ಉಳ್ಳಾಲ : ಉಳ್ಳಾಲದ ಎಲ್ಲಾ ದೇವಸ್ಥಾನಗಳಲ್ಲಿ ಏಕಕಾಲದಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ಉಳ್ಳಾಲ ಶಾರದೋತ್ಸವದ ಸಂದರ್ಭ ನಡೆದ ಪೊಲೀಸರ ಕ್ರಮವನ್ನು ಖಂಡಿಸಲಾಯಿತು.
ಶಾರದೋತ್ಸವ ವೇಳೆ ಠಾಣೆಯೆದುರು ಪ್ರತಿಭಟಿಸಿದವರ ಮೇಲೆ ಎಫ್ಐಆರ್ ಹಾಕಿರುವುದನ್ನು ವಿರೋಧಿಸಿ, ಕೇಸ್ ಹಿಂದೆ ಪಡೆಯುವಂತೆ ಇದೇ ಸಂದರ್ಭ ಹಿಂದೂ ಸಮಾಜ ಆಗ್ರಹಿಸಿತು.


ಉಳ್ಳಾಲ ಪರಿಸರದ ಶ್ರೀ ಸೋಮನಾಥೇಶ್ವರ ದೇವಸ್ಥಾನ, ಶ್ರೀ ವ್ಯಾಘ್ರಚಾಮುಂಡೇಶ್ವರೀ ದೇವಸ್ಥಾನ, ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನ, ಶ್ರೀ ಸೀತರಾಮ ದೇವಸ್ಥಾನ, ಶ್ರೀ ನಾಗಬ್ರಹ್ಮಾದಿ ಪಂಚದೈವಿಕ ಸನ್ನಿಧಿ, ಶ್ರೀ ವೀರಭದ್ರ ದುರ್ಗಾಪರಮೇಶ್ವರೀ ದೇವಸ್ಥಾನ, ಶ್ರೀ ವಲಚಿಲ್ತಾಯ ದೇವಸ್ಥಾನ, ಶ್ರೀ ರಾಹುಗುಳಿಗ ಬನ, ಶ್ರೀ ಉಳಿಯ ಧರ್ಮರಸರ ಕ್ಷೇತ್ರ, ಶ್ರೀ ಮಲರಾಯ ದೈವಸ್ಥಾನ, ಸ್ವಾಮಿ ಗುಳಿಗಜ್ಜ- ಕೊರಗಜ್ಜ ಕಟ್ಟೆ, ಶ್ರೀ ಚೀರುಂಭ ಭಗವತಿ ಕ್ಷೇತ್ರ ಹಾಗೂ ಶ್ರೀ ವಿಠೋಭ ರುಖುಮಾಯಿ ಭಜನಾ ಮಂದಿರ, ಅಯ್ಯಪ್ಪ ಮಂದಿರ, ಶ್ರೀ ಶಾರದಾ ನಿಕೇತನ, ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆ, ವಿದ್ಯಾಂಜನೇಯ ವ್ಯಾಯಾಮ ಶಾಲೆ ಸೇರಿದಂತೆ ಎಲ್ಲಾ ಭಜನಾ ಮಂದಿರಗಳಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಹಾಗೂ ಕೊರಗ ತನಿಯ ಗುಡಿ ಕೆರೆಬೈಲು, ತೊಕ್ಕೊಟ್ಟು, ತಲಪಾಡಿ, ಮಾಡೂರು, ತಾರಿಪಡ್ಪು ಪ್ರದೇಶದ ದೈವ-ದೇವಸ್ಥಾನಗಳಲ್ಲೂ ಪ್ರಾರ್ಥನೆ ಮಾಡಲಾಯಿತು. ಈ ಸಂದರ್ಭದಲ್ಲಿ ಉತ್ಸವ ಸಮಿತಿಯ ಪಧಾಧಿಕಾರಿಗಳು ಸೇರಿದಂತೆ ಆಯಾಯ ದೇವಸ್ಥಾನಗಳ ಪಧಾಧಿಕಾರಿಗಳು ಉಪಸ್ಥಿತರಿದ್ದರು.

