
ಉಳ್ಳಾಲ: ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯ ನಾಗರಿಕರಿಗೆ ಭಾರತ ಸರಕಾರವು ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ) 2.0 ಯೋಜನೆಯಡಿ “ಸರ್ವರಿಗೂ ಸೂರು” ಒದಗಿಸಲು ನೀಡುವ ಸಹಾಯಧನಕ್ಕೆ ನಿವೇಶನ ರಹಿತರಿಂದ ಅರ್ಜಿಯನ್ನು ಕಛೇರಿಗೆ ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಕೋಟೆಕಾರು ಪಟ್ಟಣ ಪಂಚಾಯತ್ ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2024ರ ಸೆ.01 ರಿಂದ ಅನ್ವಯವಾಗುವಂತೆ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಈ ಯೋಜನೆಯಡಿ ಮುಂದಿನ 5 ವರ್ಷಗಳಲ್ಲಿ ದೇಶಾದ್ಯಂತ ನಗರ ಪ್ರದೇಶಗಳಲ್ಲಿ ಒಂದು ಕೋಟಿ ಬಡವರು, ಕೊಳಚೆ ನಿವಾಸಿಗಳನ್ನು ಒಳಗೊಂಡಂತೆ ಮಧ್ಯಮ ವರ್ಗದವರಿಗೆ ಸೂರು ಒದಗಿಸಲು ಸಹಾಯಧನ ಒದಗಿಸಲಾಗುವುದು. ಆದ್ದರಿಂದ ಪುರಸಭಾ ವ್ಯಾಪ್ತಿಯಲ್ಲಿ ವಾಸಿಸುವ ವಸತಿ ರಹಿತರು ಮತ್ತು ಕೇಂದ್ರ ಸರಕಾರದ ವೆಬ್ ಪೋರ್ಟಲ್ ನಲ್ಲಿ ಫಲಾನುಭವಿಗಳು ಸ್ವ-ಇಚ್ಛೆಯಿಂದ ಅರ್ಜಿಯನ್ನು ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಯನ್ನು ಕೋಟೆಕಾರು ಪ.ಪಂ ಕಛೇರಿಯ ವಸತಿ ಶಾಖೆಯಲ್ಲಿ ಕಚೇರಿ ಸಮಯ ಬೆಳಿಗ್ಗೆ ಗಂಟೆ 10.00 ರಿಂದ ಸಂಜೆ 5.30ರೊಳಗೆ ಪಡೆದುಕೊಳ್ಳುವಂತೆ ಸೂಚಿಸಲಾಗಿದೆ.
ಸಲ್ಲಿಸಬೇಕಾದ ದಾಖಲೆಗಳು : (URL address: https://pmay-urban.gov.in) ಕೇಂದ್ರ ಸರ್ಕಾರದ ಪಿಎಂಎವೈ ನಗರ 2.0 ಯೋಜನೆಗೆ ಆನ್ ಲೈನ್ ಅರ್ಜಿ ಸಲ್ಲಿಸಲು ಬೇಕಾದ ದಾಖಲೆ • AHP ಮನೆ :(ಸ್ವಂತ ನಿವೇಶನ ಇಲ್ಲದವರಿಗೆ 45 Sqm ಮನೆ ನಿರ್ಮಿಸಲು (ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಕಾರದೊಂದಿಗೆ) ಅರ್ಜಿದಾರರ ಭಾವಚಿತ್ರ, ಆದಾಯ ಪ್ರಮಾಣಪತ್ರ(ಆದಾಯದ ಮಿತಿ ವಾರ್ಷಿಕ ರೂ.3.00 ಲಕ್ಷದ ಒಳಗೆ ಇರತಕ್ಕದ್ದು), ಅರ್ಜಿದಾರರ ತಂದೆ ತಾಯಿ ಜೀವಂತವಿದ್ದರೆ ಅವರ ಆಧಾರ್ ಕಾರ್ಡ್/ ಮರಣ ಹೊಂದಿದ್ದರೆ ಮರಣ ಪ್ರಮಾಣ ಪತ್ರದ ಪ್ರತಿ, ಕುಟುಂಬದ ಸದಸ್ಯರ ಆಧಾರ್ ಕಾರ್ಡ್ ಪ್ರತಿ, ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ, ಆಧಾರ್ ಲಿಂಕ್ಡ್ ಮೊಬೈಲ್, ರೇಷನ್ ಕಾರ್ಡ್ ಪ್ರತಿ, ಮತದಾರರ ಗುರುತಿನ ಚೀಟಿಯ ಪ್ರತಿ. • BLC ಮನೆ : (ಸ್ವಂತ ನಿವೇಶನ ಹೊಂಧಿರುವವರಿಗೆ-2.50 ಲಕ್ಷದ ಆರ್ಥಿಕ ಸಹಾಯ) ಅರ್ಜಿದಾರರ ಭಾವಚಿತ್ರ, ಆದಾಯ ಪ್ರಮಾಣಪತ್ರ (ಆದಾಯದ ಮಿತಿ ವಾರ್ಷಿಕ ರೂ.3.00ಲಕ್ಷದ ಒಳಗೆ ಇರತಕ್ಕದ್ದು) ಅರ್ಜಿದಾರರ ಭಾವಚಿತ್ರ, ನಿವೇಶನಕ್ಕೆ ಸಂಬಂಧಿಸಿದ ದಾಖಲೆಗಳು (ಹಕ್ಕುಪತ್ರ/ಕ್ರಯಪತ್ರ/ದಾನಪತ್ರ/ಉಡುಗೊರೆ ಪತ್ರ/ಖಾತಾ), ಅರ್ಜಿದಾರರ ತಂದೆ ತಾಯಿ ಜೀವಂತವಿದ್ದರೆ ಅವರ ಆಧಾರ್ ಕಾರ್ಡ್/ ಮರಣ ಹೊಂದಿದ್ದರೆ ಮರಣ ಪ್ರಮಾಣ ಪತ್ರದ ಪ್ರತಿ, ಕುಟುಂಬದ ಸದಸ್ಯರ ಆಧಾರ್ ಕಾರ್ಡ್ ಪ್ರತಿ, ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ, ಆಧಾರ್ ಲಿಂಕ್ಡ್ ಮೊಬೈಲ್, ರೇಷನ್ ಕಾರ್ಡ್ ಪ್ರತಿ, ಮತದಾರರ ಗುರುತಿನ ಚೀಟಿಯ ಪ್ರತಿಯನ್ನು ಒದಗಿಸಬೇಕಿದೆ.




