
ಉಳ್ಳಾಲ: ಸಮುದ್ರ ತೀರದ ಬಂಡೆಕಲ್ಲುಗಳ ನಡುವೆ ಪತ್ತೆಯಾದ ಕೊಳೆತ ಮೃತದೇಹ ಹಾಗೂ ಬಾವಿಯಲ್ಲಿ ಇರುವ ಮೃತದೇಹವನ್ನು ಪತ್ತೆಹಚ್ಚುವಲ್ಲಿ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿದ ಕಿನ್ಯ ಹಾಗೂ ಉಳ್ಳಾಲ ನಿವಾಸಿಗಳನ್ನು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಠಾಣಾಧಿಕಾರಿ ಹೆಚ್.ವಿರೂಪಾಕ್ಷ ಸ್ವಾಮಿ ನೇತೃತ್ವದಲ್ಲಿ ಅಭಿನಂದಿಸಲಾಯಿತು.
ಉಳ್ಳಾಲದ ಕೋಟೆಪುರದಲ್ಲಿ ಪತ್ತೆಯಾದ ಕೊಪ್ಪ ಮೂಲದ ಮೀನುಗಾರನ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಲು ಹಾಗೂ ಸಮುದ್ರ ತೀರದ ಬಂಡೆಕಲ್ಲು ಪ್ರದೇಶದೀಂದ ಆಂಬ್ಯುಲೆನ್ಸ್ ವಾಹನದವರೆಗೆ ಹೊತ್ತು ತಂದ ಶೀವಾಜಿ ಜೀವರಕ್ಷಕ ಈಜುಗಾರರ ಸಂಘ ಮೊಗವೀರಪಟ್ನದ ಸದಸ್ಯರುಗಳಾದ ಚಂದ್ರಹಾಸ್ ಸುವರ್ಣ, ಯೋಗೀಶ್ ಅಮೀನ್, ಗೃಹರಕ್ಷಕ ಸಿಬ್ಬಂದಿ ಪ್ರಸಾದ್ ಸುವರ್ಣ ಹಾಗೂ ಕಿನ್ಯಾ ಬಾವಿಯಲ್ಲಿ ಮಿಥುನ್ ಶೆಟ್ಟಿ ಎಂಬವರ ಮೃತದೇಹವನ್ನು ನಿರಂತರ ಎರಡೂವರೆ ತಾಸುಗಳ ಕಾಲ ಶೋಧ ಕಾರ್ಯದಲ್ಲಿ ಸಹಕರಿಸಿದ ಅಶ್ರಫ್ ಕೋಡಿ, ಫಾರುಕ್ ಕೋಟೆಪುರ, ಹಸೈನಾರ್ ಕಿನ್ಯ, ಹೈದರ್ ಕಿನ್ಯ, ಹ್ಯಾರೀಸ್ ಕಿನ್ಯ, ಅನ್ಸಾರ್ ಕಿನ್ಯ ಹಾಗೂ ಗೃಹರಕ್ಷಕ ಸಿಬ್ಬಂದಿ ಪ್ರಸಾದ್ ಸುವರ್ಣ ಇವರನ್ನು ಅಭಿನಂದಿಸಲಾಯಿತು.
ಈ ಸಂದರ್ಭ ಉಳ್ಳಾಲ ಪೊಲೀಸ್ ಠಾಣಾ ಉಪನಿರೀಕ್ಷಕರುಗಳಾದ ಸಿದ್ದಪ್ಪ ನರನೂರ್, ಸಂತೋಷ್ ಕುಮಾರ್ ಡಿ, ಎ.ಎಸ್‌ಐ ಮನ್ಸೂರ್, ಎಸ್.ಬಿ ಅಶೋಕ್ ಉಪಸ್ಥಿತರಿದ್ದರು.






