅಧ್ಯಕ್ಷ ವರದ್‌ರಾಜ್ ಬಂಗೇರ ಹಾಗೂ ಸುರೇಶ್‌ ಅಮೀನ್‌ ಸ್ವಾಗತಿಸಿದರು.   ಸಹಕಾರಿ ಸಂಘದ ಉಪಾಧ್ಯಕ್ಷ ರವಿಕಿರಣ್‌ ಬೆಂಗ್ರೆ ವಂದಿಸಿದರು.
ರಾಜಸ್ಥಾನದಲ್ಲಿ ಜರಗಿದ ರಾಷ್ಟ್ರಮಟ್ಟದ ವಿಶೇಷ ಹ್ಯಾಂಡ್‌ ಬಾಲ್‌ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ  ದಿಯಾ ಟಿ.ಸಾಲ್ಯಾನ್‌ ಹಾಗೂ ದಿಶಾ ಟಿ.ಸಾಲ್ಯಾನ್‌ ಅವರನ್ನು ಅಭಿನಂದಿಸಲಾಯಿತು. 

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಬಂಟ್ಸ್ ಹಾಸ್ಟೆಲ್ ಶ್ರೀ ಸಿದ್ದಿವಿನಾಯಕ ಪ್ರತಿಷ್ಠಾನ: ಗಣೇಶೋತ್ಸವ ಸಮಿತಿಯ ಸಂಚಾಲಕರಾಗಿ ಜಯಶೀಲ ಅಡ್ಯಾಂತಾಯ ಅಡ್ಯಾರ್ ಗುತ್ತು ಆಯ್ಕೆ

June 29, 2026

ಹಿರಿಯ ಪತ್ರಕರ್ತ ಗುರುವಪ್ಪ ಎನ್.ಟಿ. ಬಾಳೇಪುಣಿಯವರ ಸ್ಮರಣಾರ್ಥ ವಿದ್ಯಾರ್ಥಿಗಳಿಗೆ ಬಾಳೇಪುಣಿ ದತ್ತಿನಿಧಿ ಪ್ರತಿಭಾ ಪುರಸ್ಕಾರ

June 27, 2026

ಕರ್ನಾಟಕ ವಿಧಾನ ಪರಿಷತ್ ನೂತನ ಶಾಸಕರಿಗೆ ಯುವ ಕಾಂಗ್ರೆಸ್ ವತಿಯಿಂದ ಸನ್ಮಾನ

June 27, 2026

Comments are closed.

Advertise
ಸಂಪರ್ಕಿಸಿ

ಕರ್ನಾಟಕದಾದ್ಯಂತ ಆರೋಗ್ಯ ಇಲಾಖೆಯಲ್ಲಿ ಮೆಗಾ ನೇಮಕಾತಿ: ಸಾರ್ವಜನಿಕ ಆರೋಗ್ಯ ಸೇವೆ ಬಲಪಡಿಸಲು ಮಹತ್ವದ ಹೆಜ್ಜೆ

June 11, 2026

ರಾಜ್ಯದಲ್ಲಿ ಖಾಸಗಿ ಅಸ್ಪತ್ರೆಯಲ್ಲಿ ಆಯುಷ್ಮಾನ್ ಯೋಜನೆ ಸಮರ್ಪಕ ಜಾರಿಗೆ ಜ್ಯಾರಿ ಆಗದಿದ್ದರೆ ಜಿಲ್ಲೆಯ ಅರೋಗ್ಯಧಾರಿಗಳ ಮೇಲೆ ಕ್ರಮ :- ಅರೋಗ್ಯ ಸಚಿವ ಯು.ಟಿ ಖಾದರ್

June 9, 2026

ಫೀಲ್ಡ್ ಗೆ ಇಳಿದ ಯು.ಟಿ. ಖಾದರ್ – ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ಕ್ಲಾಸ್…!

June 5, 2026

ವೆನ್ಲಾಕ್ ಆಸ್ಪತ್ರೆಯಲ್ಲಿ ಮನೋವೈದ್ಯರು ಮತ್ತು ಕ್ಲಿನಿಕಲ್ ಸೈಕಾಲಜಿಸ್ಟ್‌ಗಳ ತೀವ್ರ ಕೊರತೆ – ಬಡ ರೋಗಿಗಳ ನಿರ್ಲಕ್ಷ್ಯ ಯಾಕೆ ಎಂದು ಸಾರ್ವಜನಿಕರ ಪ್ರಶ್ನೆ

May 26, 2026
All News

ನೂರುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದ್ರಸದಲ್ಲಿ ಸಮವಸ್ತ್ರ ಹಾಗೂ ಗುರುತಿನ ಚೀಟಿ ವಿತರಣಾ ಕಾರ್ಯಕ್ರಮ

By UllalaVaniJune 29, 20260

ಉಳ್ಳಾಲ: ಉಳ್ಳಾಲ ತಾಲೂಕಿನ ಇರಾ ಗ್ರಾಮದ ಬಾಳೆಪುಣಿ ನೂರುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದ್ರಸದಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ಹಾಗೂ ಗುರುತಿನ…

ಬೀರಿ ಸಾರ್ವಜನಿಕ ಶ್ರೀ ಗಣೇಶ ಸೇವಾ ಸಮಿತಿ ಅಧ್ಯಕ್ಷರಾಗಿ ರಾಜೀವಿ ಕೆಂಪುಮಣ್ಣು ಆಯ್ಕೆ

June 29, 2026

ಕುಂಪಲದ ಕೇಸರಿ ಸಭಾಂಗಣದಲ್ಲಿ ಪೋಲಿಯೊ ಲಸಿಕಾ ಕಾರ್ಯಕ್ರಮ

June 29, 2026

ಮುಹಮ್ಮದ್ ಕೊಣಾಜೆ ನಿಧನ

June 29, 2026
1 2 3 … 1,989 Next
Automatic YouTube Gallery

ದಿ.ಅಮೃತ ಸೋಮೇಶ್ವರ ಸಂಸ್ಮರಣಾ ಕಾರ್ಯಕ್ರಮ

ಪರಿಜ್ಞಾನ ಪದವಿಪೂರ್ವ ಕಾಲೇಜು, ಸೋಮೇಶ್ವರ ಸಹಯೋಗದೊಂದಿಗೆ
ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ(ರಿ.) ವತಿಯಿಂದ
ದಿ.ಅಮೃತ ಸೋಮೇಶ್ವರ ಸಂಸ್ಮರಣಾ ಕಾರ್ಯಕ್ರಮ
ಭಾಷಣ ಸ್ಪರ್ಧೆ, ಬಹುಭಾಷಾ ಕವಿಗೋಷ್ಠಿ, ಕಾವ್ಯಗಾಯನ

📍 Ullal | Dakshina Kannada | Coastal Karnataka News Update
ಉಳ್ಳಾಲ, ...
ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ದಿ.ಅಮೃತ ಸೋಮೇಶ್ವರ ಸಂಸ್ಮರಣಾ ಕಾರ್ಯಕ್ರಮ
Now Playing
ದಿ.ಅಮೃತ ಸೋಮೇಶ್ವರ ಸಂಸ್ಮರಣಾ ಕಾರ್ಯಕ್ರಮ
ಪರಿಜ್ಞಾನ ಪದವಿಪೂರ್ವ ಕಾಲೇಜು, ಸೋಮೇಶ್ವರ ಸಹಯೋಗದೊಂದಿಗೆ ಉಳ್ಳಾಲ ವೀರರಾಣಿ ...
ಪರಿಜ್ಞಾನ ಪದವಿಪೂರ್ವ ಕಾಲೇಜು, ಸೋಮೇಶ್ವರ ಸಹಯೋಗದೊಂದಿಗೆ
ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ(ರಿ.) ವತಿಯಿಂದ
ದಿ.ಅಮೃತ ಸೋಮೇಶ್ವರ ಸಂಸ್ಮರಣಾ ಕಾರ್ಯಕ್ರಮ
ಭಾಷಣ ಸ್ಪರ್ಧೆ, ಬಹುಭಾಷಾ ಕವಿಗೋಷ್ಠಿ, ಕಾವ್ಯಗಾಯನ

📍 Ullal | Dakshina Kannada | Coastal Karnataka News Update
ಉಳ್ಳಾಲ, ...
ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಕೋಟೆಕಾರು ರಾಮಾಶ್ರಯ ರಸ್ತೆ ಉದ್ಘಾಟಿಸಿದ ಹರ್ಷರಾಜ್‌ ಮುದ್ಯ
Now Playing
ಕೋಟೆಕಾರು ರಾಮಾಶ್ರಯ ರಸ್ತೆ ಉದ್ಘಾಟಿಸಿದ ಹರ್ಷರಾಜ್‌ ಮುದ್ಯ
ಒಂದೇ ರಸ್ತೆ ಎರಡು ಬಾರಿ ಉದ್ಘಾಟನೆ ಬಿಜೆಪಿ , ಕೋಟೆಕಾರು ಪ.ಪಂ ಅಧ್ಯಕ್ಷರ ವಿರುದ್ಧ ...
ಒಂದೇ ರಸ್ತೆ ಎರಡು ಬಾರಿ ಉದ್ಘಾಟನೆ

ಬಿಜೆಪಿ , ಕೋಟೆಕಾರು ಪ.ಪಂ ಅಧ್ಯಕ್ಷರ ವಿರುದ್ಧ ಪ್ರತ್ಯಾರೋಪ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ...
ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version