ಮಂಗಳೂರು : ಮಂಗಳೂರು: ನಗರದ ಹೊರ ವಲಯದ ಕಣ್ಣೂರಿನ ಗಾಣದಬೆಟ್ಟು ಎಂಬಲ್ಲಿಯ ವಸತಿ ಸಮುಚ್ಚಯವೊಂದರಲ್ಲಿ ಹೊರ ರಾಜ್ಯದಿಂದ ಹುಡುಗಿಯರನ್ನು ಕರೆಸಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದಡಿ ಕಂಕನಾಡಿ ನಗರ ಠಾಣೆ ಪೊಲೀಸರು ಓರ್ವ ಮಹಿಳೆ ಮತ್ತು ಪುರುಷನನ್ನು ಬಂಧಿಸಿದ್ದಾರೆ.
ಬಂಟ್ವಾಳ ತಾಲೂಕು ಪುದು ನಿವಾಸಿ ಹಸೀನಾ (30) ಮತ್ತು ಪಾವೂರು ಬದ್ರಿಯಾ ನಗರದ ಅಬ್ದುಲ್ ಲತೀಫ್ (38) ಬಂಧಿತರು. ಉತ್ತರ ಪ್ರದೇಶ ಮೂಲದ ಸಂತ್ರಸ್ತ ಯುವತಿಯನ್ನು ರಕ್ಷಿಸಲಾಗಿದೆ.
ವೇಶ್ಯಾವಾಟಿಕೆ ಬಗ್ಗೆ ದಕ್ಷಿಣ ವಲಯ ಎಸಿಪಿ ವಿಜಯ ಕ್ರಾಂತಿ ಅವರಿಗೆ ಲಭಿಸಿದ ಖಚಿತ ಮಾಹಿತಿಯಂತೆ ಸೋಮವಾರ(ಅ.6) ಸಂಜೆ 5.15ರ ವೇಳೆಗೆ ದಾಳಿ ನಡೆಸಲಾಗಿದೆ. ಮೂರನೇ ಮಹಡಿಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವುದು ಪತ್ತೆಯಾಗಿದೆ. ಕಾಂಡಮ್‌ಗಳು ಹಾಗೂ 2 ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ.

ಸ್ಪಷ್ಟನೆ : ದೂರಿನ ಆಧಾರದಲ್ಲಿ ದಯಾಂಬು ಎಂಬಲ್ಲಿನ ವಸತಿಗೃಹ ಎಂದು ನಮೂದಿಸಲಾಗಿತ್ತು. ವಾಸ್ತವವಾಗಿ ಗಾಣದಬೆಟ್ಟುವಿನಲ್ಲಿ ವಸತಿ ಸಮುಚ್ಛಯ ಇದೆ ಎಂಬುದಾಗಿ ಪೊಲೀಸರು ಸ್ಪಷ್ಟ ಪಡಿಸಿದ್ದಾರೆ.





