Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
UllalavaniUllalavani
suddi

ಇಂದಿನ ಭವಿಷ್ಯ. ಈ ದಿನ ಯಾವೆಲ್ಲಾ ರಾಶಿಗಳ ಭವಿಷ್ಯ ಹೇಗಿದೆ …?!

UllalaVaniBy UllalaVaniOctober 23, 2025No Comments5 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಬೆಂಗಳೂರು, ಅ.23: ಮೇಷ ರಾಶಿ: ಲೌಕಿಕ ವಿಚಾರದಲ್ಲಿ ಆಸಕ್ತಿ ಕಡಿಮೆಯಾಗಲಿದೆ. ಪ್ರಭಾವೀ ವ್ಯಕ್ತಿಗಳ ಪರಿಣಾಮವು ನಿಮ್ಮ ಮೇಲೆ ಗಾಢವಾಗಿರುವುದು. ಬರಬೇಕಾದ ಹಣವನ್ನು ನೀವು ಪಡೆದುಕೊಳ್ಳುವಿರಿ. ನಿಮ್ಮ ಇಂದಿನ ಕೆಲಸಗಳು ಅಡೆತಡೆ ಇಲ್ಲದೇ ಸಾಗುವುದು. ವಾಹನ ಖರೀದಿಗೆ ಹಣವನ್ನು ಹೊಂದಿಸುವಿರಿ. ಅಪಘಾತ ಭೀತಿಯು ನಿಮ್ಮನ್ನು ಹೆಚ್ಚು ಕಾಡುವುದು. ಎಂತಹ ನಷ್ಟವನ್ನೂ ನೀವು ಆತ್ಮಸ್ಥೈರ್ಯದಿಂದ ಎದುರಿಸಬಲ್ಲಿರಿ. ನಿಮಗೆ ಸಂಬoಧವಿಲ್ಲದೇ ಇರುವ ವಿಚಾರಕ್ಕೆ ಯೋಚಿಸುವಿರಿ. ನಿಮ್ಮ ಬುದ್ಧಿಯು ನಕಾರಾತ್ಮಕ ವಿಷಯಕ್ಕೆ ಹೆಚ್ಚು ಸ್ಪಂದಿಸುವುದು. ದೂರದಲ್ಲಿನ ಸಂಗಾತಿಯಿAದ ನಿಮ್ಮ ಬಗ್ಗೆ ದೂರು. ಸ್ನೇಹಕ್ಕೆ ನೀವು ಬೆಲೆಯನ್ನು ಕೊಡುವಿರಿ. ಬಂಧುಗಳ ಭೇಟಿಗೆ ದೂರಪ್ರಯಾಣವನ್ನು ಮಾಡಲಿದ್ದೀರಿ. ರಾಜಕೀಯ ವಿಚಾರಗಳಿಗೆ ಹೆಚ್ಚು ಸಮಯವನ್ನು ಕೊಡುವಿರಿ. ಪರಿಚಿತರ ಬೆಳವಣಿಗೆಯನ್ನು ಸಹಿಸಲಾಗದು. ಮೇಲಧಿಕಾರಿಗಳ ಭೇಟಿಯಾಗವ ಸಾಧ್ಯತೆ ಇದೆ. ನೀವು ಕೆಲವು ಮುಖ್ಯವಾಹಿನಿಯಿಂದ ಹಿಂದೆ ಸರಿಯುವುದು ಉತ್ತಮ.

ವೃಷಭ ರಾಶಿ: ಬೇರೆ ಕಂಪೆನಿಯಿAದ ಉದ್ಯೋಗಕ್ಕೆ ಆಪರ್ ಬರಬಹುದು. ಇರುವುದನ್ನು ಬಿಡುವ ಗೊಂದಲವಿರುವುದು. ಸತ್ಯದ ನಡುವೆ ಇರುವ ಸುಳ್ಳಿಗೆ ಸತ್ಯದಷ್ಟೇ ಬೆಲೆ. ಅದನ್ನೇ ಮುಂದುವರಿಸಿದರೆ ನಿಮಗೂ ಬೆಲೆ ಇರದು. ಇಂದು ನೀವು ಸಾಲಗಾರರ ಕಾಟದಿಂದ ನೀವು ಮುಕ್ತರಾಗುವಿರಿ. ನಿಮ್ಮವರು ನಿಮ್ಮ ಕೆಲಸವನ್ನು ಸರಿಯಾಗಿ ಮಾಡಲು ಬಿಡರು. ನಿಮ್ಮ ಮಾತು ಇನ್ನೊಬ್ಬರಿಗೆ ಬೇಸರವನ್ನು ತರಿಸೀತು. ಮಕ್ಕಳ ವಿಚಾರದಲ್ಲಿ ನೀವು ಸಹಕಾರ ಕೊಡುವಿರಿ. ನಿಮ್ಮನ್ನು ನಿಮಗಿಂತ ಮೇಲಿನವರು ಪರೀಕ್ಷಿಸಬಹುದು. ಏಕಾಂತಕ್ಕೆ ನೀವು ಹೆಚ್ಚಿನ ಒತ್ತನ್ನು ಕೊಡುವಿರಿ. ಸಹೋದರರ ನಡುಯವೆ ವಾಗ್ವಾದವು ಆಗಬಹುದು. ಅಪರಿಚಿತರಿಂದ ನಿಮಗೆ ಖಾತೆಗೆ ಹಣ ವರ್ಗಾವಣೆಯಾಗಲಿದೆ. ವಿದ್ಯಾಭ್ಯಾಸವು ನಿಮಗೆ ಸಾಕು ಎನಿಸಬಹುದು. ಯಾರದೋ ಒತ್ತಾಯಕ್ಕೆ ನೀವು ಇಷ್ಟವಿಲ್ಲದ ಕೆಲಸಕ್ಕೆ ಸೇರಿಕೊಳ್ಳುವಿರಿ. ಏನೇ ಹೇಳಿದರೂ ಕೇಳಿಸಿಕೊಂಡು ಬನ್ನಿ. ಕುಟುಂಬವು ನಿಮಗೆ ಕೊಡುವ ಕಿಮ್ಮತ್ತು ಕಡಿಮೆ ಆಗಿದೆ ಎಂದು ಅನ್ನಿಸುವುದು. ಸಂಗಾತಿಯ ನೋವಿಗೆ ಸ್ಪಂದಿಸುವುದು ಕಷ್ಟವಾದೀತು.

ಮಿಥುನ ರಾಶಿ: ಮನೆಯವರಿಗೆ ಗೊತ್ತಾಗದಂತೆ ಆಸ್ತಿ ಖರೀದಿಸಿದರೂ ಗೊತ್ತಾಗಲಿದೆ. ನಿಮ್ಮ ಬಲವನ್ನು ಯಾರದೋ ಮೂಲಕ ಕಂಡುಕೊಳ್ಳುವ ಬದಲು, ನೀವೇ ಅರಿತುಕೊಂಡರೆ ಸುಖ. ನಿಮ್ಮಲ್ಲಿರವ ದುರ್ಗುಣಗಳು ನಿಮಗೆ ಅರ್ಥವಾಗಿ ಅವುಗಳನ್ನು ಸರಿಮಾಡಿಕೊಳ್ಳುವಿರಿ. ಮಾನಸಿಕ ಕಿರಿಕಿರಿಯನ್ನು ನೀವು ದೂರ ಮಾಡಿಕೊಳ್ಳಿ. ಬಹಳ ಜಾಣ್ಮೆಯಿಂದ ಕಾರ್ಯವನ್ನು ಸಾಧಿಸುವಿರಿ. ನಿರೀಕ್ಷಿತ ಸ್ಥಾನವನ್ನು ನೀವು ಪಡೆದುಕೊಳ್ಳುವಿರಿ. ನಿಮಗೆ ಇಷ್ಟವಾದ ಸ್ಥಳಗಳಿಗೆ ಹೋಗುವಿರಿ. ಸಹೋದ್ಯೋಗಿಗಳ ಸಹಕಾರವು ನಿಮಗೆ ಸಿಗುವುದು. ನಿಮ್ಮ ಸಾಮರ್ಥ್ಯವು ಇತರರಿಗೂ ತಿಳಿಯವಹದು. ದೇವತಾರಾಧನೆಗೆ ತಿಳಿದವರ ಜೊತೆ ಚರ್ಚಿಸಿ. ಮನೆಯ ಹಿರಿಯರಿಂದ ಮಾನಸಿಕ ಹಿಂಸೆ. ವೈವಾಹಿಕ ಜೀವನವನ್ನು ಒತ್ತಡದಿಂದ ನಿರ್ವಹಿಸಬೇಕಾಗುವುದು. ಹಣವನ್ನು ಕಳೆದುಕೊಳ್ಳುವ ಸನ್ನಿವೇಶವು ಬರಬಹುದು. ಬೇಡದ ಮಾತುಕತೆಯಲ್ಲಿ ಇಂದಿನ ದಿನವು ಕಳೆಯುವುದು. ನಿಮ್ಮದೇ ವಸ್ತುವಾದರೂ ನಿಮಗೆ ಬೇಕಾದ ಸಮಯಕ್ಕೆ ಲಭ್ಯವಾಗದು ಕಛೇರಿಯಲ್ಲಿ ಒತ್ತಡವಿರಲಿದ್ದು ಎಲ್ಲರನ್ನೂ ನೀವು ದೂರುವಿರಿ.

ಕರ್ಕಾಟಕ ರಾಶಿ: ನಿರರ್ಗಳವಾದ ಮಾತು ನಿಮ್ಮ ಮನಸ್ಸನ್ನು ತಿಳಿಸುವುದು. ಸಂದೇಹದಿAದ ಮನಸ್ಸು ಹಾಳಾಗುತ್ತದೆ. ಹಾಳಾದ ಮನಸ್ಸಿನಿಂದ ಕೆಲಸವೂ ಹಾಳು. ಇಂದು ಹೆಚ್ವಿನ ಸಮಯವನ್ನು ಆಟ, ಓಟಗಳಲ್ಲಿ ಕಳೆಯುವಿರಿ. ಸಹೋದರಿಯ ಸಹಾಯವು ನಿಮಗೆ ಸಿಗಲಿದ್ದು ನಿಮ್ಮ ಜವಾಬ್ದಾರಿಯೂ ಹೆಚ್ಚಾಗಲಿದೆ. ಭೂಮಿಯ ವ್ಯವಹಾರವು ಸುಗಮವಾಗಿ ಸಾಗುವುದು. ಆರ್ಥಿಕ ಸಮಸ್ಯೆಯನ್ನು ನೀವು ದೂರ ಮಾಡಿಕೊಳ್ಳುವಿರಿ. ಬೆಚ್ಚಗಿನ ವಾತಾವರಣದಿಂದ ಹೊರಬಂದಾಗಲೇ ಗೊತ್ತಾಗುವುದು. ಬಂಧುಗಳು ನಿಮ್ಮಿಂದ ಅರ್ಥಿಕ ಸಹಾಯವನ್ನು ಬಯಸಿದ್ದರೂ ಕೇಳಲು ಹಿಂದೇಟು ಹಾಕುವರು. ಕೃಷಿಯಲ್ಲಿ ನಿಮಗೆ ಆಸಕ್ತಿಯು ಹೋಗಬಹುದು. ಅಸೂಯೆ ಕಾರಣಕ್ಕೆ ಅಭಿವೃದ್ಧಿಗೆ ಹಸ್ತಕ್ಷೇಪ ಮಕ್ಕಳ ಜೊತೆಗೆ ಕಳೆಯುವ ನಿಮ್ಮ ಸಮಯವು ಬಹಳ ಆಪ್ತವಾಗಿರುವುದು. ಶುಭವಾರ್ತೆಯ ನಿಮ್ಮ ಉತ್ಸಾಹವನ್ನು ಹೆಚ್ಚಿಸುವುದು. ನಿಮ್ಮವರ ಕಷ್ಟಗಳ ಮುಂದೆ ನಿಮ್ಮ ಕಷ್ಟ ಅಲದಪವೆನಿಸಬಹುದು. ರೋಗಗಳು ಹೋದಂತೆ ಅನಿಸಬಹುದು, ಮತ್ತಾವುದೋ ದಾರಿಯಿಂದ ನುಸುಳುತ್ತವೆ.

ಸಿಂಹ ರಾಶಿ: ಉತ್ತಮ ನಾಯಕರನ್ನು ಭವಿಷ್ಯ ಸ್ವಾಗತಿಸುವುದು. ಅದಕ್ಕೆ ಬೇಕಾದ ಪೂರ್ವತಯಾರಿಯೂ ಇರಲಿ. ಸಿಟ್ಟನ್ನು ಮಾಡಿಕೊಳ್ಳುವುದು ಸರಿ ಎನಿಸಿದರೂ ಇದರಿಂದ ಆಗುವ ತೊಂದರೆಯಿAದ ಸುಮ್ಮನಿರುವುದೇ ಜಾಣತನ. ನೀವು ಮನೆಯವರ ಬಗೆಗಿನ ಅಪವಾದಗಳನ್ನು ಕೇಳುವ ಸ್ಥಿತಿ ಬರಬಹುದು. ವಾಸಸ್ಥಳದ ಬದಲಾವಣೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಬೀರಬಹುದು. ಎಲ್ಲ ಸಂದರ್ಭದಲ್ಲಿಯೂ ನಿಮ್ಮ ಮಾತೇ ನಡೆಯುತ್ತದೆ ಎಂದು ಇಟ್ಟುಕೊಳ್ಳಬಾರದು. ಆರೋಗ್ಯವನ್ನು ಕಾಪಾಡಿಕೊಳ್ಳಲು ಮುಂಜಾಗರೂಕತೆ ಕ್ರಮಗಳನ್ನು ಮಾಡಿಕೊಳ್ಳಿ. ಗೊತ್ತಿದ್ದರೂ ಗೊತ್ತಿಲ್ಲದಂತೆ ಇರುವುದು ಜಾಣತನ. ಸ್ತ್ರೀಯರ ಒಡನಾಟ ಅತಿಯಾಗಿ ಬೇಡ. ನೇರ ನುಡಿಗಳನ್ನು ನೀವು ಸಹಿಸುವುದು ಕಷ್ಟವಾದೀತು. ಸ್ವಚ್ಛಂದವಾಗಿ ವಿಹರಿಸುವ ಮನಸ್ಸು ಇರಲಿದೆ. ಶಿಕ್ಷಣಕ್ಷೇತ್ರದಲ್ಲಿ ಯಶಸ್ಸು ಸಿಗುವುದು. ಸಕಾಲಕ್ಕೆ ಆರ್ಥಿಕ ನೆರವು ಸಿಗಲಿದ್ದು ಸ್ವಲ್ಪ ನೆಮ್ಮದಿ ಸಿಗುವುದು. ಮುಖಂಡರು ಬಹಳ ನಾಜೂಕಿನಿಂದ ಮುಂದುವರಿಯಬೇಕು.

ಕನ್ಯಾ ರಾಶಿ: ಇನ್ನೊಬ್ಬರನ್ನು ಸಮಾಧಾನ ಮಾಡುತ್ತೇನೆ ಎಂಬ ವಿಶ್ವಾಸವಿದ್ದರೂ ಫಲಕಾರಿಯಾಗದು. ನಿಮ್ಮವರೇ ನಿಮಗೆ ಶತ್ರುಗಳಂತೆ ಕಾಣಬಹುದು. ಇಂದು ನಿಮ್ಮ ಸಹಾಯಕರೇ ನಿಮಗೆ ತೊಂದರೆ ಕೊಟ್ಟಾರು. ಸಂಗಾತಿಗೆ ನಿಮ್ಮ ಕಾರಣದಿಂದ ಉತ್ತಮ ಕೆಲಸವು ಸಿಗಲಿದೆ. ಕಛೇರಿಯಲ್ಲಿ ನೀವು ಪ್ರಶಂಸೆಗೆ ಪಾತ್ರರಾಗುವಿರಿ. ಕೆಟ್ಟ ಆಲೋಚನೆಗಳು ಬಂದರೂ ಅದನ್ನು ದೂರ ಮಾಡಿಕೊಳ್ಳುವ ತಂತ್ರವನ್ನು ನೀವು ತಿಲಕಿದಿರುವಿರಿ. ಸಾಮಾಜಿಕ ಸೇವಾಕಾರ್ಯದಲ್ಲಿ ಭಾಗಿಯಾಗುವಿರಿ. ಹೂಡಿಕೆಯ ವಿಚಾರದಲ್ಲಿ ನೀವು ಹಿಂದುಳಿಯಬೇಕಾಗುವುದು. ಆಲಂಕಾರಿಕ ಉದ್ಯಮವನ್ನು ಮಾಡಿದರೆ ನಿಮಗೆ ಶ್ರೇಯಸ್ಸು ಆದಾಯ ಎಲ್ಲವೂ ಸಿಗಲಿದೆ. ವ್ಯಾಪಾರವನ್ನು ಬಹಳ ಮುತುವರ್ಜಿಯಿಂದ ಮಾಡಬೇಕಾಗುವುದು. ಮನೆಯ ಕೆಲಸವು ಮುಗಿಯದಷ್ಟು ಇರಲಿದೆ. ನಿಮ್ಮನ್ನು ಯಶಸ್ಸನ್ನು ಕಂಡು ಅದನ್ನು ನಿಯಂತ್ರಿಸಲು ಸಹೋದ್ಯೋಗಿಗಳು ಮೇಲಧಿಕಾರಿಗೆ ದೂರನ್ನು ಕೊಡಬಹುದು. ಸ್ನೇಹಿತರ ಜೊತೆ ಹರಟೆಯಲ್ಲಿ ಕಾಲಕಳೆಯುವಿರಿ. ಆರ್ಥಿಕ ವ್ಯಥೆಯನ್ನು ಯಾರ ಬಳಿಯಾದರೂ ಹೇಳಿಕೊಳ್ಳುವಿರಿ.

ತುಲಾ ರಾಶಿ: ಯಾರಾದರೂ ತಮಗೆ ಆಗಬೇಕಾದ ಕಾರ್ಯಕ್ಕೆ ಆಯ್ಕೆಗಳನ್ನು ಕೊಡಬಹುದು. ನ್ಯಾಯಾಲಯದ ಹೋರಾಟಕ್ಕೆ ಸ್ನೇಹಿತರ ಬೆಂಬಲ ಸಿಗುವುದು. ಇಂದು ನಿಮಗೆ ನಿಮ್ಮವರುಲೇ ಬಯಸದೇ ಇದ್ದರೂ ಸಹಾಯ ಮಾಡುವವರಿದ್ದಾರೆ. ಮನಸ್ಸಿನಲ್ಲಿ ಹತಾಶೆ, ಗೊಂದಲ, ಸಿಟ್ಟು ಎಲ್ಲವೂ ಕೂಡಿಕೊಂಡು ಯಾವುದನ್ನೂ ಮಾಡಲಾಗದ ಸ್ಥಿತಿಯು ನಿಮ್ಮದಾಗಲಿದೆ. ಅನ್ಯಾಯಕ್ಕೆ ಬಲಿಯಾಗುವ ಸಾಧ್ಯತೆ ಇದೆ. ನಿಮ್ಮದಲ್ಲದ ಕೆಲಸಕ್ಕೂ ನೀವೇ ಜವಾಬ್ದಾರರಾಗಬೇಕಾಗಬಹುದು. ವೈವಾಹಿಕ ವಿಚಾರದ ಅಂತಿಮ ತೀರ್ಮಾನಕ್ಕೆ ಬರುವುದು ಕಷ್ಟವಾದೀತು. ದೈವದ ಮೊರೆ ಬಿಟ್ಟರೆ ಮತ್ತಾವುದೂ ಕಾಣಸಿಗದು. ಹೊಸ ಸಾಕ್ಷಿಗಳನ್ನು ಹುಡುಕುವ ಬದಲು ಇರುವುದನ್ನು ಗಟ್ಟಿಮಾಡಿಕೊಳ್ಳಿ. ಸುಮ್ಮನೇ ಕುಳಿತರೇ ಹತ್ತಾರು ಆಲೋಚನೆಗಳು ಇನ್ನಷ್ಟು ನಿಮ್ಮ ಮನಸ್ಸನ್ನು ದುರ್ಬಲಗೊಳಿಸುವುದು. ಆಪ್ತರಾದ ಮಾತ್ರಕ್ಕೆ ಎಲ್ಲವನ್ನೂ ಸರಿಯಾಗಿ ಹೇಳುತ್ತಾರೆ ಎಂದಿಲ್ಲ. ತಂದೆಯ ಆಸೆಯನ್ನು ಪೂರ್ಣ ಮಾಡಿ, ಅವರಿಗೆ ಖುಷಿಯನ್ನು ಕೊಡುವಿರಿ.

ವೃಶ್ಚಿಕ ರಾಶಿ: ಸಾಮಾನ್ಯ ದಿನದಂತೆ ಆಲಸ್ಯ ಮಾಡುವುದು ಬೇಡ. ಚುರುಕುತನ ನಿಮ್ಮಲ್ಲಿ ಇಂದು ಬೇಕು. ಎಲ್ಲವನ್ನೂ ಬಿಟ್ಟು ಸುಮ್ಮನಿದ್ದರೂ ಜೊತೆಗಾರರು ಸುಮ್ಮನಿರಲಾರರು. ಇಂದು ನಿಮ್ಮ ಜೊತೆಗಾರರ ನಿಧಾನಗತಿಯ ಕೆಲಸವು ನಿಮ್ಮ ಮನಃಸ್ಥಿತಿಗೆ ಹೊಂದದಿರಬಹುದು. ಸಾಲದಿಂದ ನೀವು ತಲೆ ಮರೆಸಿಕೊಳ್ಳುವ ಸ್ಥಿತಿಯೂ ಬರಬಹುದು. ಅದಕ್ಕೆ ಬೇಕಾದ ಸಿದ್ಧತೆಯನ್ನು ಇಂದೇ ಮಾಡಿಕೊಳ್ಳುವುದು ಉತ್ತಮ. ಸ್ಥಿರಾಸ್ತಿಯನ್ನು ನಿಮ್ಮದಾಗಿಸಿಕೊಳ್ಳಲು ಹಸಮಾಡಬೇಕಾದೀತು. ದಾಂಪತ್ಯ ಜೀವನವು ಅನೇಕ ತಿರುವಗಳನ್ನು ಪಡೆದುಕೊಂಡು ಮುಂದೆ ಸಾಗುವುದು. ಹಿರಿಯರನ್ನು ಗೌರವಿಸಿ ಆಶೀರ್ವಾದವನ್ನು ಪಡೆದುಕೊಳ್ಳಿ. ಮೆಚ್ಚಿಕೊಳ್ಳದೇ ಇರುವುದು ನಿಮ್ಮ ದೌರ್ಬಲ್ಯವನ್ನು ಹೇಳುವುದು. ಪ್ರೀತಿಯಿಂದ ಮಾತನಾಡಿಸಿದರೆ ಎಲ್ಲವೂ ನಿಮ್ಮದಾಗುವುದು. ಅದನ್ನು ನೀವು ಜಾಣ್ಮೆಯಿಂದ ಸರಿ ಮಾಡಿಕೊಳ್ಳಿ. ಅನಾರೋಗ್ಯದಿಂದ ನಿಮಗೆ ಉತ್ಸಾಹ ಕಡಿಮೆಯಾಗುವುದು. ಎಲ್ಲವೂ ತಾನಾಗಿಯೇ ತಿಳಿದು ಬರುತ್ತದೆ. ದೂರದ ಬಂಧುಗಳ ಭೇಟಿಯ ನಿರೀಕ್ಷೆಯಲ್ಲಿ ಇರುವಿರಿ.

ಧನು ರಾಶಿ: ನಿಮ್ಮ ಉಪಕಾರವನ್ನು ಹಲವರು ಇಂದು ಸ್ಮರಿಸಿಕೊಳ್ಳುವರು. ಹಿತಶತ್ರುಗಳಿಂದ ನಿಮಗೆ ನೆಮ್ಮದಿ ಕಡಿಮೆಯಾಗಬಹುದು. ಇಂದು ನೀವು ಹಾಕಿಕೊಂಡ ಯೋಜನೆಗೆ ಕುಟುಂಬದ ಸಹಾಯವು ಲಭ್ಯವಾಗಲಿದೆ. ವಿದ್ಯಾರ್ಥಿಗಳ ಪ್ರಗತಿಯ ವಿಷಯವು ಮಂದಗತಿಯಲ್ಲಿಯೇ ಇರುವುದು. ಸಕಾರಾತ್ಮಕ ಚಿಂತನೆಯನ್ನೇ ಮಾಡಿಕೊಳ್ಳಿ. ನಂಬಿಕೆಯನ್ನು ಉಳಿಸಿಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ಕಷ್ಟವಾದೀತು. ಕಾರ್ಯದ ಸ್ಥಳದಲ್ಲಿ ಅಪವಾದ ಬರಬಹುದು. ಕಛೇರಿಯಲ್ಲಿ ನಿಮಗೆ ಆಗದವರ ಸಂಗವು ನಿರ್ಮಾಣವಾಗಲಿದೆ. ಶುಭ ಸಮಾರಂಭಗಳಿಗೆ ಭೇಟಿ ಕೊಡುವಿರಿ. ಮನೆಯ ಕೆಲಸವು ಸರಿಯಾಗಿ ಆಗದೇಹೋಗಬಹುದು. ಭೂವ್ಯವಹಾರಕ್ಕೆ ಸರ್ಕಾರದ ಕೆಲಸವು ಸ್ವಲ್ಪ ವೇಗವನ್ನು ಪಡೆದುಕೊಳ್ಳುವುದು. ಔಷಧದ ವ್ಯತ್ಯಾಸದಿಂದ ಆರೋಗ್ಯ ಇನ್ನಷ್ಟು ಕೆಡಬಹುದು. ಅದಕ್ಕೆ ಬೇಕಾದ ಪೂರಕ ವ್ಯವಸ್ಥೆಯನ್ನು ನೀವು ಮಾಡಿಕೊಳ್ಳಬೇಕಾದೀತು. ವ್ಯಾಪಾರದಲ್ಲಿ ಚಾಣಕ್ಷತೆಯಿಂದ ಲಾಭವನ್ನು ಪಡೆಯುವಿರಿ. ಇಂದು ನೀವು ಯಾವುದೋ ಚಿಂತೆಯಲ್ಲಿ ಇರುವಿರಿ.

ಮಕರ ರಾಶಿ: ಬೇಜವಾಬ್ದಾರಿಯ ಕಾರಣಕ್ಕೆ ನಿಮ್ಮನ್ನು ನಿಂದಿಸುವರು. ನಿಮ್ಮ ಹಳೆಯ ನೌಕರರನ್ನು ಕೈಬಿಡುವ ಯೋಚನೆ ಮಾಡುವಿರಿ. ಇಂದು ನಿಮ್ಮ ಆಲೋಚನಗಳಿಗೆ ಉತ್ತಮ ಪ್ರತಿಕ್ರಿಯೆ ಸಿಗಲಿದೆ. ನಿಮ್ಮ ಕುಶಲ ಕಾರ್ಯಗಳು ಇತರರಿಗೂ ಗೊತ್ತಾದೀತು. ವೇತನವು ಹೆಚ್ಚಾಗುವ ಸಾಧ್ಯತೆ ಇದೆ. ತಾಯಿಗೆ ನಿಮ್ಮ ಕಡೆಯಿಂದ ಅಮೂಲ್ಯವಾದ ಕೊಡುಗೆ ಕೊಡುವಿರಿ. ನಿಮ್ಮ ಸಭ್ಯತೆಯನ್ನು ಇತರರು ಬಳಸಿಕೊಳ್ಳುವರು. ಸಂಗಾತಿಯ ಜೊತೆ ಸಂತೋಷದಿAದ ಇರಲು ಆಗದು. ಸಂಪತ್ತಿನ ಉಳಿತಾಯದ ಮಾರ್ಗವನ್ನು ನೀವು ಕಂಡುಕೊಳ್ಳುವಿರಿ. ನಿಮಗೆ ಸಿಗದೇ ಇರುವ ಜವಾಬ್ದಾರಿಯ ಬಗ್ಗೆ ನಿಮಗೆ ಸ್ವಲ್ಪ ಅಸಮಾಧನ ಇರಬಹುದು. ರಾಜಕೀಯದಲ್ಲಿ ಮರ್ಯಾದೆಯನ್ನು ಬಿಡಬೇಕಾಗುವುದು. ಮುಚ್ಚು ಮರೆ ಇಲ್ಲದೇ ಎಲ್ಲವನ್ನೂ ಆಪ್ತರ ಜೊತೆ ಹಂಚಿಕೊಳ್ಳುವ ಸಂಭವವಿದೆ. ಶಿಸ್ತನ್ನು ಬಿಡದೇ ಪಾಲಿಸುವುದು ನಿಮಗೆ ಗೌರವವನ್ನು ತಂದು ಕೊಡುವುದು. ಅಪರಿಚಿತರು ನಿಮ್ಮನ್ನು ಹಳಿಯಬಹುದು.

ಕುಂಭ ರಾಶಿ: ಎಲ್ಲಿಯೋ ಯಾವುದೋ ಕಾರ್ಯದಲ್ಲಿದ್ದರೂ ಮನೆಯ ಬಗ್ಗೆಯೇ ಆಲೋಚನೆ. ಒತ್ತಡದ ಕಾರಣ ಕೆಲವನ್ನು ನೀವು ಬಿಡಬೇಕಾಗುವುದು. ಇಂದು ನಿಮ್ಮ ಕಾರ್ಯಗಳು ನಿಧಾನಗತಿಯಲ್ಲಿ ಇರಲಿದೆ. ಬರುವ ಅಲ್ಪ ಆದಾಯವನ್ನು ನೀವು ರಕ್ಷಿಸಿಕೊಳ್ಳಲು ಪ್ರಯತ್ನಿಸುವಿರಿ. ಕುಟುಂಬಕ್ಕೆ ನಿಮ್ಮ ಮೇಲೆ ಪ್ರೀತಿಯು ಅಧಿಕವಾಗಲಿದೆ. ಓಡಾಟದಿಂದ ಆಯಾಸಗೊಳ್ಳುವಿರಿ. ಬಂಧುಗಳಿAದ ಸಲ್ಲದ ಮಾತುಗಳು ಕೇಳಿಬರಬಹುದು. ಆಸ್ತಿಯ ವಿಚಾರದಲ್ಲಿ ವಾದಗಳು ಆಗಬಹುದು. ಆಲಸ್ಯದಿಂದ ನಿಮ್ಮ ಎಲ್ಲ ಕೆಲಸಗಳೂ ಹಾಗೆಯೇ ಉಳಿಯಬಹುದು. ಯಾವುದನ್ನೂ ನೀವು ಅತಿಯಾಗಿ ಇಷ್ಟಪಡದೇ ಇರುವುದು ಉತ್ತಮ. ಕೆಲವರು ನಿಮ್ಮ ಮುಖಸ್ತುತಿಯನ್ನು ಮಾಡಬಹುದು. ನಿಮ್ಮೊಳಗಿರುವ ಖಾಯಿಲೆ ಆಹಾರದ ವ್ಯತ್ಯಾಸದಿಂದ ಜಾಗರೂಕವಾಗಲಿದೆ. ಯಾರನ್ನಾದರೂ ನಂಬಲು ನಿಮ್ಮ ಮನಸ್ಸು ಸಿದ್ಧವಿರದು. ಸಜ್ಜನರಿಗೆ ಭೋಜನವನ್ನು ಹಾಕಿಸಿ. ದೂರದ ಊರಿಗೆ ಹೋದಾಗ ಉತ್ತಮ ವ್ಯವಸ್ಥೆ ಆಗಲಿದೆ.

ಮೀನ ರಾಶಿ: ನಿಮ್ಮ ಹೊಣೆಗಾರಿಕೆಯನ್ನು ಪೂರ್ಣ ಮಾಡಿಕೊಂಡ ಸಂತೃಪ್ತಿ ನಿಮ್ಮಲ್ಲಿರುವುದು. ನಿಮ್ಮ ಜೀವನಕ್ಕೆ ಕಾರಣರಾದವರನ್ನು ಕೃತಜ್ಞತೆಯಿಂದ ಸ್ಮರಿಸುವಿರಿ. ಇಂದು ನಿಮ್ಮ ಸ್ವಂತ ಉದ್ಯಮದಲ್ಲಿ ನಿಮಗೆ ಲಾಭವಿದೆ. ಸಾಮಾಜಿಕ ಕಾರ್ಯಗಳು ನಿಮಗೆ ಪ್ರಶಂಸೆಯನ್ನು ತಂದುಕೊಡುವುದು. ಅಂದುಕೊAಡ ಕಾರ್ಯವು ಪೂರ್ಣವಾಗಿ ಆಗುವುದಿಲ್ಲ. ಮಾತುಗಳನ್ನು ಇಂದು ಕಡಿಮೆ ಮಾಡಿಕೊಳ್ಳುವಿರಿ. ಎಂದೋ ಆಗುವ ತೊಂದರೆಯನ್ನು ಇಂದು ನೆನೆಯುವುದು ಬೇಡ. ಸಂಪತ್ತಿನ ನಿರ್ವಹಣೆಯನ್ನು ಮಾಡಲು ನೀವು ಸಮರ್ಥರಾಗುವಿರಿ. ಅಪರಿಚಿತರು ನಿಮ್ಮನ್ನು ಭೇಟಿಯಾಗಲಿದ್ದಾರೆ. ಸಂಗಾತಿಯಿAದ ಉಡುಗೊರೆ ಸಿಗಲಿದೆ. ಮನೆಗೆ ಬೇಕಾದ ವಸ್ತುಗಳನ್ನು ನೀವು ಖರೀದಿಸುವಿರಿ. ಕೃಷಿಯಲ್ಲಿ ನಿಮಗೆ ಸ್ವಲ್ಪ ಆಸಕ್ತಿಯು ಬರುವುದು. ವಿದ್ಯಾರ್ಥಿಗಳ ಯಶಸ್ಸಿನಲ್ಲಿ ನಿಮ್ಮ ಪಾಲೂ ಇರುವುದು. ನಿಮ್ಮನ್ನು ನೇರವಾಗಿ ಕೇಳಿದ್ದಕ್ಕೆ ಮಾತ್ರ ಉತ್ತರಿಸುವುದು ಒಳ್ಳೆಯದು. ತಂತ್ರಜ್ಞಾನದಲ್ಲಿ ನಿಮಗೆ ಒಳ್ಳೆಯ ಹಿಡಿತಕ್ಕೆ ಗೊತ್ತಾಗುವುದು.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...
Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಸಮರ್ಪಕ ಕಾನೂನು ಜಾರಿ ಕೊರತೆಯಿಂದ ಸಂಪೂರ್ಣ ಸ್ವಚ್ಛತೆ ಸಾಧ್ಯವಾಗುತ್ತಿಲ್ಲ;ಶೀನ ಶೆಟ್ಟಿ

March 12, 2026

ಚಿನ್ನಾಭರಣ ಕಳವು ಪ್ರಕರಣ: 24 ಗಂಟೆಗಳ ಅವಧಿಯಲ್ಲಿ ಆರೋಪಿ ಅಂದರ್..!

March 11, 2026

ಮಹಿಳಾ ದಿನದ ಪ್ರಯುಕ್ತ ಕೊಲ್ಯದಲ್ಲಿ ಮಹಿಳಾ ಸಾಧಕರನ್ನು ಸನ್ಮಾನ

March 11, 2026

Comments are closed.

Advertise
ಸಂಪರ್ಕಿಸಿ

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ

December 15, 2025

ಸೋಮೇಶ್ವರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನೇತ್ರಾ ತಪಾಸಣಾ ಶಿಬಿರ

December 6, 2025

ನೂತನ ಅತ್ಯಾಧುನಿಕ ಫಿಸಿಯೋಥೆರಪಿ ಚಿಕಿತ್ಸಾ ಕ್ಲಿನಿಕ್ ಉದ್ಘಾಟನೆ

November 12, 2025
suddi

ಸಮರ್ಪಕ ಕಾನೂನು ಜಾರಿ ಕೊರತೆಯಿಂದ ಸಂಪೂರ್ಣ ಸ್ವಚ್ಛತೆ ಸಾಧ್ಯವಾಗುತ್ತಿಲ್ಲ;ಶೀನ ಶೆಟ್ಟಿ

By UllalaVaniMarch 12, 20260

ಉಳ್ಳಾಲ: ಮಾದರಿ ಗ್ರಾಮ ಅಭಿಯಾನ, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಉಳ್ಳಾಲ ತಾಲೂಕು ಹಾಗೂ ರಾಷ್ಟ್ರೀಯ ನಿರ್ಮಲ ಗ್ರಾಮ…

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

ತಲೆಗೆ ಚೊಂಬು ಸಿಲುಕಿ ಒದ್ದಾಡುತ್ತಿದ್ದ ಕೋತಿಯ ರಕ್ಷಣೆ..!

March 12, 2026

ಚಿನ್ನಾಭರಣ ಕಳವು ಪ್ರಕರಣ: 24 ಗಂಟೆಗಳ ಅವಧಿಯಲ್ಲಿ ಆರೋಪಿ ಅಂದರ್..!

March 11, 2026

ಮಹಿಳಾ ದಿನದ ಪ್ರಯುಕ್ತ ಕೊಲ್ಯದಲ್ಲಿ ಮಹಿಳಾ ಸಾಧಕರನ್ನು ಸನ್ಮಾನ

March 11, 2026
1 2 3 … 1,828 Next
Automatic YouTube Gallery

ಉಳ್ಳಾಲ ಪ್ರೆಸ್‌ಕ್ಲಬ್‌ನಲ್ಲಿ ಪ್ಲಾಸ್ಟಿಕ್ -ಕ್ಯಾನ್ಸರ್ ವಿಚಾರ ಸಂಕಿರಣ ಕಾರ್ಯಕ್ರಮ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗು ಜನಶಿಕ್ಷಣ ಟ್ರಸ್ಟ್ ಇದರ ಜಂಟಿ ಸಹಯೋಗದಲ್ಲಿ

ಪ್ಲಾಸ್ಟಿಕ್ -ಕ್ಯಾನ್ಸರ್ ವಿಚಾರ ಸಂಕಿರಣ ಕಾರ್ಯಕ್ರಮ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ...
ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಉಳ್ಳಾಲ ಪ್ರೆಸ್‌ಕ್ಲಬ್‌ನಲ್ಲಿ ಪ್ಲಾಸ್ಟಿಕ್ -ಕ್ಯಾನ್ಸರ್ ವಿಚಾರ ಸಂಕಿರಣ ಕಾರ್ಯಕ್ರಮ
Now Playing
ಉಳ್ಳಾಲ ಪ್ರೆಸ್‌ಕ್ಲಬ್‌ನಲ್ಲಿ ಪ್ಲಾಸ್ಟಿಕ್ -ಕ್ಯಾನ್ಸರ್ ವಿಚಾರ ಸಂಕಿರಣ ಕಾರ್ಯಕ್ರಮ
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗು ಜನಶಿಕ್ಷಣ ಟ್ರಸ್ಟ್ ಇದರ ಜಂಟಿ ...
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗು ಜನಶಿಕ್ಷಣ ಟ್ರಸ್ಟ್ ಇದರ ಜಂಟಿ ಸಹಯೋಗದಲ್ಲಿ

ಪ್ಲಾಸ್ಟಿಕ್ -ಕ್ಯಾನ್ಸರ್ ವಿಚಾರ ಸಂಕಿರಣ ಕಾರ್ಯಕ್ರಮ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ...
ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
|| WOMEN'S DAY|| ಉಳ್ಳಾಲ ನಗರ ಮಹಿಳಾ ಕಾಂಗ್ರೆಸ್ ವತಿಯಿಂದ `ಮಹಿಳಾ ದಿನಾಚರಣೆ'
Now Playing
|| WOMEN'S DAY|| ಉಳ್ಳಾಲ ನಗರ ಮಹಿಳಾ ಕಾಂಗ್ರೆಸ್ ವತಿಯಿಂದ `ಮಹಿಳಾ ದಿನಾಚರಣೆ'
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ; ಉಳ್ಳಾಲ ನಗರ ಕಾಂಗ್ರೆಸ್ ಅಧ್ಯಕ್ಷೆ ...
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ; ಉಳ್ಳಾಲ ನಗರ ಕಾಂಗ್ರೆಸ್ ಅಧ್ಯಕ್ಷೆ ಅಮಿತಾ ಅಶ್ವಿನ್ ನೇತೃತ್ವದಲ್ಲಿ ಮಹಿಳಾ ದಿನಾಚರಣೆ'

ಕಾರ್ಯಕ್ರಮದಲ್ಲಿ ಮಹಿಳಾ ಸಾಧಕರಿಗೆ ಅಭಿನಂದನೆ, ಆಟೋಟ ಸ್ಪರ್ಧೆ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ...
ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version
%d