ಕೊಣಾಜೆ : ಮಂಚಿ ಸಮೀಪದ ಕುಕ್ಕಾಜೆ ಬಾಕಿಮಾರು ನಿವಾಸಿ ಇಸ್ಮಾಯೀಲ್ ಕುಕ್ಕಾಜೆ (64) ಅಲ್ಪ ಕಾಲದ ಅಸೌಖ್ಯದಿಂದ ಸೋಮವಾರ ನಿಧನರಾದರು. ಇವರು ಇರಾ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಅಬ್ದುಲ್ ರಝಕ್ ಇರಾ ಅವರ ಸಹೋದರರಾಗಿದ್ದಾರೆ.

ಮೃತರು ಪತ್ನಿ, ಇಬ್ಬರು ಪುತ್ರರು, ಮೂವರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರಿಗೆ ಸ್ಪೀಕರ್ ಯು. ಟಿ ಖಾದರ್ ಸಂತಾಪ ಸೂಚಿಸಿದ್ದಾರೆ.

