ಉಳ್ಳಾಲ : ದ.ಕ ಮತ್ತು ಉಡುಪಿ ಜಿಲ್ಲಾ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಮತ್ತು ಕೋಟೆಕಾರ್ ಸರ್ಕಲ್ ಬೀಡಿ ಲೇಬಲ್ ಯೂನಿಯನ್ ಸಿ.ಐ.ಟಿ.ಯು ಉಳ್ಳಾಲ ತೊಕ್ಕೋಟ್ಟು ವತಿಯಿಂದ 2018 ರಿಂದ 2024ರ ವರೆಗಿನ 6 ವರ್ಷಗಳ ಕನಿಷ್ಟ ಕೂಲಿಯನ್ನು ಪಾವತಿಸಲು ಒತ್ತಾಯಿಸಿ ಮತ್ತು 2024ರಿಂದ ಅಧಿಸೂಚಿಸಿದ ಕನಿಷ್ಟ ಕೂಲಿ ಮತ್ತು ತುಟ್ಟಿಭತ್ಯೆಯನ್ನು ಬೀಡಿಕಾರ್ಮಿಕರಿಗೆ ಪಾವತಿಸಲು ಒತ್ತಾಯಿಸಿ ಬೀಡಿ ಕಾರ್ಮಿಕರಿಂದ ಹಕ್ಕೋತ್ತಾಯ ಚಳುವಳಿ ಉಳ್ಳಾಲ ಭಾರತ್ ಬೀಡಿ ವರ್ಕ್ಸ್ ಡಿಪ್ಪೋ ಎದುರು ಸೋಮವಾರ ನಡೆಯಿತು.
ಸೌತ್ ಕೆನರಾ ಬೀಡಿ ವರ್ಕರ್ಸ್ ಫೆಡರೇಶನ್ ದ.ಕ ಜಿಲ್ಲೆ ಸಿ.ಐ.ಟಿ.ಯು ಅಧ್ಯಕ್ಷ ಕಾಂ.ವಸಂತ್ ಆಚಾರ್ ಮಾತನಾಡಿ ಬೀಡಿ ಕಾರ್ಮಿಕರಿಗೆ 2018 ರಿಂದ 2024ರ ವರೆಗಿನ ತುಟ್ಟಿ ಭತ್ಯೆಯನ್ನು ಕೂಡಲೇ ಜಾರಿಗೊಳಿಸುವಂತೆ ಹಾಗೂ 2024 ರಿಂದ ಸಾವಿರ ಬೀಡಿಗೆ ರೂ 301.92 ನ್ನು ಸರಕಾರ ಜಾರಿಗೊಳಿಸಿದ ಮಜೂರಿಯನ್ನು ಕೂಡಲೇ ಪಾವತಿಸ ಬೇಕು ಎಂದರು.




ಕಾರ್ಯದರ್ಶಿ ಕಾಂ.ಬಿ. ಬಾಲಕೃಷ್ಣ ಶೆಟ್ಟಿ ಮಾತನಾಡಿ ಬೀಡಿ ಮಾಲಕರಿಂದ ಮತ್ತು ಸರಕಾರದಿಂದ ನಮಗೆ ಅನ್ಯಾಯವಾಗಿದೆ, 16 ತಾರಿಕಿನವರೆಗೆ ಶಾಂತಿಯುತ ಪ್ರತಿಭಟನೆ ಮಾಡುತ್ತೇವೆ, ನಮ್ಮ ಬೇಡಿಕೆ ಈಡೇರದಿದ್ದರೆ ನಮ್ಮ ಹೋರಾಟ ತೀವ್ರ ಸ್ವರೂಪ ಪಡೆಯುತ್ತದೆ ಎಂದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಸೌತ್ ಕೆನರಾ ಬೀಡಿ ವರ್ಕರ್ಸ್ ಫೆಡರೇಶನ್ ದ.ಕ ಜಿಲ್ಲೆ ಸಿ.ಐ.ಟಿ.ಯು ಉಪಾಧ್ಯಕ್ಷ ಸುಕುಮಾರ್ ತೊಕ್ಕೋಟ್ಟು, ಕೋಟೆಕಾರ್ ಸರ್ಕಲ್ ಬೀಡಿ ಲೇಬರ್ಸ್ ಯೂನಿಯನ್ ಸಿ.ಐ.ಟಿ.ಯು ಅಧ್ಯಕ್ಷ ಪದ್ಮಾವತಿ ಶೆಟ್ಟಿ, ಕಾರ್ಯದರ್ಶಿ ಜಯಂತ್ ನಾಯಕ್, ಕೋಶಾಧಿಕಾರಿ ವಿಲಾಸಿನಿ ತೊಕ್ಕೋಟ್ಟು, ಜೊತೆ ಕಾರ್ಯದರ್ಶಿ ಪ್ರಮೋದಿನಿ ಕಲ್ಲಾಪು, ಉಪಾಧ್ಯಕ್ಷ ಸುಂದರ್ ಕುಂಪಲ, ಹಿರಿಯ ಕಾರ್ಮಿಕ ಮುಖಂಡ ಕೃಷ್ಣಪ್ಪ ಸಾಲಿಯಾನ್, ಭಟ್ನಗರ, ಅಶೋಕ್ ಶೆಟ್ಟಿ ಚೆಂಬುಗುಡ್ಡೆ, ಎಸ್.ಕೆ ಬೀಡಿ ವರ್ಕರ್ಸ್ ಫೆಡರೇಶನ್ ಎ.ಐ.ಟಿ.ಯು.ಸಿ ಅಧ್ಯಕ್ಷ ಸೀತಾರಾಮ ಬೇರಿಂಜ, ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್, ಉಪಾಧ್ಯಕ್ಷ ಎಮ್ . ಕರುಣಾಕರ ಮಾರಿಪಳ್ಳ, ಕೋಶಾಧಿಕಾರಿ ಬಿ.ಶೇಖರ್,ಹಿರಿಯ ಕಾರ್ಮಿಕ ಮುಖಂಡರಾದ ವಿ.ಕುಕ್ಯಾನ್, ಮೊದಲಾದವರು ಉಪಸ್ಥಿತರಿದ್ದರು.





