ಉಳ್ಳಾಲ,ನ.11: ಶ್ರೀ ದುರ್ಗಾ ಫ್ರೆಂಡ್ಸ್ (ರಿ) ಉಳ್ಳಾಲ ಇದರ ಸ್ಥಾಪಕ ಸದಸ್ಯರಾದ ಹರೀಶ್ ನಿಧನ ಹೊಂದಿದ್ದಾರೆ.

ಸದಾ ಎಲ್ಲರೊಡನೆ ಪ್ರೀತಿ ವಿಶ್ವಾಸದಿಂದ ಬೆರೆಯುತ್ತಿದ್ದ ಹರೀಶ್ ಇನ್ನಿಲ್ಲ ಎಂಬ ಸುದ್ದಿ ಅವರ ಆತ್ಮೀಯರಿಗೆ ಅಘಾತವುಂಟು ಮಾಡಿದೆ. ಹರೀಶ್ ಅವರು ಬಜಾಜ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದರು.
ಮೃತರು ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಹಾಗೂ ಅನೇಕ ಬಂಧು ಮಿತ್ರರನ್ನು ಅಗಲಿದ್ದಾರೆ.



