ಕೊಣಾಜೆ : ಕೊಲೆ, ಸುಲಿಗೆ, ದಾಳಿ, ಎನ್ ಡಿಪಿಎಸ್ ಸೇರಿದಂತೆ ಎಂಟು ಪ್ರಕರಣಗಳ ಆರೋಪಿ ಕೊಣಾಜೆ ಠಾಣೆಯ ರೌಡಿಶೀಟರ್ ನಜೀಮ್ ಯಾನೆ ನಜ್ಜು (30) ಎಂಬಾತನನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ.



ಬಂಟ್ವಾಳ ತಾಲೂಕು ನರಿಂಗಾನದ ಪೊಟ್ಟೊಳಿಕೆ ನಿವಾಸಿ ನಜೀಮ್ ಯಾನೆ ನಜ್ಜು(30) ವಿರುದ್ಧ ಕೊಣಾಜೆ, ಮಂಗಳೂರು ಉತ್ತರ, ಬೇಗೂರು, ಬೆಂಗಳೂರು ನಗರ, ಭಟ್ಕಳ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳಿವೆ. ಆರೋಪಿ ವಿರುದ್ಧ ಹೊರಡಿಸಲಾದ ವಾರಂಟ್ ಹಾಗೂ ಪ್ರೊಕ್ಷಮೇಷನ್ ಬಾಕಿಯಿದ್ದ ಹಿನ್ನೆಲೆಯಲ್ಲಿ ಆರೋಪಿಯನ್ನು ಬೆಂಗಳೂರು ನಗರದಿಂದ ಪತ್ತೆಹಚ್ಚಿ ಬಂಧಿಸಲಾಗಿದೆ.
ಆರೋಪಿಯನ್ನು ಪತ್ತೆಹಚ್ಚುವಲ್ಲಿ ಕೊಣಾಜೆ ಠಾಣಾ ಪ್ರಭಾರ ಪೊಲೀಸ್ ನಿರೀಕ್ಷಕ ವಿರೂಪಾಕ್ಷ ಸ್ವಾಮಿ ಮಾರ್ಗದರ್ಶನದಲ್ಲಿ ಪಿಎಸ್ ಐ ಪುನೀತ್ ಗಾಂವ್ಕರ್ ಹಾಗೂ ನಾಗರಾಜ ಅವರ ನೇತೃತ್ವದಲ್ಲಿ ಹೆಡ್ ಕಾನ್ಸ್ ಸ್ಟೇಬಲ್ ಗಳಾದ ದಿನೇಶ್, ಮೊಹಮ್ಮದ್ ಶರೀಫ್, ರಮೇಶ್ ಸಹಕರಿಸಿದ್ದಾರೆ.




