
ಕಾವೂರು : ವೀಣಾ ಡೆಕೋರ್ ಮತ್ತು ಈವೆಂಟ್ಸ್ ಮಾಲಕರಾದ ನವೀನ್ ಚಂದ್ರ ಸಾಲ್ಯಾನ್ ಮಾಲಕತ್ವದ ವಿ.ಡಿ. ಟ್ರೋಫಿ-2025ನ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟ ಕರಂಬಾರು ಕೊಪ್ಪಲ ಕ್ರಿಡಾಂಗಣದಲ್ಲಿ ನಡೆಯಿತು.
ಕ್ರಿಕೆಟ್ ಪಂದ್ಯಾಟ ಉದ್ಘಾಟನೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಫ್ಲವರ್ ಡೆಕೋರೇಷನ್ ಮಾಲಕರ ಸಂಘದ ಅಧ್ಯಕ್ಷರಾದ ತುಷಾರ್ ಸುರೇಶ್ ಉದ್ಘಾಟಿಸಿ ಕ್ರೀಡಾ ಕೂಟಕ್ಕೆ ಶುಭ ಹ್ಯಾರೆಸಿದರು.
ಕ್ರೀಡೆಯಲ್ಲಿ ಸೋಲು ಗೆಲುವು ಸಹಜ ಕ್ರೀಡಾ ಸ್ಫೂರ್ತಿ ಮುಖ್ಯ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ದ.ಕ ಜಿಲ್ಲಾ ಪ್ಲವರ್ ಡೆಕೋರೇಶನ್ ಯುನಿಯನ್ ಉಪಾಧ್ಯಕ್ಷರಾದ ಸುರೇಶ್ ಪೂಜಾರಿ, ಮಳವೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಸುರೇಶ್ ಪೂಜಾರಿ ಕೊಪ್ಪಲ, ಗಣೇಶ್ ಅರ್ಬಿ , ಕಾವೂರು ಕಚ್ಚೂರ ಮಾಲ್ದಿ ಕ್ಯಾಂಟೀನ್ ಮಾಲಕರಾದ ಶ್ರೀನಿವಾಸ , ಸುರೇಂದ್ರ ಕಾಮತ್ ಕೆಂಜಾರು, ಪ್ಲವರ್ ಡೇಕೋರೇಶನ್ ಮಾಲಕರಾದ ಸ್ಟಾನಿ ಅಂಚನ್ ಮುಂತಾದವರು ಉಪಸ್ಥಿತಿರಿದ್ದರು. ರಾಕೇಶ್ ಕುಂದರ್ ನಿರೂಪಿಸಿದರು. ವಿನಯ್ ಸಾಲ್ಯಾನ್ ವಂದಿಸಿದರು.

