ದೇರಳಕಟ್ಟೆ : ಯೆನೆಪೋಯ ಹೋಮಿಯೋಪತಿ ವೈದ್ಯಕೀಯ ಕಾಲೇಜಿನಲ್ಲಿ ದೇರಳಕಟ್ಟೆ ನಿವಾಸಿ ಹಸನ್ ಮತ್ತು ಆಯೇಷಾ ದಂಪತಿ ಪುತ್ರಿ ರಜಿಯಾ ಹಸನ್ ಇವರು ಐದು ವರ್ಷಗಳ ವೈದ್ಯಕೀಯ ಪದವಿಯನ್ನು ಪೂರೈಸಿ ವೈದ್ಯೆಯಾಗಿ ಹೊರಹೊಮ್ಮಿದ್ದಾರೆ.

ವೈದ್ಯಕೀಯ ಕ್ಷೇತ್ರವು ಕೇವಲ ವೃತ್ತಿಯಾಗದೆ, ಸೇವೆಯ ಒಂದು ಉದಾತ್ತ ರೂಪವಾಗಿದೆ. ತನ್ನ ಛಲ ಹಾಗೂ ಶ್ರದ್ಧೆಯಿಂದ ಶಿಕ್ಷಣ ಪೂರೈಸಿರುವ ರಜಿಯಾ ಹಸನ್ ಸಮಾಜಕ್ಕೆ ಉತ್ತಮ ಕೊಡುಗೆಯನ್ನು ನೀಡಲು ಸಿದ್ಧರಾಗಿದ್ದಾರೆ. ಒಬ್ಬ ವೈದ್ಯೆಯಾಗಿ ರೋಗಿಗಳಿಗೆ ಚಿಕಿತ್ಸೆ ನೀಡುವುದರ ಜೊತೆಗೆ , ಆರೋಗ್ಯ ಜಾಗೃತಿ, ಶಿಕ್ಷಣ ಮತ್ತು ಸಾಮಾಜಿಕವಾಗಿಯೂ ಕಾರ್ಯನಿರ್ವಹಿಸುವ ಕುರಿತು ಇಂಗಿತ ವ್ಯಕ್ತಪಡಿಸಿದ್ದಾರೆ. ರಜಿಯಾ ಹಸನ್ ಅವರ ಸಾಧನೆಯನ್ನು ಬಿಜೆಪಿ ಮಂಗಳೂರು ಮಂಡಲ ಅಲ್ಪಸಂಖ್ಯಾತ ಮೋರ್ಛಾ ಅಭಿನಂದಿಸಿದೆ.

