ಆಂಧ್ರಪ್ರದೇಶ ಸರ್ಕಾರವು 2025 ಜನವರಿ 30ರಂದು ಭಾರತದ ಮೊದಲ ವಾಟ್ಸ್‌ಅಪ್ ಆಧಾರಿತ ಇ-ಆಡಳಿತ ಸೇವೆಯಾದ “ಮನ ಮಿತ್ರ” (Mana Mitra) ಆರಂಭಿಸಿತು. ಈ ಸೇವೆಯ ಮೂಲಕ ನಾಗರಿಕರು 161 ಸರ್ಕಾರಿ ಸೇವೆಗಳನ್ನು (ಜಾತಿ, ಆದಾಯ, ಜನ್ಮ-ಮರಣ ಪ್ರಮಾಣಪತ್ರಗಳು, ವಿದ್ಯುತ್ ಬಿಲ್, ಆರ್ಟಿಸಿ ಟಿಕೆಟ್ ಬುಕಿಂಗ್ ಇತ್ಯಾದಿ) ವಾಟ್ಸ್‌ಅಪ್‌ನಲ್ಲಿ 9552300009 ಸಂಖ್ಯೆಗೆ “ಇ/ನಮಸ್ಕಾರ” ಸಂದೇಶ ಕಳುಹಿಸಿ ಪಡೆಯಬಹುದು. ಮೆಟಾ ಜೊತೆಗಿನ ಸಹಯೋಗದಲ್ಲಿ ಆರಂಭವಾದ ಈ ಯೋಜನೆಯು QR ಕೋಡ್ ಒಳಗೊಂಡ ಪ್ರಮಾಣಪತ್ರಗಳನ್ನು ಒದಗಿಸುತ್ತದೆ. ಮಾರ್ಚ್ 2025 ರ ವೇಳೆಗೆ 200 ಸೇವೆಗಳು ಲಭ್ಯವಾಗಿದ್ದು, ಆಗಸ್ಟ್ 2025 ರೊಳಗೆ 700 ಸೇವೆಗಳನ್ನು ಸೇರಿಸುವ ಗುರಿಯಿದೆ.
ತಮಿಳುನಾಡಿನಲ್ಲಿ ವಾಟ್ಸ್‌ಅಪ್ ಇ-ಆಡಳಿತ ಸೌಲಭ್ಯ :
ತಮಿಳುನಾಡು ಸರ್ಕಾರವು 2025 ಆಗಸ್ಟ್ 22 ರಂದು ವಾಟ್ಸ್‌ಅಪ್ ಚಾಟ್‌ಬಾಟ್ ಆಧಾರಿತ ಇ-ಆಡಳಿತ ಸೇವೆಯನ್ನು ಆರಂಭಿಸಿತು. ಇದರ ಮೂಲಕ 50ಕ್ಕೂ ಹೆಚ್ಚು ಸೇವೆಗಳು (ರೇಷನ್ ಕಾರ್ಡ್, ಜಾತಿ-ಆದಾಯ ಪ್ರಮಾಣಪತ್ರ, ತೆರಿಗೆ ಪಾವತಿ, ವಿದ್ಯುತ್ ಬಿಲ್, ಬಸ್ ಟಿಕೆಟ್ ಬುಕಿಂಗ್) ಲಭ್ಯವಿದೆ. ತಮಿಳು ಮತ್ತು ಇಂಗ್ಲಿಷ್‌ನಲ್ಲಿ ಕಾರ್ಯನಿರ್ವಹಿಸುವ ಈ ಸೇವೆಯನ್ನು ತಮಿಳುನಾಡು ಇ-ಗವರ್ನೆನ್ಸ್ ಏಜೆನ್ಸಿ (TNeGA) ಜಾರಿಗೊಳಿಸಿದ್ದು, ಮೆಟಾ ಜೊತೆ MoU ಮೂಲಕ ಕಾರ್ಯಗತವಾಗಿದೆ. ನಾಗರಿಕರು ಅಧಿಕೃತ ಸಂಖ್ಯೆಗೆ “ಇ” ಸಂದೇಶ ಕಳುಹಿಸಿ ಸೇವೆಗಳನ್ನು ಪಡೆಯಬಹುದು.
ಕರ್ನಾಟಕದಲ್ಲಿ ವಾಟ್ಸ್‌ಅಪ್ ಇ-ಆಡಳಿತ ಸೇವೆ ಯಾವಗ ಆರಂಭ ?:
ಕರ್ನಾಟಕವು ಐಟಿಯಲ್ಲಿ ಭಾರತದ ಪ್ರಮುಖ ರಾಜ್ಯವಾಗಿದ್ದರೂ, 2025 ಸೆಪ್ಟೆಂಬರ್ 23 ರವರೆಗೆ *ವಾಟ್ಸ್‌ಅಪ್ ಆಧಾರಿತ ಇ-ಆಡಳಿತ ಸೇವೆಯ ಆರಂಭದ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಇಲ್ಲ. ಕರ್ನಾಟಕ ಸರ್ಕಾರವು *ನಾಡಕಚೇರಿ, ಸೇವಾ ಸಿಂಧು, ಇ-ಜನಮ ಇತ್ಯಾದಿ ಇ-ಆಡಳಿತ ವೇದಿಕೆಗಳ ಮೂಲಕ ಸೇವೆಗಳನ್ನು ಒದಗಿಸುತ್ತಿದೆ, ಆದರೆ ವಾಟ್ಸ್‌ಅಪ್ ಆಧಾರಿತ ಸೇವೆಯನ್ನು ಇನ್ನೂ ಜಾರಿಗೊಳಿಸಿಲ್ಲ. ಕೇಂದ್ರ ಇ-ಆಡಳಿತ ಕೇಂದ್ರ (CeG) ಮೂಲಕ ಇ-ಆಡಳಿತವನ್ನು ಉತ್ತೇಜಿಸುತ್ತಿದ್ದರೂ, ವಾಟ್ಸ್‌ಅಪ್ ಸೇವೆಗೆ ಸಂಬಂಧಿಸಿದಂತೆ ಯಾವುದೇ ಟೈಮ್‌ಲೈನ್ ಅಥವಾ ಯೋಜನೆಯ ವಿವರಗಳು ಸಾರ್ವಜನಿಕವಾಗಿ ಲಭ್ಯವಿಲ್ಲ. ಈ ಬಗ್ಗೆ ಜನರ ತೆರಿಯಿಂದ ಲಕ್ಷ ಲಕ್ಷ ಸಂಬಳ ಪಡೆಯುವ ರಾಜ್ಯ ಶಾಸಕರುಗಳು ಸರಕಾರ ಮತ್ತು ಮಂತ್ರಗಳನ್ನು ಪ್ರಶ್ನೆ ಮಾಡುವುದು ಯಾವಾಗ ?

