
ಉಳ್ಳಾಲ: ಉಳ್ಳಾಲ ಪೊಲೀಸ್ ಠಾಣೆಯಿಂದ ಮಂಗಳೂರಿನ ವಿವಿಧ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡ ಆರು ಮಂದಿ ಸಿಬ್ಬಂದಿಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಬೀಳ್ಕೊಡುಗೆ ನಡೆಯಿತು.
ಉಳ್ಳಾಲ ಠಾಣೆಯಲ್ಲಿದ್ದ ಉಪನಿರೀಕ್ಷಕರಾಗಿರುವ ಧನರಾಜ್ (ಪಾಂಡೇಶ್ವರ ಠಾಣೆ), ಸಹಾಯಕ ಉಪನಿರೀಕ್ಷಕರಾದ ಮೊಹಮ್ಮದ್(ಬರ್ಕೆ) , ಸುನಿಲ್ (ಬಂದರು), ಹೆಡ್‌ಕಾನ್‌ಸ್ಟೇಬಲ್‌ಗಳಾದ ರಂಜಿತ್( ಸಿಎಸ್‌ಬಿ ವಿಭಾಗ), ಮಹೇಶ್ (ಬಂದರು) ಹಾಗೂ ಮಹಿಳಾ ಹೆಡ್‌ಕಾನ್‌ಸ್ಟೇಬಲ್ ಪೂರ್ಣಿಮಾ(ಕೊಣಾಜೆ) ಇವರಿಗೆ ಬೀಳ್ಕೊಡುಗೆ ಉಳ್ಳಾಲ ಠಾಣೆಯಲ್ಲಿ ನಡೆಯಿತು.
ಈ ಸಂದರ್ಭ ಠಾಣಾಧಿಕಾರಿ ವಿರೂಪಾಕ್ಷ ಸ್ವಾಮಿ, ಉಪನಿರೀಕ್ಷಕರುಗಳಾದ ಶೀತಲ್, ಸಿದ್ದಪ್ಪ, ಸಂತೋಷ್, ಕೃಷ್ಣ, ಸಹಾಯಕ ಉಪನಿರೀಕ್ಷಕರಾದ ಶೇಖರ್ ಗಟ್ಟಿ, ಮನ್ಸೂರ್, ಹೆಡ್ ಕಾನ್ ಸ್ಟೇಬಲ್ ಗಳಾದ ಶ್ರೀಲತಾ, ಪೇದೆ ರಿಯಾಝ್ ಉಪಸ್ಥಿತರಿದ್ದರು.
