ಅಸೈಗೋಳಿ : ಬಿಜೆಪಿ ಮಂಗಳೂರು ಮಂಡಲದ ಕೊಣಾಜೆ ಪಟ್ಟೋರಿ ಬೂತ್ ವತಿಯಿಂದ ಗುರುಪೂರ್ಣಿಮೆಯ ಗುರುವಂದನೆಯನ್ನು ಹಿರಿಯರು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರು, ಕೊಣಾಜೆ ಗ್ರಾಮಪಂಚಾಯತ್‌ನ ಮಾಜಿ ಉಪಾಧ್ಯಕ್ಷರು ಕರುಣಾಕರ ಕಾನ ಇವರಿಗೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಮಂಗಳೂರು ಮಂಡಲದ ಅಧ್ಯಕ್ಷ ರಾದ ಜಗದೀಶ್ ಆಳ್ವ ಕುವತ್ತಬೈಲು, ಕಾರ್ಯದರ್ಶಿಯಾದ ಭರತ್ ರಾಜ್ ಗಟ್ಟಿ ಕೊಣಾಜೆ, ಕೊಣಾಜೆ ಶಕ್ತಿ ಕೇಂದ್ರದ ಪ್ರಮುಖರಾದ ಸನತ್ ಕುಮಾರ್ ರೈ ಕಕ್ಕೆಮಜಲು, ಪಟ್ಟೋರಿ ವಾರ್ಡ್ ಸಮಿತಿಯ ಅಧ್ಯಕ್ಷರಾದ ಗಂಗಾಧರ ಪಟ್ಟೋರಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರಾದ ಸತೀಶ್ ಪಟ್ಟೋರಿ, ಯತೀನ್ ಪಟ್ಟೋರಿ ಮದಕ, ಮತ್ತು ರಾಮಕೃಷ್ಣ ಪಟ್ಟೋರಿ ಉಪಸ್ಥಿತರಿದ್ದರು



