ಭಾರತೀಯ ಜನತಾ ಪಾರ್ಟಿ ಮಂಗಳೂರು ವಿಧಾನ ಸಭಾ ಕ್ಷೇತ್ರದ ವಿಶೇಷ ಮತದಾರ ಪಟ್ಟಿ ಪರಿಷ್ಕರಣೆ (SIR) ಮತಗಟ್ಟೆ BLA 2 ಕಾರ್ಯಾಗಾರ ಬಂಟರ ಭವನ ಅಸೈಗೋಳಿಯಲ್ಲಿ ನಡೆಯಿತು.

ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾದ ಸತೀಶ್ ಕುಂಪಲ ಕಾರ್ಯಗಾರವನ್ನು ಉದ್ಘಾಟನೆ ಮಾಡಿ ಕಾರ್ಯಗಾರದ ಮಹತ್ವವನ್ನು ತಿಳಿಸಿದರು.ಮಂಡಲ ಅಧ್ಯಕ್ಷ ಜಗಧೀಶ್ ಆಳ್ವಾ ಕುವೆತ್ತಬೈಲ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ ಪ್ರಸ್ತಾವಿಕವಾಗಿ ಮಾತನಾಡಿದರು.
ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರು ಸೂಕ್ತ ಸಲಹೆ ಸೂಚನೆ ನೀಡಿ, ಮಂಡಲದ BLA -1 ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು BLA-2 ಗಳಾಗಿ ಜವಾಬ್ದಾರಿ ವಹಿಸಿದ ಎಲ್ಲರೂ ತಮ್ಮ ತಮ್ಮ ಕೆಲಸ ಕಾರ್ಯಗಳನ್ನು ಪ್ರಾಮಾಣಿಕವಾಗಿ ಮಾಡಬೇಕು ಎಂದರು.
ಮಂಡಲದ ಪ್ರಭಾರಿ ದಿನೇಶ್ ಅಮ್ಮ್ಟೂರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಮೋಹನ್ ರಾಜ್ ಕೆ. ಆರ್ ಸ್ವಾಗತಿಸಿದರು, ಮಂಡಲದ ಉಪಾಧ್ಯಕ್ಷರಾದ ಯಶವಂತ ದೇರಾಜೆ ಧನ್ಯವಾದ ನೀಡಿದರು.
ಮಂಡಲದ ಪ್ರಧಾನ ಕಾರ್ಯದರ್ಶಿ ದಯಾನಂದ ತೊಕ್ಕೊಟ್ಟು ಮತ್ತು ಉಪಾಧ್ಯಕ್ಷರಾದ ಮನೋಜ್ ಆಚಾರ್ಯ ನಾಣ್ಯ ಕಾರ್ಯಕ್ರಮ ನಿರೂಪಿಸಿದರು.



