ಕೊಣಾಜೆ,ನ,12:ಕೊಣಾಜೆ ಗ್ರಾಮದ ಬೊಲ್ಮದಪ್ಪೆ ಕಲ್ಲುರ್ಟಿ ಕಲ್ಕುಡ ದೈವಸ್ಥಾನದಲ್ಲಿ ಸೋಮವಾರ ರಾತ್ರಿ ಹರಕೆಯ ಕೋಲೋತ್ಸವಗಳು ಶ್ರದ್ಧಾ ಭಕ್ತಿಯಿಂದ ನಡೆಯಿತು.

ಈ ಸಂದರ್ಭ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಹಾಪ್ ಕಾಮ್ಸ್ ಅಧ್ಯಕ್ಷರಾದ ಪ್ರಶಾಂತ್ ಗಟ್ಟಿ ಕುರ್ನಾಡು, ನೆಟ್ಲ ನಿಟಿಲಾಪುರ ಶ್ರೀ ನಿಟಿಲಾಕ್ಷ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ನೂತನ ಅಧ್ಯಕ್ಷರಾದ ನವೀನ್ ಗಟ್ಟಿ ನೆಟ್ಲ, ಹಾಗೂ ಪ್ರಖ್ಯಾತ ಯಕ್ಷಗಾನ ಹಾಸ್ಯ ಕಲಾವಿದರಾದ ಸುಂದರ್ ಬಂಗಾಡಿ ಇವರನ್ನು ಶ್ರೀ ಕ್ಷೇತ್ರದ ಪರವಾಗಿ ಗೌರವಿಸಲಾಯಿತು..
ಕ್ಷೇತ್ರದ ಮಾರ್ಗದರ್ಶಕರಾದ ಸುದರ್ಶನ್ ಭಟ್ ಕೊಣಾಜೆ, ಉಳ್ಳಾಲ ವಲಯ ಬಂಟರ ಸಂಘದ ಅಧ್ಯಕ್ಷರಾದ ರವೀಂದ್ರ ರೈ ಕಳ್ಳಿಮಾರು, ಕಲ್ಲಾಪು ಬುರ್ದುಗೋಳಿ ಶ್ರೀ ಗುಳಿಗ ಕೊರಗಜ್ಜ ಉದ್ಭವ ಶಿಲಾ ಕ್ಷೇತ್ರದ ಮಧ್ಯಸ್ಥರಾದ ದೇವದಾಸ ಗಟ್ಟಿ ಕಾಯಂಗಳ, ಯಜಮಾನರಾದ ನೇಮು ಗಟ್ಟಿ ಕೊರಂತೋಡಿ,ಯಜಮಾನರ ಪ್ರತಿನಿಧಿ ಮಾಧವಗಟ್ಟಿ ಕೆಳಗಿನ ಮನೆ, ಟ್ರಸ್ಟಿನ ಅಧ್ಯಕ್ಷರಾದ ವಸಂತ್ ಕೆ ಎನ್ ಕುಂಪಲ, ಪ್ರಮುಖರಾದ ಚಂದ್ರಶೇಖರ ಗಟ್ಟಿ ಅಂದಾಡಿ, ಕೇಶವ ಗಟ್ಟಿ ಪಿಲಾರ್, ವಾಸುದೇವ ಕೊಣಾಜೆ, ಪ್ರವೀಣ್ ಗಟ್ಟಿ ಕಟ್ಟಪುಣಿ, ಸುವಾಸಿನಿ ಗಟ್ಟಿ ಕೂಟತ್ತಜೆ ಮತ್ತಿತರರು ಉಪಸ್ಥಿತರಿದ್ದರು.
ಟ್ರಸ್ಟಿನ ನಿಕಟ ಪೂರ್ವ ಅಧ್ಯಕ್ಪರಾದ ಡಾ ಹರಿಕಿರಣ್ ಕೂಟತ್ತಜೆ ಸ್ವಾಗತಿಸಿದರು. ಹರೀಶ್ ಕೊಣಾಜೆ ಕಾರ್ಯಕ್ರಮ ನಿರ್ವಹಿಸಿದರು.



