ಮಂಗಳೂರು : ಪಿ.ಎ.ಪ್ರಥಮ ದರ್ಜೆ ಕಾಲೇಜು ಮತ್ತು ಸೆಂಟರ್ ಫಾರ್ ಮ್ಯಾನೇಜ್ಮೆಂಟ್ ಸ್ಟಡೀಸ್ ಅಂಡ್ ರಿಸರ್ಚ್ ಸೆಂಟರ್, ಸಂತ ಅಲೋಶಿಯಸ್ (ಪರಿಗಣಿತ ವಿವಿ) ಸಹಯೋಗದಲ್ಲಿ ಕನ್ವರ್ಜೆನ್ಸ್ – 2025 : ಸುಸ್ಥಿರ ಭವಿಷ್ಯದ ಕೃತಕ ಬುದ್ಧಿಮತ್ತೆಯ ಅಂತರ್ರಾಷ್ಟ್ರೀಯ ಸಮ್ಮೇಳನವು ಸೆ.27ರಂದು ನಡುಪದವು ಪಿ.ಎ. ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಲಿದೆ ಎಂದು ಪಿ.ಎ. ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಸರ್ಫ್ರಾಝ್ ಜೆ. ಹಾಸಿಮ್ ತಿಳಿಸಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಕೃತಕ ಬುದ್ಧಿಮತ್ತೆ ಅವಿಷ್ಕಾರಗಳನ್ನು ಹೇಗೆ ಮುನ್ನಡೆಸಬಹುದು ಮತ್ತು ಯುನೈಟೆಡ್ ನೇಷನ್ಗೆ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸುವಲ್ಲಿ ಹೇಗೆ ಸಹಕಾರಿಯಾಗಿತ್ತು ಎಂಬುದನ್ನು ಮುಕ್ತವಾಗಿ ಚರ್ಚಿಸಲು ವೇದಿಕೆಯನ್ನು ಕಲ್ಪಿಸಲಾಗುವುದು. ಪ್ರಮುಖ ವಿದ್ವಾಂಸರು, ಉದ್ಯಮ ತಜ್ಞರು ಹಾಗೂ ಸಂಶೋಧಕರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.
ಬಹರೈನ್ನ ಕಿಂಗ್ಡಮ್ ವಿವಿಯ ಕಾಲೇಜ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಶನ್ನ ಪ್ರೊ. ಇಕ್ಸಾಲ್ ತೋನ್ಸೆ ಹವಾಲ್ದಾರ್, ಯುಎಇ ವೆಸ್ಟ್ಟ್ಫೋರ್ಡ್ ಎಚ್ಈನ ಅಸೋಸಿಯೆಟ್ ಡೀನ್ ಡಾ.ಸೂಫಿ ಅನ್ವರ್ ಸಮ್ಮೇಳನದಲ್ಲಿ ಮುಖ್ಯ ಭಾಷಣ ಮಾಡಲಿರುವರು ಎಂದು ವಿವರಿಸಿದರು.
ಮಾನವ ಸಂಪನ್ಮೂಲ ನಿರ್ವಹಣೆ ಮತ್ತು ಸಂಸ್ಥೆಯ ವರ್ತನೆ, ಮಾರ್ಕೆಟಿಂಗ್ ಮತ್ತು ಗ್ರಾಹಕರ ವರ್ತನೆ, ಹಣಕಾಸು ಮತ್ತು ಫಿನ್ಟೆಕ್ , ಆಹಾರ, ಪೋಷಣಾ ವಿಜ್ಞಾನ ಮತ್ತು ಸಾರ್ವಜನಿಕ ಆರೋಗ್ಯ ಪೋಷಣೆ, ಕಂಪ್ಯೂಟರ್ ಅಪ್ಲಿಕೇಶನ್ಗಳು ಮತ್ತು ಉದಯೋನ್ಮುಖ ತಂತ್ರಜ್ಞಾನಗಳು ವಿಷಯಗಳಲ್ಲಿ ಸಮ್ಮೇಳದಲ್ಲಿ ಚರ್ಚೆ ನಡೆಯಲಿದೆ.
ಸಂಶೋಧನಾ ಪ್ರಬಂಧಕ್ಕೆ ಆಹ್ವಾನ : ಇದೇ ಸಂದರ್ದಲ್ಲಿ ಸಂಶೋಧನಾ ಪ್ರಬಂಧಕ್ಕೆ ಆಹ್ವಾನ ನೀಡಲಾಗಿದ್ದು, ಸಂಶೋಧಕರು, ಅಕಾಡೆಮಿಷಿಯನ್ಗಳು ಮತ್ತು ವೃತ್ತಿಪರರು ಲೇಖನಗಳನ್ನು ಎಮ್ಎಸ್ ವರ್ಡ್ ಫಾರ್ಮೆಟ್ನಲ್ಲಿ ಈಮೇಲ್ ಮೂಲಕ convergence@pace.edu.in ಸಲ್ಲಿಸಬಹುದು. ಸಾರಾಂಶ ಸಲ್ಲಿಸಲು ಕೊನೆಯ ದಿನಾಂಕ ಸೆ. 8 2025. ಸಂಪೂರ್ಣ ಲೇಖನ ಸಲ್ಲಿಕೆಯ ಕೊನೆಯ ದಿನಾಂಕ ಸೆ.15, ನೋಂದಣಿಗೆ ಕೊನೆಯ ದಿನ ಸೆ. 15 ಆಗಿರುತ್ತದೆ ಎಂದು ಹೇಳಿದರು.
ಹೆಚ್ಚಿನ ವಿವರಗಳಿಗೆ ಪಿಎ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಮಹಮ್ಮದ್ ಆರೀಫ್ (+919844635432) ಮತ್ತು ಸಂತ ಅಲೋಶಿಯೆಸ್ ಪರಿಗಣಿತ ವಿವಿಯ ಡಾ.ರೋಶನ್ ಎಫ್ ಡಿ ಸೋಜ (+919591050256) ಇವರನ್ನು ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಪಿಎ ಪ್ರಥಮ ದರ್ಜೆ ಕಾಲೇಜಿನ ಡೀನ್ ಡಾ.ಎ.ಎಸ್. ಸಯ್ಯದ್ ಅಮೀನ್ ಅಹ್ಮದ್ , ಸಹಾಯಕ ಪ್ರಾಧ್ಯಾಪಕ ಮಹಮ್ಮದ್ ಆರೀಫ್, ಪ್ರೊ.ವಾಣಿಶ್ರೀ ವೈ, ಸಂತ ಅಲೋಶಿಯೆಸ್ ಪರಿಗಣಿತ ವಿವಿಯ ಬಿಬಿಎ ವಿಭಾಗದ ಮುಖ್ಯಸ್ಥ ಸೋನಾಲ್ ಸ್ಟೀವನ್ ಲೋಬೊ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು


