ಉಳ್ಳಾಲ : ಯುವಕನೋರ್ವ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಿನ್ಯ ಗ್ರಾಮ ಪಂಚಾಯತ್ ರಸ್ತೆಯ ಕೆರೆಯಲ್ಲಿ ನಡೆದಿದೆ. ಮೃತದೇಹ ಹುಡುಕಾಟಕ್ಕಾಗಿ ಸ್ಥಳೀಯ ಯುವಕರ ತಂಡ ಹಾಗೂ ಗೃಹರಕ್ಷಕ ಸಿಬ್ಬಂದಿ ಹಲವು ಗಂಟೆಗಳ ಕಾರ್ಯ ಕಾರ್ಯಚರಿಸಿ ಹೊರ ತೆಗೆದಿದ್ದಾರೆ.


ಕಿನ್ಯ ನಿವಾಸಿ ಮಿಥುನ್ ಶೆಟ್ಟಿ (28) ಕೆರೆ ಗೆ ಹಾರಿದವರು. ಬೆಳಿಗ್ಗೆಯಿಂದ ನಾಪತ್ತೆಯಾದವರಿಗಾಗಿ ಮನೆಮಂದಿ ಹುಡುಕಾಟ ನಡೆಸಿದ್ದರು. ಈ ಸಂದರ್ಭ ಪಂಚಾಯತ್ ರಸ್ತೆಯ ಸಮೀಪದ ಕೆರೆಯ ಬಳಿ ಮಿತುನ್ ಚಪ್ಪಲಿಗಳು ಪತ್ತೆಯಾಗಿತ್ತು. ಕೂಡಲೇ ಉಳ್ಳಾಲ ಪೋಲೀಸರಿಗೆ ಮಾಹಿತಿಯನ್ನು ನೀಡಲಾಗಿತ್ತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಗೃಹರಕ್ಷಕ ಸಿಬ್ಬಂದಿ ಪ್ರಸಾದ್ ಮೊಗವೀರ ಪಟ್ಣ ಹಾಗೂ ಸ್ಥಳೀಯರಾದ ಹಸೈನಾರ್ ಕಿನ್ಯ, ಫಾರೂಕ್ ಉಳ್ಳಾಲ್, ರಝಕ್ ಕಿನ್ಯ, ಅನ್ಸಾರ್ ಕಿನ್ಯ, ರವೂಫ್, ಹೈದರ್ ಕಿನ್ಯ ನೀರಿನಲ್ಲಿ ಮುಳುಗಿ ಶೋಧ ಕಾರ್ಯ ನಡೆಸಿ ಬಳಿಕ ಹಲವು ಗಂಟೆಗಳ ಬಳಿಕ ಮೃತದೇಹ ಪತ್ತೆಯಾಗಿದೆ.
ಹಲವು ಗಂಟೆಗಳ ಕಾಲ ಶೋಧ ನಡೆಸಿ ಮೃತದೇಹ ಪತ್ತೆಯಾಗದೇ ಇದ್ದಾಗ ಉಡುಪಿಯ ಈಶ್ವರ್ ಮಲ್ಪೆ ಅವರಿಗೆ ತಿಳಿಸಲಾಗಿತ್ತು. ತಕ್ಷಣ ಉಡುಪಿಯಿಂದ ಹೊರಟ ಅವರ ತಂಡ ದಾರಿಮಧ್ಯೆ ಮಿಥುನ್ ಮೃತದೇಹ ಪತ್ತೆಯಾಗಿದೆ.

