
ಉಳ್ಳಾಲ: ಪಾವೂರು ಗ್ರಾಮದ ಇನೋಳಿ ಶ್ರೀ ಸೋಮನಾಥೇಶ್ವರ ದುರ್ಗಾಪರಮೇಶ್ವರೀ ದೇವಸ್ಥಾನದ ಅಭಿವೃದ್ಧಿ ನಿಟ್ಟಿನಲ್ಲಿ ಅನುದಾನ ಒದಗಿಸುವಂತೆ ಸಮಿತಿಯ ಪದಾಧಿಕಾರಿಗಳು ಹಾಗೂ ಭಕ್ತರು ಸ್ಪೀಕರ್ ಯು.ಟಿ.ಖಾದರ್ ಅವರಿಗೆ ಮನವಿ ಸಲ್ಲಿಸಿದರು.
ಇನೋಳಿ ದೇವಂದಬೆಟ್ಟದಲ್ಲಿರುವ ದೇವಸ್ಥಾನಕ್ಕೆ ಪ್ರತಿದಿನ ನೂರಾರು ಭಕ್ತರು ಭೇಟಿ ನೀಡುತ್ತಿದ್ದು ಅನ್ನಛತ್ರ ಇಲ್ಲದೆ ಅನ್ನಪ್ರಸಾದ ಸೇವೆಗೆ ತೊಂದರೆಯಾಗಿದೆ. ದೇವಸ್ಥಾನ ನೂರಂತಸ್ತಿನ ಛಾವಣೆ ಹೊಂದಿದ್ದು ಮಳೆಗಾಲದಲ್ಲಿ ಛಾವಣಿಯ ಹೆಂಚುಗಳು ಗಾಳಿಗೆ ಹಾರಿಹೋಗುತ್ತಿದೆ. ಎರಡು ಅಂತಸ್ತಿನ ಮೇಲ್ಛಾವಣಿಯ ತಾಮ್ರದ ಹೊದಿಕೆಯ ಕೆಲಸ ಬಾಕಿಯಿದೆ. ಅಲ್ಲದೆ ಧ್ವಜಸ್ತಂಭ, ರಾಜಗೋಪುರ ಹಾಗೂ ಅಂಗಳಕ್ಕೆ ಹಾಸುವ ಕಲ್ಲುಗಳ ಅವಶ್ಯಕತೆ ಇದ್ದು ಇದಕ್ಕೆ ಅನುದಾನ ಒದಗಿಸುವಂತೆ ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಹಾಸ ಪೂಂಜಾ ಕಿಲ್ಲೂರುಗುತ್ತು, ಸೇವಾ ಸಮಿತಿ ಅಧ್ಯಕ್ಷ ಪ್ರಸಾದ್ ರೈ ಚೇಂಬೂರು ಹಾಗೂ ಭಕ್ತರು ಮನವಿ ಮಾಡಿದ್ದಾರೆ.



