Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
ಉಳ್ಳಾಲ

ಚಾಂದಿನಿ ಸುಳ್ಯ ಅವರ ಸಾವಿಗೆ ಆರೋಗ್ಯ ಇಲಾಖೆ, ಸರಕಾರ ನೇರ ಹೊಣೆ; ಚಿಕಿತ್ಸೆಗೆ ಸ್ಪಂದಿಸುವಲ್ಲಿ ನಿರ್ಲಕ್ಷ್ಯ ವಹಿಸಿದ ಆರೋಗ್ಯ ಸಚಿವರು ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಲಿ- ಡಿವೈಎಫ್ಐ

UllalaVaniBy UllalaVaniOctober 20, 2025No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಸುಳ್ಯದ ನಾವೂರಿನ ಚಾಂದಿನಿ ಎಂಬ ಪರಿಶಿಷ್ಟ ಪಂಗಡ ಕ್ಕೆ ಸೇರಿದ ಮಹಿಳೆಯು ತೀರಾ ಅಪರೂಪದ ಮತ್ತು ವಿರಳ ಕಾಯಿಲೆಗೆ ತುತ್ತಾಗಿ ಸರಿಯಾದ ಚಿಕಿತ್ಸೆ ಹೊಂದಿಸಲು ಜೀವನ್ಮರಣ ಹೋರಾಟ ನಡೆಸಿ ಹೆಚ್ಚಿನ ಚಿಕಿತ್ಸೆ ಮತ್ತು ಸಹಾಯಕ್ಕೆ ಸರಕಾರದ ಗಮನ ಸೆಳೆದು ಕೊನೆಗೂ ಸರಕಾರದ ಆರೋಗ್ಯ ಇಲಾಖೆಯಿಂದ ಯಾವೊಂದು ಚಿಕಿತ್ಸಾ ಸಹಕಾರವನ್ನು ಪಡೆಯದೆ ಸಂತ್ರಸ್ತೆ ಚಾಂದಿನಿ ಸುಳ್ಯ ನಿನ್ನೆ ರಾತ್ರಿ ಕೊನೆಯುಸಿರೆಳೆದರು.

ಚಾಂದಿನಿ ಸುಳ್ಯ ಅವರ ಅನಾರೋಗ್ಯಕ್ಕೆ ಸಕಾಲದಲ್ಲಿ ಚಿಕಿತ್ಸೆ ಒದಗಿಸುವಲ್ಲಿ ಬೇಜಾವಾಬ್ದಾರಿ ವಹಿಸಿರುವ ಸರಕಾರ, ಆರೋಗ್ಯ ಇಲಾಖೆಯ ನಡೆಯನ್ನು ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ಖಂಡನೆಯನ್ನು ವ್ಯಕ್ತಪಡಿಸುತ್ತದೆ.

ಚಾಂದಿನಿ ಸುಳ್ಯ ಅವರು ಅಪರೂಪದ ಖಾಯಿಲೆಗೆ ಬಳಲುತ್ತಿರುವ ಬಗ್ಗೆ ಆರೋಗ್ಯ ಕ್ದೇತ್ರದಲ್ಲಿ ಮುಂದುವರಿದಿರುವ ದಕ್ಷಿಣ ಕನ್ನಡ ಜಿಲ್ಲೆಯ ಸರಕಾರಿ ಆಸ್ಪತ್ರೆಯಿಂದ ಹಿಡಿದು ಯಾವೊಂದು ಖಾಸಗೀ ಆಸ್ಪತ್ರೆಗೂ ಪತ್ತೆ ಹಚ್ಚಲು ಸಾಧ್ಯವಾಗದಿರೋದು ದುರಂತ. ಅಲ್ಲದೆ ಆಕೆ ಬಳಲುವ ಖಾಯಿಲೆಗೆ ಸರಿಯಾದ ಚಿಕಿತ್ಸೆ ಒದಗಿಸಲು ಸರಕಾರದ ಮುಂದೆ ಹಲವಾರು ವರುಷಗಳಿಂದ ಮನವಿ ಮೂಲಕ ತಿಳಿಸಲು ಪ್ರಯತ್ನಿಸಿದರು ಅದಕ್ಕೆ ಸರಿಯಾದ ಸ್ಪಂದನೆಗಳು ದೊರಯಲೇ ಇಲ್ಲ. ಇತ್ತೀಚೆಗೆ ಹೆಚ್ಚುವರಿ ಚಿಕಿತ್ಸೆಗೆ ಹೈದರಾಬಾದಿನ ಎಐಜಿ ಆಸ್ಪತ್ರೆಗೆ ದಾಖಲಾದಾಗ ಸಂತ್ರಸ್ತೆ ಬಳಲುತ್ತಿರುವ ಖಾಯಿಲೆ HYPER IGE MEDICATED MAST CELL ACTIVATION SYNDROME ಎಂದು ಪತ್ತೆ ಹಚ್ಚಿದರು. ಆ ಆಸ್ಪತ್ರೆಯು ಚಿಕಿತ್ಸೆಗೆ ವಿಧಿಸಿದ ವೆಚ್ಚವನ್ನು ಕಂಡ ಸಂತ್ರಸ್ತೆ ಅದನ್ನು ಬರಿಸಲು ಸಾಧ್ಯವಾಗದೇ ಇದ್ದಾಗ ಸರಕಾರ ಇನ್ನಾದರೂ ನೆರವಾಗಿ ಇಲ್ಲವೇ ದಯಾಮರಣವನ್ನಾದರೂ ಕರುಣಿಸಿ ಎಂದು ಪತ್ರ ಬರೆದರು. ಅಲ್ಲದೆ ಆರೋಗ್ಯಾಧಿಕಾರಿಗೆ ನನ್ನ ಸಾವಿಗೆ ಆರೋಗ್ಯ ಸಚಿವರು, ಸ್ಥಳೀಯ ಶಾಸಕರು, ಆರೋಗ್ಯ ಇಲಾಖೆ ನೇರ ಹೊಣೆ ಎಂದು ಆತ್ಮಹತ್ಯೆಗೈಯುವ ಎಚ್ಚರಿಕಾ ಸಂದೇಶ ಕಳುಹಿಸಿದ ನಂತರ ವಿಧಾನಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದು ನಾಡಿನ ಗಮನ ಸೆಳೆದಿದೆ. ಇಷ್ಟೆಲ್ಲಾ ಬೆಳವಣೆಗೆಗಳ ನಂತರವೂ ಸರಕಾರ, ಆರೋಗ್ಯ ಇಲಾಖೆ ಸಂತ್ರಸ್ತೆ ಚಾಂದಿನಿ ಸುಳ್ಯ ಅವರ ಚಿಕಿತ್ಸೆ್ಗೆ ಸ್ಪಂದಿಸುವಲ್ಲಿ ನಿಧಾನಗತಿಯನ್ನು ಅನುಸರಿಸಿದ್ದು ಇದರಿಂದ ಸಕಾಲದಲ್ಲಿ ಚಿಕಿತ್ಸೆ ಲಭ್ಯವಾಗದ ಕಾರಣ ಸಂತ್ರಸ್ತೆಯು ಆರೋಗ್ಯ ಪರಿಸ್ಥಿತಿ ಸಂಪೂರ್ಣ ಹದಗೆಟ್ಟು ನಿರ್ಣಾಯಕ ಹಂತಕ್ಕೆ ತಲುಪಿ ದುರಂತ ಸಾವನ್ನು ಕಂಡಿರುವುದು ಆಘಾತಕಾರಿ ಅಂಶ.

ಇಷ್ಟೆಲ್ಲಾ ತಂತ್ರಜ್ಞಾನ ಮುಂದುವರಿದ ಕಾಲದಲ್ಲಿ ವೈಧ್ಯಕೀಯ ಕ್ಷೇತ್ರಕ್ಕೆ ಪತ್ತೆ ಹಚ್ಚಲು ಸಾಧ್ಯವಾಗದೆ ಇರುವ ಪ್ರಕರಣವನ್ನು ಸರಕಾರ, ಆರೋಗ್ಯ ಇಲಾಖೆ ಗಂಭೀರವಾಗಿ ಮತ್ತು ಸವಾಲಾಗಿ ಸ್ವೀಕರಿಸಬೇಕಿತ್ತು. ಇಷ್ಟೂ ಮಾಡಲು ಸಾಧ್ಯವಾಗದಿದ್ದಲ್ಲಿ ಕನಿಷ್ಟ ಸಂತ್ರಸ್ತೆ ಚಾಂದಿನಿ ಸುಳ್ಯ ಅವರ ಮನವಿಗೆ ಸ್ಪಂದಿಸಿ ಸೂಕ್ತ ಚಿಕಿತ್ತೆ ನೀಡಲು ಮುಂದಾಗಬೇಕಿತ್ತು . ಪರಿಶಿಷ್ಟ ಪಂಗಡಕ್ಕೆ ಸೇರಿದ ಈ ಸಮುದಾಯ ಅಭಿವೃದ್ದಿ ಹೆಸರಲ್ಲಿ ನೂರಾರೂ ಕೋಟಿ ಮೀಸಲಿಟ್ಟಿವೆ ಎಂದು ಕೊಚ್ಚಿಕೊಳ್ಳುವ ಸರಕಾರಕ್ಕೆ ಕನಿಷ್ಟ 50ಲಕ್ಷ ಬರಿಸಲು ಹಿಂದೇಟು ಹಾಕಿರುವ ನಡೆ ಈ ಸಮುದಾಯದ ಮೇಲಿರುವ ಕಾಳಜಿ ಎಷ್ಟೆಂದು ಜಗಜ್ಜಾಹೀರಾಗಿದೆ. ಸಂತ್ರಸ್ತೆ ಚಾಂದಿನಿ ಸಾವಿನ ಹೊಣೆಯನ್ನು ಸರಕಾರ, ಆರೋಗ್ಯ ಇಲಾಖೆ, ಆರೋಗ್ಯ ಸಚಿವರು ಹೊಣೆ ಹೊರಬೇಕಾಗಿದೆ.

ಅಪರೂಪದ ಖಾಯಿಲೆಗೆ ಸೂಕ್ತ ಚಿಕಿತ್ಸೆ ಒದಗದೆ ಸಾವನ್ನಪ್ಪಿದ ಪರಿಶಿಷ್ಟ ಪಂಗಡಕ್ಕೆ ಸೇರಿದ ಸುಳ್ಯದ ಚಾಂದಿನಿ ಅವರ ಸಾವಿನ ಪ್ರಕರಣವನ್ನು ಸಮಗ್ರ ತನಿಖೆಗೊಳಪಡಿಸಬೇಕು. ಸಂತ್ರಸ್ತೆ ಗೆ ಸರಕಾರ ಗರಿಷ್ಟ ಮಟ್ಟದ ಆರ್ಥಿಕ ಪರಿಹಾರ ಒದಗಿಸಲು ಕ್ರಮಕೈಗೊಳ್ಳಬೇಕು ಅಲ್ಲದೆ ರಾಜ್ಯದ ಆರೋಗ್ಯ ಇಲಾಖೆಗೆ ಸವಾಲಾಗಿದ್ದ ಈ ಪ್ರಕರಣವನ್ನು ಕೈಗೆತ್ತಿಕೊಳ್ಳಲು ಹಾಗೂ ಸ್ಪಂದಿಸಲು ವಿಫಲರಾದ ಆರೋಗ್ಯ ಸಚಿವರು ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಲಿ ಎಂದು ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ಸರಕಾರವನ್ನು ಆಗ್ರಹಿಸಿದೆ.

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಉಳ್ಳಾಲ; ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ…!!

June 16, 2026

ಅಭಿವೃದ್ಧಿಯೇ ಉತ್ತರ: ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರ ವಿಶಿಷ್ಟ ರಾಜಕೀಯ ನಡೆ

June 15, 2026

ಕೋಟೆಕಾರು ಪಟ್ಟಣ ಪಂಚಾಯತ್‌ನಲ್ಲಿ ನೂತನ ಡಿಜಿಟಲ್ ನೀರಿನ ಬಿಲ್ ಪಾವತಿ ವ್ಯವಸ್ಥೆಗೆ ಚಾಲನೆ

June 15, 2026

Comments are closed.

Advertise
ಸಂಪರ್ಕಿಸಿ

ಕರ್ನಾಟಕದಾದ್ಯಂತ ಆರೋಗ್ಯ ಇಲಾಖೆಯಲ್ಲಿ ಮೆಗಾ ನೇಮಕಾತಿ: ಸಾರ್ವಜನಿಕ ಆರೋಗ್ಯ ಸೇವೆ ಬಲಪಡಿಸಲು ಮಹತ್ವದ ಹೆಜ್ಜೆ

June 11, 2026

ರಾಜ್ಯದಲ್ಲಿ ಖಾಸಗಿ ಅಸ್ಪತ್ರೆಯಲ್ಲಿ ಆಯುಷ್ಮಾನ್ ಯೋಜನೆ ಸಮರ್ಪಕ ಜಾರಿಗೆ ಜ್ಯಾರಿ ಆಗದಿದ್ದರೆ ಜಿಲ್ಲೆಯ ಅರೋಗ್ಯಧಾರಿಗಳ ಮೇಲೆ ಕ್ರಮ :- ಅರೋಗ್ಯ ಸಚಿವ ಯು.ಟಿ ಖಾದರ್

June 9, 2026

ಫೀಲ್ಡ್ ಗೆ ಇಳಿದ ಯು.ಟಿ. ಖಾದರ್ – ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ಕ್ಲಾಸ್…!

June 5, 2026

ವೆನ್ಲಾಕ್ ಆಸ್ಪತ್ರೆಯಲ್ಲಿ ಮನೋವೈದ್ಯರು ಮತ್ತು ಕ್ಲಿನಿಕಲ್ ಸೈಕಾಲಜಿಸ್ಟ್‌ಗಳ ತೀವ್ರ ಕೊರತೆ – ಬಡ ರೋಗಿಗಳ ನಿರ್ಲಕ್ಷ್ಯ ಯಾಕೆ ಎಂದು ಸಾರ್ವಜನಿಕರ ಪ್ರಶ್ನೆ

May 26, 2026
All News

ಹಿರಿಯ ಸಾಹಿತಿ–ಪತ್ರಕರ್ತ ಪರಮಾನಂದ ಸಾಲ್ಯಾನ್ ಅವರಿಗೆ “ರಂಗಭಾಸ್ಕರ–2026 ” ಪ್ರಶಸ್ತಿ ಪ್ರದಾನ

By UllalaVaniJune 22, 20260

ಮಂಗಳೂರು: ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಹದಿನೆಂಟನೆಯ ವಾರ್ಷಿಕೋತ್ಸವದ ಪರವಾಗಿ ರಂಗಭಾಸ್ಕರ-2026 ಪ್ರಶಸ್ತಿಯನ್ನು ಹಿರಿಯ ಪತ್ರಕರ್ತ, ನಾಟಕಕಾರ, ಸಾಹಿತಿ ಮತ್ತು…

ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವ ಸಮಿತಿ ಸೋಮೇಶ್ವರ ಇದರ ಅಧ್ಯಕ್ಷರಾಗಿ ರಾಘವ ಆರ್ ಉಚ್ಚಿಲ್ ಆಯ್ಕೆ

June 22, 2026

ಎಚ್ಚರಿಸಿದ್ದ ಉಳ್ಳಾಲವಾಣಿ ;ಈಗ ವರದಿ ಸತ್ಯವಾಗಿದೆಯೇ?

June 20, 2026

ಬದ್ರಿಯಾ ಗಲ್ಫ್ ಫ್ರೆಂಡ್ಸ್ ಸಂಟ್ಯಾರ್ ವತಿಯಿಂದ ಸಸಿ ವಿತರಣಾ ಕಾರ್ಯಕ್ರಮ

June 20, 2026
1 2 3 … 1,976 Next
Automatic YouTube Gallery

ದೇವರನ್ನು ಹುಡುಕುತ್ತಿದ್ದೀರಾ..?? ; ಈ ಫಿಲ್ಮ್ ನೋಡಿ

ದುಬಾರಿ ಕ್ಯಾಮೆರಾ ಇಲ್ಲ, ತಾಂತ್ರಿಕ ಸಾಧನಗಳ ನೆರವಿಲ್ಲ; ಇದು ಯುವ ಪ್ರತಿಭೆಗಳ ಸೃಜನಶೀಲತೆಗೆ ಸಾಕ್ಷಿ

ತಾಯಿ ಮತ್ತು ಮಗನ ನಡುವಿನ ಭಾವನಾತ್ಮಕ ಬಾಂಧವ್ಯ ಅನಾವರಣ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ...
ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ದೇವರನ್ನು ಹುಡುಕುತ್ತಿದ್ದೀರಾ..?? ; ಈ ಫಿಲ್ಮ್ ನೋಡಿ
Now Playing
ದೇವರನ್ನು ಹುಡುಕುತ್ತಿದ್ದೀರಾ..?? ; ಈ ಫಿಲ್ಮ್ ನೋಡಿ
ದುಬಾರಿ ಕ್ಯಾಮೆರಾ ಇಲ್ಲ, ತಾಂತ್ರಿಕ ಸಾಧನಗಳ ನೆರವಿಲ್ಲ; ಇದು ಯುವ ಪ್ರತಿಭೆಗಳ ...
ದುಬಾರಿ ಕ್ಯಾಮೆರಾ ಇಲ್ಲ, ತಾಂತ್ರಿಕ ಸಾಧನಗಳ ನೆರವಿಲ್ಲ; ಇದು ಯುವ ಪ್ರತಿಭೆಗಳ ಸೃಜನಶೀಲತೆಗೆ ಸಾಕ್ಷಿ

ತಾಯಿ ಮತ್ತು ಮಗನ ನಡುವಿನ ಭಾವನಾತ್ಮಕ ಬಾಂಧವ್ಯ ಅನಾವರಣ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ...
ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಕೊಣಾಜೆಯಲ್ಲಿ ಎಸ್‌ಎಸ್‌ಎಲ್‌ಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ, ವೃತ್ತಿ ಮಾರ್ಗದರ್ಶನ
Now Playing
ಕೊಣಾಜೆಯಲ್ಲಿ ಎಸ್‌ಎಸ್‌ಎಲ್‌ಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ, ವೃತ್ತಿ ಮಾರ್ಗದರ್ಶನ
ಯುವ ಮಿತ್ರ ಬಳಗ ಕೊಣಾಜೆ ವತಿಯಿಂದ ; ಕೊಣಾಜೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ...
ಯುವ ಮಿತ್ರ ಬಳಗ ಕೊಣಾಜೆ ವತಿಯಿಂದ ; ಕೊಣಾಜೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ, ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ

ಮುಂದಿನ ವರ್ಷ ಇನ್ನಷ್ಟು ವಿದ್ಯಾರ್ಥಿಗಳು 90% ಕ್ಕಿಂತ ಹೆಚ್ಚು ಅಂಕ ಗಳಿಸಲಿ: ಅಬ್ದುಲ್ ಖಾದರ್ ಕೋಡಿಜಾಲ್


📍 Ullal | Dakshina Kannada | ...
Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version