
ಬೆಂಗಳೂರು: ರಾಜ್ಯ ಗಣಿ ಮತ್ತು ಭೂವಿಜ್ಞಾನ ಇಲಾಖೆ ನಿಯಮಬಾಹಿರ ಸುತ್ತೋಲೆಗಳನ್ನು ಹೊರಡಿಸಿ, ಕಾನೂನುಬದ್ಧವಾಗಿ ನಿಯಮಗಳನ್ನು ಅನುಷ್ಠಾನಗೊಳಿಸದೆ ಕ್ವಾರಿ ಮತ್ತು ಕ್ರಷರ್ ಓನರ್ಸ್ , ಲಾರಿ ಮಾಲೀಕರ ಮೇಲೆ ಕೋಟ್ಯಂತರ ದಂಡ ವಿಧಿಸಿರುವುದರ ವಿರುದ್ಧ ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಮತ್ತು ಕ್ರಷರ್ ಓನರ್ಸ್ ಅಸೋಸಿಯೇಷನ್ ಬೆಂಗಳೂರು ಇದರ ರಾಜ್ಯಾಧ್ಯಕ್ಷರು ಡಾ॥ ರವೀಂದ್ರ ಶೆಟ್ಟಿ ಬಜಗೋಳಿ ಇವರ ಮುಖಂಡತ್ವದಲ್ಲಿ ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯ ಹೂಡಿರುವ ದಾವೆ ಹಿನ್ನೆಲೆಯಲ್ಲಿ ಸರಕಾರಕ್ಕೆ ನೋಟೀಸ್ ಜಾರಿ ಮಾಡುವ ಮೂಲಕ ಪ್ರಾರಂಭಿಕ ಜಯ ದೊರೆತಿದೆ.
ಸರ್ಕಾರ ರಾಜಧನ ಪಾವತಿ ವ್ಯವಸ್ಥೆಯನ್ನು ಸಮರ್ಪಕಗೊಳಿಸಿಲ್ಲ. ಸರ್ಕಾರಿ ಕಾಮಗಾರಿ ನಿರ್ವಹಣಾ ಗುತ್ತಿಗೆದಾರರು ಮತ್ತು ಖಾಸಗೀ ಕಾಮಗಾರಿ ನಿರ್ವಹಣಾ ಗುತ್ತಿಗೆದಾರರು ಯಾವ ರೀತಿ ರಾಜಧನವನ್ನು ಎಲ್ಲಿ ಪಾವತಿಸಬೇಕೆಂದು ಕೇಂದ್ರ MMDR-1957 ಮತ್ತು ರಾಜ್ಯ KMMCR- 1994 ನಿಯಮಗಳಲ್ಲಿ ಸ್ಪಷ್ಟತೆ ಇದ್ದರೂ ಕೂಡಾ ಅದನ್ನು ರಾಜ್ಯ ಗಣಿ ಮತ್ತು ಭೂವಿಜ್ಞಾನ ಇಲಾಖೆ ನಿಯಮಬಾಹಿರ ಸುತ್ತೋಲೆಗಳನ್ನು ಹೊರಡಿಸಿ ಈ ಸುತ್ತೋಲೆಗೆ ಅನುಗುಣವಾಗಿ WEDA’s (Work Executive Department and Agencies) ಸಂಗ್ರಹಿಸಿರುತ್ತದೆ. ನಿಯಮಗಳನ್ನು ಕಾನೂನುಬದ್ದವಾಗಿ ಅನುಷ್ಠಾನ ಮಾಡಿಲ್ಲ. ಮತ್ತು ಲಾರಿ ಮಾಲೀಕರುಗಳಿಗೂ ಸ್ಪಷ್ಟ ನಿರ್ದೇಶನವನ್ನೂ ನೀಡಿಲ್ಲ. ಕ್ರಷರ್ , ಕ್ವಾರಿ ಮಾಲೀಕರುಗಳಿಗೆ , ಲಾರಿ ಮಾಲೀಕರುಗಳಿಗೆ ದಿನಃ ಪ್ರತೀ ಕೋಟ್ಯಾಂತರ ರೂ. ದಂಡ ವಿಧಿಸಲಾಗುತ್ತಿದೆ . ಮಾತ್ರವಲ್ಲದೇ ಉದ್ಯಮಕ್ಕೆ, ಸರ್ಕಾರಿ ಮತ್ತು ಖಾಸಗೀ ಕಾಮಗಾರಿ ನಿರ್ವಹಣಾ ಗುತ್ತಿಗೆದಾರರಿಗೆ ಹಾಗೂ ಲಾರಿ ಮಾಲೀಕರುಗಳಿಗೂ ಸಮಸ್ಯೆಯಾಗುತ್ತಿದೆ.
ಈ ಬಗ್ಗೆ ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯ, ಬೆಂಗಳೂರು ಇಲ್ಲಿ PIL (Public Interest Litigation No: 21919/2025) , ಹೂಡಿರುವ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡು ದಾವೆಯನ್ನು ಅಂಗೀಕರಿಸಿ ಪ್ರತಿವಾದಿಗಳಾದ ಸರ್ಕಾರಕ್ಕೆ ನೋಟೀಸ್ ಜಾರಿ ಮಾಡಿದೆ. ಇದು ಕಾನೂನುಬದ್ಧ ಗಣಿಗಾರಿಕೆ ನಡೆಸುವುದಕ್ಕೆ ಫೆಡರೇಷನ್ ಹೋರಾಟಕ್ಕೆ ಸಿಕ್ಕ ಪ್ರಾರಂಭಿಕ ಜಯವಾಗಿದೆ. ಈ ಪ್ರಕರಣವನ್ನು ಹೈಕೋರ್ಟ್ ವಕೀಲರಾದ ಮಹೇಂದ್ರ ಎಸ್. ಎಸ್ ವಾದಿಸಿದ್ದರು.
ಅಸೋಸಿಯೇಷನ್ ಪ್ರಮುಖ ಬೇಡಿಕೆಗಳು
1.ಸರ್ಕಾರ ದ್ವಂದ್ವ ರೀತಿಯಲ್ಲಿರುವ ರಾಜಧನ ಪಾವತಿ ವ್ಯವಸ್ಥೆಯನ್ನು ಸಮರ್ಪಕಗೊಳಿಸಬೇಕು.
2.ಸರ್ಕಾರ WEDA’s (Work Executive Department and Agencies) ಗಳಿಂದ ರಾಜಧನ ಸಂಗ್ರಹಿಸಿ ಸರ್ಕಾರಕ್ಕೆ ಸಂದಾಯವಾಗತಕ್ಕ ರಾಜಧನ ಸಂದಾಯವಾಗಿರುವುದರಿಂದ ಇದುವರೆಗೆ ದಂಡ ವಿಧಿಸಿರುವ ಪ್ರಕರಣಗಳನ್ನು ಹೆಕ್ಟೇರ್ ವಾರು ದಂಡ ವಿಧಿಸಿ ಮುಕ್ತಾಯಗೊಳಿಸಬೇಕು.
3.KMMCR-1994 ನಿಯಮಗಳನ್ನು ಕಾಲಮಿತಿಯೊಳಗೆ ಕಟ್ಟುನಿಟ್ಟಾಗಿ ಅನುಷ್ಠಾನ- ಗೊಳಿಸಬೇಕು.
ಸರ್ಕಾರಕ್ಕೆ ದಿನಃಪ್ರತೀ ಕೋಟ್ಯಾಂತರ ರೂ. ಸೋರಿಕೆಯಾಗುವುದನ್ನು ತಡೆಗಟ್ಟಿ ನಮಗೆ ಕಾನೂನುಬದ್ದವಾಗಿ ಗಣಿಗಾರಿಕೆ ನಡೆಸುವುದಕ್ಕೆ ಅವಕಾಶ ಕಲ್ಪಿಸಬೇಕು.
ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಒನರ್ಸ್ ಅಸೋಸಿಯೇಷನ್(ರಿ),ಬೆಂಗಳೂರು ಇದರ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಹಾಗೂ ಫೆಡರೇಶನ್ನಿನ ಎಲ್ಲಾ ಪದಾಧಿಕಾರಿಗಳ ಸಹಕಾರದೊಂದಿಗೆ ಆರಂಭಿಕ ಜಯ ಸಿಕ್ಕಿದೆ ಅನ್ನುವುದು ಡಾ॥ ರವೀಂದ್ರ ಶೆಟ್ಟಿ ಬಜಗೋಳಿ ತಿಳಿಸಿದ್ದಾರೆ.,.

