ಮನಿಲಾ : ಫಿಲಿಪೈನ್ಸ್‌ನಲ್ಲಿ ಶುಕ್ರವಾರ 7.6 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಸುನಾಮಿ ಎಚ್ಚರಿಕೆಯನ್ನು ನೀಡಲಾಗಿದೆ. ದಾವೋ ಓರಿಯೆಂಟಲ್ ಪ್ರಾಂತ್ಯದ ಮನಾಯ್ ಪಟ್ಟಣದ ಆಗ್ನೇಯಕ್ಕೆ ಸುಮಾರು 62 ಕಿಲೋಮೀಟರ್ (38 ಮೈಲುಗಳು) ದೂರದಲ್ಲಿ 10 ಕಿಲೋ ಮೀಟರ್ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಭೂಕಂಪದಿಂದಾಗಿ ಫಿಲಿಪೈನ್ಸ್ ಕರಾವಳಿಗಳಲ್ಲಿ ಸಾಮಾನ್ಯ ಅಲೆಗಳಿಗಿಂತ 3 ಮೀಟರ್ ವರೆಗಿನ ಅಲೆಗಳು, ಇಂಡೋನೇಷ್ಯಾ ಮತ್ತು ಪಲಾವ್‌ನಲ್ಲಿ ಸಣ್ಣ ಅಲೆಗಳು ಉಂಟಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಸುನಾಮಿ ಎಚ್ಚರಿಕೆ ಹಿನ್ನೆಲೆ ಕರಾವಳಿ ಪ್ರದೇಶದ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಲಹೆ ನೀಡಲಾಗಿದೆ.

