ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಎಕ್ಕೂರು: ಮುಂಬದಿಯ ಟಯರ್ ಸಿಡಿದು ಕರ್ನಾಟಕ ಸಾರಿಗೆ ಬಸ್ಸು ಡಿವೈಡರಿಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಗಾಯಗೊಂಡಿರುವ ಘಟನೆ ಎಕ್ಕೂರು-ಜೆಪ್ಪು ನಡುವೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬುಧವಾರ ಸಂಜೆ ವೇಳೆ ಸಂಭವಿಸಿದೆ.
ಕಾಸರಗೋಡಿನಿಂದ ಮಂಗಳೂರಿಗೆ ತೆರಳುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ನ ಮುಂಬದಿಯ ಟಯರ್ ಸಿಡಿದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಬಸ್ಸು ಡಿವೈಡರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಡಿವೈಡರ್ ಸಂಪೂರ್ಣ ಕೆಡವಿದ್ದು, ಗಾಯಾಳು ಮಂಗಳೂರು ನಿವಾಸಿ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೆಎಸ್ಆರ್ಟಿಸಿ ವಿರುದ್ಧ ಆಕ್ರೋಶ: ಕಾಸರಗೋಡು ಕಡೆಗೆ ತೆರಳುವ ಕೆಎಸ್ ಆರ್ ಟಿಸಿ ಸಿಬ್ಬಂದಿ ಸಮಯ ಪಾಲನೆಗಾಗಿ ಮಿತಿಮೀರಿದ ವೇಗದಲ್ಲಿ ಬಸ್ಸನ್ನು ಕೊಂಡೊಯ್ಯುತ್ತಿದ್ದಾರೆ. ಅಧಿಕಾರಿಗಳ ಆದೇಶದಂತೆ ಸಿಬ್ಬಂದಿ ಮಿತಿಮೀರಿದ ವೇಗದಲ್ಲಿ ಬಸ್ಸನ್ನು ಚಲಿಸಿದರೂ, ಬಸ್ಸುಗಳ ತಾಂತ್ರಿಕ ವ್ಯವಸ್ಥೆಯ ಗೋಜಿಗೆ ಹೋಗುತ್ತಿಲ್ಲ. ಇದರಿಂದ ಅಮಾಯಕ ಸಿಬ್ಬಂದಿ ಹಾಗೂ ಪ್ರಯಾಣಿಕರು ಜೀವ ತೆತ್ತುವ ಪರಿಸ್ಥಿತಿ ಬಂದೊದಗಿದೆ ಅನ್ನುವ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.

















