
ಉಳ್ಳಾಲ: ಹರೇಕಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡೆಂಜ ಕಡವಿನಬಳಿಯ ನಿವಾಸಿಗಳಿಗೆ ಮನೆಬಿಟ್ಟು ದೂರದ ಸಂಬAಧಿಕರ ಅಥವಾ ಕಾಳಜಿ ಕೇಂದ್ರಕ್ಕೆ ತೆರಳುವಂತೆ ಒತ್ತಾಯಪೂರ್ವಕವಾಗಿ ನೀಡಿರುವ ನೋಟೀಸ್ ನ್ನು ಒಪ್ಪುವುದಿಲ್ಲ.
ಶಾಶ್ವತ ಪರಿಹಾರವಾಗಿ ವಾಸಸ್ಥಳ ಒದಗಿಸಿದಲ್ಲಿ ಮನೆ ಬಿಟ್ಟು ಹೋಗುತ್ತೇವೆ ಹೊರತು 80 ವರ್ಷಗಳಿಂದ ವಾಸಿಸುತ್ತಿರುವ ಮನೆಯನ್ನು ತೊರೆದು ಮೂಲಭೂತ ಸೌಕರ್ಯಗಳೇ ಇಲ್ಲದ ಕಾಳಜಿ ಕೇಂದ್ರಗಳಲ್ಲಿ ನೆಲೆಸಲು ಸಿದ್ಧರಿಲ್ಲ ಎಂದು ಹರೇಕಳ ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಸರ್ವ ಸದಸ್ಯರು ಹಾಗೂ ಅಭಿವೃದ್ಧಿ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.
ಹರೇಕಳ ಗ್ರಾಮದ ಕಡವಿನಬಳಿ ಪ್ರದೇಶ ನೇತ್ರಾವತಿ ನದಿ ತೀರದಲ್ಲಿದೆ. ಅಲ್ಲಿ ವಾಸ್ತವ್ಯವಿರುವ ಮನೆಗಳು ತುಂಬಾ ಅಪಾಯಕಾರಿ ಸ್ಥಿತಿಯಲ್ಲಿದೆ. ಕೂಡಲೇ ವಾಸದ ಮನೆಯನ್ನು ತೊರೆದು ಸಂಬAಧಿಕರ ಮನೆ ಅಥವಾ ಗ್ರಾ.ಪಂ ವ್ಯಾಪ್ತಿಯಲ್ಲಿರುವ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಗೊಳ್ಳುವAತೆ ನೋಟೀಸಿನಲ್ಲಿ ತಿಳಿಸಿದ್ದಾರೆ. ಆದರೆ ಕಡೆಂಜ ನಿವಾಸಿಗಳ ಪ್ರಕಾರ 80 ವರ್ಷಗಳಿಂದ ಸ್ಥಳದಲ್ಲಿ ವಾಸಿಸುತ್ತಿದ್ದೇವೆ. ಗಾಳಿ, ಮಳೆ, ಬಿರುಗಾಳಿ ಸಂದರ್ಭದಲ್ಲೂ ವಾಸದ ಮನೆ ಬಿಟ್ಟು ಹೋದವರಲ್ಲ. ಆದರೆ ಗುಡ್ಡ ಕುಸಿತದ ಭೀತಿಯನ್ನು ಮುಂದಿಟ್ಟು ದೂರದ ಸಂಬAಧಿಕರ ಅಥವಾ ಕಾಳಜಿ ಕೇಂದ್ರಕ್ಕೆ ತೆರಳುವಂತೆ ಒತ್ತಾಯಪೂರ್ವಕವಾಗಿ ನೋಟೀಸ್ ನೀಡಿ ಸಹಿ ಹಾಕಿಸಿಕೊಂಡಿದ್ದಾರೆ. ಕಾಳಜಿ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳಾದ ಶೌಚಾಲಯ, ಕುಡಿಯುವ ನೀರು, ಗೌಪ್ಯತೆ ಮತ್ತು ಸುರಕ್ಷತೆಯ ಕೊರತೆಯಿದೆ. ವಿಶೇಷವಾಗಿ ಮಹಿಳೆಯರು, ಮಕ್ಕಳು, ವೃದ್ಧರಿರುವಾಗ ಅಸಾಧ್ಯ. ಅಲ್ಲದೆ ಇಲ್ಲಿರುವವರು ಯಾರೂ ಗುಡಿಸಲಿನ ಜನಾಂದವರಲ್ಲ, ಟೆಂಟ್ ವಾಸಿಸುವವರೂ ಅಲ್ಲ. ಎಲ್ಲರಿಗೂ ಸಂಸಾರವಿದೆ. ಗ್ರಾ.ಪಂ ಮತ್ತು ಜಿಲ್ಲಾಡಳಿತ ಶಾಶ್ವತ ಪರಿಹಾರವಾಗಿ ಸುಸಜ್ಜಿತ ವಾಸಸ್ಥಳ ಒದಗಿಸಿದಲ್ಲಿ ಮನೆಗಳನ್ನು ಬಿಟ್ಟು ಸ್ಥಳಾಂತರಗೊಳ್ಳಲು ಸಿದ್ಧರಿದ್ದೇವೆ. ಕೇವಲ ಮಳೆಗಾಲದಲ್ಲಿ ತೆರಳುವಂತೆ ಸೂಚಿಸುವುದನ್ನು ಒಪ್ಪುವುದಿಲ್ಲ. ಸಾಧ್ಯವಾದಲ್ಲಿ ಗುಡ್ಡದ ತಳಭಾಗ ತಡೆಗೋಡೆ ರಚಿಸಿರಿ, ಗುಡ್ಡದ ತುದಿಗಳಲ್ಲಿರುವ ಮರ ಕಡಿಯಿರಿ, ವಿದ್ಯುತ್ ಕಂಬಗಳನ್ನು ತೆರವುಳಿಸಿರಿ. ಈ ಕುರಿತು ಹಿಂದಿನಿAದಲೂ ಗ್ರಾ.ಪಂ.ಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮಕೈಗೊಂಡಿಲ್ಲ. ಹಾಗಾಗಿ ಶಾಶ್ವತ ವಾಸಸ್ಥಳ ವ್ಯವಸ್ಥೆಯಾಗುವವರೆಗೆ ಈಗಿರುವ ಮನೆಗಳಿಂದ ಯಾವುದೇ ಕಾರಣಕ್ಕೆ ಹೊರಹೋಗುವುದಿಲ್ಲವೆಂದು ತಿಳಿಸಿದ್ದಾರೆ.
