Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
suddi

ಮುಸ್ಲಿಮ್ ಸಮುದಾಯದ ವಿರುದ್ದ ದ್ವೇಷ ಭಾವನೆ ಜೀವಂತವಾಗಿರುವುದಕ್ಕೆ ಏನು ಕಾರಣ…??!

UllalaVaniBy UllalaVaniOctober 28, 2025No Comments4 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

AI Generated Hate in India ಅಥವಾ ‘ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದ ಮೂಲಕ ಭಾರತದಲ್ಲಿ ಬಿತ್ತಲಾಗುತ್ತಿರುವ ದ್ವೇಷ..’ ಎಂಬ ಶೀರ್ಷಿಕೆಯಲ್ಲಿ ಇತ್ತೀಚೆಗೆ ಒಂದು ವರದಿ ಬಿಡುಗಡೆಗೊಂಡಿತ್ತು. ಸೆಂಟರ್ ಫಾರ್ ದ ಸ್ಟಡಿ ಆಫ್ ಆನ್‌ಲೈನ್ ಹೇಟ್ ಎಂಬ ಸಂಸ್ಥೆಯು ಬಿಡುಗಡೆಗೊಳಿಸಿದ ಈ ವರದಿಯಲ್ಲಿ ದಂಗುಬಡಿಸುವ ಹಲವು ಮಾಹಿತಿಗಳಿದ್ದವು. ಮುಸ್ಲಿಮ್ ಸಮುದಾಯದ ವಿರುದ್ಧ ದ್ವೇಷ ಭಾವನೆ ಜೀವಂತವಾಗಿರುವುದಕ್ಕೆ ಏನು ಕಾರಣ ಎಂಬ ಬಗ್ಗೆ ಹುಡುಕಾಟವನ್ನು ನಡೆಸಬಯಸುವ ಯಾರಿಗೇ ಆಗಲಿ ಈ ವರದಿಯಲ್ಲಿರುವ ಅಂಶಗಳು ಬಹಳ ಪ್ರಯೋಜನಕಾರಿಯಾಗಬಲ್ಲವು.

2023ರಿಂದ 2025ರ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೆಯಾಗಿರುವ ವೀಡಿಯೋ ಮತ್ತು ಚಿತ್ರಗಳನ್ನು ಈ ಸಂಸ್ಥೆಯು ಪರಿಶೀಲನೆಗೆ ಒಡ್ಡಿತು. ಮುಖ್ಯವಾಗಿ ಇನ್‌ಸ್ಟಾಗ್ರಾಮ್, ಎಕ್ಸ್ ಜಾಲತಾಣ ಮತ್ತು ಫೇಸ್‌ಬುಕ್‌ಗಳ ಮೇಲೆ ಗಮನಹರಿಸಿದ ಸಂಸ್ಥೆಯು ಈ ಜಾಲತಾಣಗಳಲ್ಲಿ ಹಂಚಿಕೆಯಾಗುತ್ತಿರುವ ವೀಡಿಯೋಗಳು ಮತ್ತು ಚಿತ್ರಗಳಲ್ಲಿ ಎಐ ತಂತ್ರಜ್ಞಾನದ ಮೂಲಕ ಸೃಷ್ಟಿಸಲಾದವುಗಳು ಎಷ್ಟಿವೆ ಎಂಬುದರ ಪತ್ತೆಗೆ ತೊಡಗಿತು. ಒಟ್ಟು 297 ಸಾಮಾಜಿಕ ಜಾಲತಾಣಗಳಲ್ಲಿ 1326ಕ್ಕಿಂತಲೂ ಅಧಿಕ ಎಐ ವೀಡಿಯೋ ಮತ್ತು ಚಿತ್ರಗಳು ಹಂಚಿಕೆಯಾಗಿರುವುದನ್ನು ಸಂಸ್ಥೆ ಕಂಡುಕೊಂಡಿತು. ಇವುಗಳಿಗೆ 27 ಮಿಲಿಯನ್‌ಗಿಂತಲೂ ಅಧಿಕ ಎಂಗೇಜ್‌ಮೆಂಟ್‌ಗಳನ್ನು ಅದು ಪತ್ತೆಹಚ್ಚಿತು.

ಇವುಗಳಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ 1.8 ಮಿಟಿಲಿಯನ್ ಎಂಗೇಜ್‌ಮೆಂಟ್‌ಗಳಿದ್ದರೆ ಎಕ್ಸ್ ಜಾಲತಾಣದಲ್ಲಿ 7,72,400 ಎಂಗೇಜ್‌ಮೆಂಟ್‌ಗಳಿದ್ದುವು. ಫೇಸ್‌ಬುಕ್‌ನಲ್ಲಿ 1,43,200 ಎಂಗೇಜ್‌ಮೆಂಟ್‌ಗಳು. ಮಿಲಿಯನ್‌ಗಟ್ಟಲೆ ವೀಕ್ಷಣೆಗಳು ಮತ್ತು ಅಸಂಖ್ಯ ಸಂಖ್ಯೆಯಲ್ಲಿ ಹಂಚಿಕೆಗಳು ನಡೆದಿದ್ದುವು. ಪ್ರತಿಕ್ರಿಯೆಗಳಂತೂ ಕೇಳುವುದೇ ಬೇಡ. ಈ ವೀಡಿಯೋಗಳು ಮತ್ತು ಚಿತ್ರಗಳಲ್ಲಿ ಅತೀ ಹೆಚ್ಚು ಮುಸ್ಲಿಮ್ ಮಹಿಳೆಯರಿಗೆ ಸಂಬಂಧಿಸಿತ್ತು. ಮುಸ್ಲಿಮ್ ಮಹಿಳೆಯರ ಲೈಂಗಿಕ ಚಿತ್ರಣಗಳನ್ನು ಅತ್ಯಂತ ಕೆಟ್ಟದಾಗಿ ಮತ್ತು ಅತ್ಯಂತ ಅವಮಾನಕಾರಿಯಾಗಿ ಇವುಗಳಲ್ಲಿ ಬಿಂಬಿಸಲಾಗಿತ್ತು.

ನಿಜವಾಗಿ, ಇಸ್ಲಾಮೋಫೋಬಿಕ್ ಅಥವಾ ಇಸ್ಲಾಮ್‌ನ ಬಗ್ಗೆ ಭೀತಿಯನ್ನು ಹರಡುವ ಅತ್ಯಂತ ವ್ಯವಸ್ಥಿತ ಜಾಲವೊಂದು ಯೋಜನಾಬದ್ಧವಾಗಿ ಕೆಲಸ ಮಾಡುತ್ತಿರುವುದನ್ನು ಈ ಅಧ್ಯಯನ ಬಹಳ ಪರಿಣಾಮಕಾರಿಯಾಗಿ ಬೆಳಕಿಗೆ ತಂದಿದೆ. ಮುಸ್ಲಿಮರನ್ನು ಕೆಟ್ಟವರಂತೆ, ಹೆಣ್ಣುಬಾಕರಂತೆ, ಹಿಂದೂ ವಿರೋಧಿಗಳಂತೆ, ದೇಶದ್ರೋಹಿಗಳಂತೆ, ಅನ್ನಕ್ಕೆ ಉಗುಳುವವರಂತೆ, ಹೆಚ್ಚು ಹೆಚ್ಚು ಮಕ್ಕಳನ್ನು ಹುಟ್ಟಿಸುವವರಂತೆ, ಬಹುಪತ್ನಿವಲ್ಲಭರಂತೆ, ಬಹುತ್ವವನ್ನು ಒಳಗೊಳ್ಳದವರಂತೆ, ಕೊಳಕರಂತೆ.. ಇತ್ಯಾದಿ ಇತ್ಯಾದಿ ರೂಪದಲ್ಲಿ ಈ 1326 ವೀಡಿಯೋ ಮತ್ತು ಚಿತ್ರಗಳು ಚಿತ್ರಿಸಿರುವುದಾಗಿ ಈ ಅಧ್ಯಯನವು ಕಂಡುಕೊಂಡಿದೆ. ಲವ್ ಜಿಹಾದ್, ಲ್ಯಾಂಡ್ ಜಿಹಾದ್ ಮುಂತಾದುವುಗಳ ಭಯವನ್ನು ವ್ಯವಸ್ಥಿತವಾಗಿ ಎಐ ತಂತ್ರಜ್ಞಾನದ ಮೂಲಕ ಬಿತ್ತಲಾಗುತ್ತಿದೆ. ಮುಸ್ಲಿಮರ ವಿರುದ್ಧ ದ್ವೇಷವನ್ನು ಹರಡಲಾಗುತ್ತಿದೆ.

ಮುಖ್ಯವಾಗಿ, ಈ ಸುಳ್ಳಿನ ಬೃಹತ್ ಪ್ರಚಾರ ಯುದ್ಧದ ಹಿಂದೆ ಮೂರು ಬಲಪಂಥೀಯ ಮಾಧ್ಯಮಗಳ ಪಾತ್ರವನ್ನು ಸಮೀಕ್ಷೆಯಲ್ಲಿ ವಿಶೇಷವಾಗಿ ಎತ್ತಿ ಹೇಳಲಾಗಿದೆ. ಓಪ್ ಇಂಡಿಯಾ, ಸುದರ್ಶನ್ ಟಿವಿ ಚಾನೆಲ್ ಮತ್ತು ಪಾಂಚಜನ್ಯಗಳು ಈ ಅಪಪ್ರಚಾರಕ್ಕೆ ದೊಡ್ಡಮಟ್ಟದಲ್ಲಿ ಕೊಡುಗೆಯನ್ನು ನೀಡುತ್ತಿವೆ ಎಂದೂ ಸಮೀಕ್ಷೆ ಕಂಡುಕೊಂಡಿದೆ. ಒಂದುರೀತಿಯಲ್ಲಿ,

ಎಐ ತಂತ್ರಜ್ಞಾನವು 28 ವರ್ಷಕ್ಕಿಂತ ಕೆಳಗಿನ ಯುವ ತಲೆಮಾರಿನ ಪಾಲಿಗೆ ಅತ್ಯಂತ ಪರಿಚಿತವೇ ಹೊರತು ಇದಕ್ಕಿಂತ ಮೇಲಿನ ಪ್ರಾಯದ ಬಹುದೊಡ್ಡ ಜನಸಮೂಹವು ಇದರ ಬಗ್ಗೆ ಸ್ಪಷ್ಟ ತಿಳುವಳಿಕೆಯನ್ನು ಹೊಂದಿರುವುದು ಬಹಳ ಕಡಿಮೆ. ಈ ತಂತ್ರಜ್ಞಾನದ ಮೂಲಕ ವ್ಯಕ್ತಿಯೋರ್ವ ಹೇಳಿಯೇ ಇರದ ಅಥವಾ ಎಲ್ಲೂ ಘಟಿಸಿಯೇ ಇರದ ಸಂಗತಿಯನ್ನು ಘಟಿಸಿದಂತೆ ಮತ್ತು ಹೇಳಿ ದಂತೆ ಬಿಂಬಿಸಲು ಸಾಧ್ಯವಿದೆ. ಉದಾಹರಣೆಗೆ, ಅಫಘಾನ್ ವಿದೇಶ ಸಚಿವ ಮುತ್ತಕಿ ಅವರ ವೀಡಿಯೋ. ಅವರ ಭಾರತ ಭೇಟಿಗೆ ಸಾರ್ವಜನಿಕವಾಗಿ ತೀವ್ರ ವಿರೋಧ ವ್ಯಕ್ತವಾಯಿತು. ಅವರಿಗೆ ಕೆಂಪು ಹಾಸಿನ ಸ್ವಾಗತ ಕೋರಿದ ಮೋದಿ ಸರಕಾರವನ್ನು ಅವರದೇ ಬೆಂಬಲಿಗರು ಕಟಕಟೆಯಲ್ಲಿ ನಿಲ್ಲಿಸಿದರು. ತಾಲಿಬಾನನ್ನು ಮೂಲಭೂತವಾದಿ ಎಂದು ಮೊನ್ನೆವರೆಗೆ ಈ ಸರಕಾರದ ಪ್ರಮುಖರೇ ಕರೆದಿರುವುದನ್ನು ಪಕ್ಷಭೇದವಿಲ್ಲದೇ ಜನರು ನೆನಪಿಸಿದರು.

4 ವರ್ಷಗಳ ಹಿಂದೆ ಅಫಘಾನನ್ನು ತಾಲಿಬಾನ್ ವಶಪಡಿಸಿಕೊಂಡಾಗ ಅದನ್ನು ಸ್ವಾಗತಿಸಿದ ಸಮಾಜವಾದಿ ಪಕ್ಷದ ಸಂಸದ ಶಫೀಕರ‍್ರಹ್ಮಾನ್ ಮೇಲೆ ಯೋಗಿ ಆದಿತ್ಯನಾಥ್ ಸರಕಾರ ದೇಶದ್ರೋಹ ಪ್ರಕರಣ ದಾಖಲಿಸಿರುವುದನ್ನು ಜನರು ಉಲ್ಲೇಖಿಸಿದರು. ಅಲ್ಲದೇ, ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಪಟ್ಟಿಯಲ್ಲಿ ಈ ಮುತ್ತಕಿ ಈಗಲೂ ಭಯೋತ್ಪಾದಕ ಎಂದೇ ಗುರುತಿಸಿಕೊಂಡಿರುವುದನ್ನು ಎತ್ತಿ ಹೇಳಿದರು. ಮೊನ್ನೆಮೊನ್ನೆರೆಗೆ ಮೂಲಭೂತವಾಗಿಯಾಗಿದ್ದ ತಾಲಿಬಾನ್ ಒಮ್ಮಿಂದೊಮ್ಮೆಲೇ ಸರ್ವಗುಣ ಸಂಪನ್ನವಾದುದು ಹೇಗೆ ಎಂದು ಪ್ರಶ್ನಿಸಿದರು. ಇಂಥ ಸಮಯದಲ್ಲಿ ಮುತ್ತಕಿಯ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿತು. ‘ನಾವು ಅಫಘಾನ್‌ನಲ್ಲಿ ಭಗವಾನ್ ಶಿವ ಮತ್ತು ವಿಷ್ಣುವಿನ ಮಂದಿರ ಕಟ್ಟುತ್ತೇವೆ, ಜೈಶ್ರೀರಾಮ್ ಎಂದು ಕೂಗುತ್ತೇವೆ, ನಮ್ಮನ್ನು ಬೆಂಬಲಿಸಿದ ಪ್ರಧಾನಿ ಮೋದಿಗೆ ಕೃತಜ್ಞತೆಗಳು..’ ಎಂದು ಆ ವೀಡಿಯೋದಲ್ಲಿ ಮುತ್ತಕಿ ಹೇಳಿದರು.

ಈ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಪ್ರಮಾಣದಲ್ಲಿ ಹಂಚಿಕೆ ಮಾಡಲಾಯಿತು. ವಾಟ್ಸಪ್‌ಗಳಲ್ಲೂ ಮಿತಿಯಿಲ್ಲದೇ ಶೇರ್‌ಗಳಾದುವು. ಮೋದಿ ಸರಕಾರ ಹೇಗೆ ಅಫಘಾನ್‌ನ ತಾಲಿಬಾನನ್ನೇ ಮಣಿಸಿದೆ ಮತ್ತು ಜೈಶ್ರೀರಾಮ್ ಎಂದು ಅವರ ಬಾಯಿಂದಲೇ ಕೂಗಿಸಿದೆ ಎಂದು ಬೆನ್ನು ತಟ್ಟಿಕೊಳ್ಳಲಾಯಿತು. ನಿಜ ಏನೆಂದರೆ,

ಇದು ಎಐ ವೀಡಿಯೋ. ಮುತ್ತಕಿಯವರ ತುಟಿ ಚಲನೆಗೆ ಹೊಂದುವಂತೆ ಮತ್ತು ಅವರದೇ ಧ್ವನಿಯನ್ನು ಹೋಲುವಂತೆ ತಂತ್ರಜ್ಞಾನದ ಮೂಲಕ ಈ ವೀಡಿಯೋವನ್ನು ಕೃತಕವಾಗಿ ತಯಾರಿಸಲಾಗಿದೆ. ಈ ತಂತ್ರಜ್ಞಾನದ ಬಗ್ಗೆ ಅರಿವಿಲ್ಲದವರು ಅದನ್ನು ಮುತ್ತಕಿಯವರದ್ದೇ ವೀಡಿಯೋ ಎಂದೇ ಖಂಡಿತ ನಂಬಿಯಾರು. ಅಷ್ಟೊಂದು ಚೆನ್ನಾಗಿ ಮತ್ತು ನಿಜ ಎಂದೇ ನಂಬುವ ರೀತಿಯಲ್ಲಿ ಎಐ ತಂತ್ರಜ್ಞಾನದ ಮೂಲಕ ವೀಡಿಯೋವನ್ನು ತಯಾರಿಸಲು ಸಾಧ್ಯವಾಗುತ್ತಿದೆ. ಅಷ್ಟಕ್ಕೂ,

ಮುತ್ತಕಿಯಂಥ ಓರ್ವ ಸಚಿವರನ್ನೇ ಈ ರೀತಿಯಾಗಿ ವಿಕೃತಗೊಳಿಸಬಹುದು ಎಂದಾದರೆ ಮತ್ತು ಕಾನೂನಿನ ಭಯವಿಲ್ಲದೇ ವೀಡಿಯೋ ತಯಾರಿಸಲಾಗುತ್ತದೆ ಎಂದಾದರೆ, ಇತರರ ಬಗ್ಗೆ ಹೇಳುವುದಕ್ಕಾದರೂ ಏನಿದೆ? ಮುಸ್ಲಿಮ್ ಸಮುದಾಯವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದಕ್ಕಾಗಿ ಹೇಗೆಲ್ಲ ಮತ್ತು ಏನೆಲ್ಲ ವೀಡಿಯೋಗಳನ್ನು ಇವರು ತಯಾರಿಸಿರಬಹುದು? ಇಂಥ ವೀಡಿಯೋಗಳಿಗೆ ಈ ದೇಶದಲ್ಲಿ ಬಹುದೊಡ್ಡ ವೀಕ್ಷಕರಿದ್ದಾರೆ. ಅವರಿಗೆ ಇಂಥ ವೀಡಿಯೋ ಮತ್ತು ಚಿತ್ರಗಳ ಅಸಲಿಯತ್ತು ಏನೆಂದೇ ಗೊತ್ತಿರುವುದಿಲ್ಲ. ವಾಟ್ಸಪ್‌ಗಳಲ್ಲಿ ಬರುವ ಮತ್ತು ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಸಿಗುವ ಇಂಥ ವೀಡಿಯೋ ಮತ್ತು ಚಿತ್ರಗಳನ್ನು ಅವರು ನಿಜ ಎಂದೇ ನಂಬಿ ವೀಕ್ಷಿಸುತ್ತಿರುತ್ತಾರೆ. ಇತರರಿಗೆ ಫಾರ್ವರ್ಡ್ ಮಾಡುತ್ತಿರುತ್ತಾರೆ. ಮಾತ್ರವಲ್ಲ, ಇಂಥವುಗಳಿಂದ ಪ್ರೇರಿತರಾಗಿ ಅಪಾರ ಧರ್ಮದ್ವೇಷವನ್ನು ಬೆಳೆಸಿಕೊಂಡಿರುತ್ತಾರೆ.

ಸದ್ಯ, ತಂತ್ರಜ್ಞಾನ ಆಧಾರಿತ ದ್ವೇಷ ಚಟುವಟಿಕೆಯನ್ನು ಪತ್ತೆಹಚ್ಚುವ, ತಡೆಯುವ ಮತ್ತು ಕಾನೂನು ಕ್ರಮಗಳಿಗೆ ಒಳಪಡಿಸುವ ತುರ್ತು ಕ್ರಮಗಳು ಆಗಬೇಕಿದೆ. ಮುಸ್ಲಿಮರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದರಿಂದ ಈ ದೇಶದ ನಿಜವಾದ ಸಮಸ್ಯೆಗಳನ್ನು ಜನರ ಕಣ್ಣಿನಿಂದ ಮರೆಸಿಡಬಹುದು ಎಂದು ನಂಬಿರುವ ವರ್ಗವೊಂದು ಈ ಕುಕೃತ್ಯದಲ್ಲಿ ತೊಡಗಿಸಿಕೊಂಡಿದೆ. ರಾಜಕೀಯ ಅಧಿಕಾರ ಮತ್ತು ಸಾಮಾಜಿಕ ಹಿಡಿತ ಸಾಧಿಸುವುದೇ ಇವರ ಮುಖ್ಯ ಗುರಿ. ಅಧಿಕಾರ ಎಂದೂ ಕೈತಪ್ಪದೇ ಇರಬೇಕಾದರೆ ಮತ್ತು ಸಮಾಜದ ಮೇಲಿನ ಹಿಡಿತಕ್ಕೆ ಯಾವುದೇ ಸವಾಲು ಎದುರಾಗದೇ ಇರಬೇಕಾದರೆ ಮುಸ್ಲಿಮ್ ಭೂತವನ್ನು ಜೀವಂತವಾಗಿ ಇಟ್ಟುಕೊಂಡರೆ ಸಾಕು ಎಂಬುದಾಗಿ ಅದು ಭಾವಿಸಿದೆ.

ಇಸ್ಲಾಮನ್ನು ಭೀತಿಕಾರಕವಾಗಿ ಮತ್ತು ಮುಸ್ಲಿಮರನ್ನು ಹಿಂದೂಗಳ ವೈರಿಗಳಾಗಿ ಬಿಂಬಿಸುತ್ತಾ ಹೋದರೆ ಜನರು ಅಸ್ತಿತ್ವ ಭಯಕ್ಕೆ ಒಳಗಾಗುತ್ತಾರೆ ಮತ್ತು ತಮ್ಮ ಅಣತಿಯಂತೆ ನಡಕೊಳ್ಳುತ್ತಾರೆ ಎಂಬುದನ್ನು ಈ ವರ್ಗ ತಿಳಿದುಕೊಂಡಿದೆ. ಈ ಕಾರಣದಿಂದಲೇ ಇದೀಗ ಈ ವರ್ಗ ಎಐ ತಂತ್ರಜ್ಞಾನದ ಮೊರೆ ಹೋಗಿದೆ. ಸೋಶಿಯಲ್ ಮೀಡಿಯಾದಲ್ಲಿ ತನಗಿರುವ ಹಿಡಿತವನ್ನು ಬಳಸಿಕೊಂಡು ಮುಸ್ಲಿಮ್ ದ್ವೇಷ ಪ್ರಚಾರಕ್ಕೆ ಇಳಿದಿದೆ. ಸೆಂಟರ್ ಫಾರ್ ದಿ ಸ್ಟಡಿ ಆಫ್ ಅನ್‌ಲೈನ್ ಹೇಟ್ ಸಂಸ್ಥೆಯು ಬಿಡುಗಡೆಗೊಳಿಸಿದ ವರದಿಯು ಈ ಸತ್ಯವನ್ನೇ ಹೇಳುತ್ತದೆ.

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಗ್ಯಾಸ್ ಮಾಫಿಯಾ ವಿರುದ್ಧ ಕಠಿಣ ಕ್ರಮ ಅಗತ್ಯ – ಅಡುಗೆ ಅನಿಲವನ್ನು ಮೂಲಭೂತ ಹಕ್ಕಾಗಿ ಘೋಷಿಸಲಿ

June 26, 2026

ಮಂಗಳೂರು: ಡ್ರಗ್ ಸರಬರಾಜು ಮಾಡುತ್ತಿದ್ದ ಓರ್ವ ಆರೋಪಿಯ ಸೆರೆ

June 26, 2026

ಮಂಗಳೂರು ವಿವಿಯ ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠಕ್ಕೆ ವಕೀಲ ಮೋಹನರಾಜ್ ಕೆ.ಆರ್. ನೂತನ ಸದಸ್ಯರಾಗಿ ನೇಮಕ

June 26, 2026

Comments are closed.

Advertise
ಸಂಪರ್ಕಿಸಿ

ಕರ್ನಾಟಕದಾದ್ಯಂತ ಆರೋಗ್ಯ ಇಲಾಖೆಯಲ್ಲಿ ಮೆಗಾ ನೇಮಕಾತಿ: ಸಾರ್ವಜನಿಕ ಆರೋಗ್ಯ ಸೇವೆ ಬಲಪಡಿಸಲು ಮಹತ್ವದ ಹೆಜ್ಜೆ

June 11, 2026

ರಾಜ್ಯದಲ್ಲಿ ಖಾಸಗಿ ಅಸ್ಪತ್ರೆಯಲ್ಲಿ ಆಯುಷ್ಮಾನ್ ಯೋಜನೆ ಸಮರ್ಪಕ ಜಾರಿಗೆ ಜ್ಯಾರಿ ಆಗದಿದ್ದರೆ ಜಿಲ್ಲೆಯ ಅರೋಗ್ಯಧಾರಿಗಳ ಮೇಲೆ ಕ್ರಮ :- ಅರೋಗ್ಯ ಸಚಿವ ಯು.ಟಿ ಖಾದರ್

June 9, 2026

ಫೀಲ್ಡ್ ಗೆ ಇಳಿದ ಯು.ಟಿ. ಖಾದರ್ – ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ಕ್ಲಾಸ್…!

June 5, 2026

ವೆನ್ಲಾಕ್ ಆಸ್ಪತ್ರೆಯಲ್ಲಿ ಮನೋವೈದ್ಯರು ಮತ್ತು ಕ್ಲಿನಿಕಲ್ ಸೈಕಾಲಜಿಸ್ಟ್‌ಗಳ ತೀವ್ರ ಕೊರತೆ – ಬಡ ರೋಗಿಗಳ ನಿರ್ಲಕ್ಷ್ಯ ಯಾಕೆ ಎಂದು ಸಾರ್ವಜನಿಕರ ಪ್ರಶ್ನೆ

May 26, 2026
All News

ಬೀರಿ ಜಂಕ್ಷನ್‌ ತರಕಾರಿ ಅಂಗಡಿ ಮೇಲೆ ಬಿದ್ದ ಮರ

By UllalaVaniJune 29, 20260

ಬೀರಿ: ಕೋಟೆಕಾರು ಬೀರಿ ಜಂಕ್ಷನ್‌ ಹೆದ್ದಾರಿ ಬದಿಯಲ್ಲೇ ಇರುವ ತರಕಾರಿ ಅಂಗಡಿ ಮೇಲೆ ಬೃಹತ್‌ ಗಾತ್ರದ ಆಲದ ಮರದ ಕೊಂಬೆಯೊಂದು…

ಜೀವನದ ಹಾಡು ನಿಲ್ಲಿಸಿದ ಜ್ಯೂನಿಯರ್‌ ಎಸ್.ಪಿ ಖ್ಯಾತಿಯ ಚಂದ್ರಹಾಸ್‌ ಸುವರ್ಣ

June 29, 2026

ನೂರುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದ್ರಸದಲ್ಲಿ ಸಮವಸ್ತ್ರ ಹಾಗೂ ಗುರುತಿನ ಚೀಟಿ ವಿತರಣಾ ಕಾರ್ಯಕ್ರಮ

June 29, 2026

ಬೀರಿ ಸಾರ್ವಜನಿಕ ಶ್ರೀ ಗಣೇಶ ಸೇವಾ ಸಮಿತಿ ಅಧ್ಯಕ್ಷರಾಗಿ ರಾಜೀವಿ ಕೆಂಪುಮಣ್ಣು ಆಯ್ಕೆ

June 29, 2026
1 2 3 … 1,990 Next
Automatic YouTube Gallery

ದಿ.ಅಮೃತ ಸೋಮೇಶ್ವರ ಸಂಸ್ಮರಣಾ ಕಾರ್ಯಕ್ರಮ

ಪರಿಜ್ಞಾನ ಪದವಿಪೂರ್ವ ಕಾಲೇಜು, ಸೋಮೇಶ್ವರ ಸಹಯೋಗದೊಂದಿಗೆ
ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ(ರಿ.) ವತಿಯಿಂದ
ದಿ.ಅಮೃತ ಸೋಮೇಶ್ವರ ಸಂಸ್ಮರಣಾ ಕಾರ್ಯಕ್ರಮ
ಭಾಷಣ ಸ್ಪರ್ಧೆ, ಬಹುಭಾಷಾ ಕವಿಗೋಷ್ಠಿ, ಕಾವ್ಯಗಾಯನ

📍 Ullal | Dakshina Kannada | Coastal Karnataka News Update
ಉಳ್ಳಾಲ, ...
ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ದಿ.ಅಮೃತ ಸೋಮೇಶ್ವರ ಸಂಸ್ಮರಣಾ ಕಾರ್ಯಕ್ರಮ
Now Playing
ದಿ.ಅಮೃತ ಸೋಮೇಶ್ವರ ಸಂಸ್ಮರಣಾ ಕಾರ್ಯಕ್ರಮ
ಪರಿಜ್ಞಾನ ಪದವಿಪೂರ್ವ ಕಾಲೇಜು, ಸೋಮೇಶ್ವರ ಸಹಯೋಗದೊಂದಿಗೆ ಉಳ್ಳಾಲ ವೀರರಾಣಿ ...
ಪರಿಜ್ಞಾನ ಪದವಿಪೂರ್ವ ಕಾಲೇಜು, ಸೋಮೇಶ್ವರ ಸಹಯೋಗದೊಂದಿಗೆ
ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ(ರಿ.) ವತಿಯಿಂದ
ದಿ.ಅಮೃತ ಸೋಮೇಶ್ವರ ಸಂಸ್ಮರಣಾ ಕಾರ್ಯಕ್ರಮ
ಭಾಷಣ ಸ್ಪರ್ಧೆ, ಬಹುಭಾಷಾ ಕವಿಗೋಷ್ಠಿ, ಕಾವ್ಯಗಾಯನ

📍 Ullal | Dakshina Kannada | Coastal Karnataka News Update
ಉಳ್ಳಾಲ, ...
ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಕೋಟೆಕಾರು ರಾಮಾಶ್ರಯ ರಸ್ತೆ ಉದ್ಘಾಟಿಸಿದ ಹರ್ಷರಾಜ್‌ ಮುದ್ಯ
Now Playing
ಕೋಟೆಕಾರು ರಾಮಾಶ್ರಯ ರಸ್ತೆ ಉದ್ಘಾಟಿಸಿದ ಹರ್ಷರಾಜ್‌ ಮುದ್ಯ
ಒಂದೇ ರಸ್ತೆ ಎರಡು ಬಾರಿ ಉದ್ಘಾಟನೆ ಬಿಜೆಪಿ , ಕೋಟೆಕಾರು ಪ.ಪಂ ಅಧ್ಯಕ್ಷರ ವಿರುದ್ಧ ...
ಒಂದೇ ರಸ್ತೆ ಎರಡು ಬಾರಿ ಉದ್ಘಾಟನೆ

ಬಿಜೆಪಿ , ಕೋಟೆಕಾರು ಪ.ಪಂ ಅಧ್ಯಕ್ಷರ ವಿರುದ್ಧ ಪ್ರತ್ಯಾರೋಪ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ...
ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version