Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
ಕೋಟೆಕಾರು

ಬಗಂಬಿಲದಲ್ಲಿ ಕ್ರೀಡಾಂಗಣ, ವಾಕಿಂಗ್‌ ಟ್ರ್ಯಾಕ್‌ ಉದ್ದೇಶಿತ ಜಮೀನಿನಲ್ಲಿ ಎಸ್‌ಟಿಪಿ ಯೋಜನೆ ! ಜನ ಊರು ಬಿಡುವುದು ಗ್ಯಾರಂಟಿ, ಶಾಸಕರ ಗ್ಯಾರಂಟಿಯೋ? ಸರಕಾರದ ಗ್ಯಾರಂಟಿಯೋ, ನಿವಾಸಿಗಳ ಪ್ರಶ್ನೆ

UllalaVaniBy UllalaVaniApril 19, 2025Updated:April 20, 2025No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಕೋಟೆಕಾರು: ಪಟ್ಟಣ ಪಂಚಾಯತ್‌ ವ್ಯಾಪ್ತಿಗೆ ಬರುವ ಬಗಂಬಿಲ ಪ್ರದೇಶದ ಸರ್ವೆ ನಂಬರ್‌ 301/3 ರಲ್ಲಿ 1.50 ಎಕರೆ ಜಮೀನನ್ನು ಎಫ್‌ ಎಸ್‌ ಟಿಪಿ ಮತ್ತು ಎಸ್‌ ಟಿಪಿ ಕಾದಿರಿಸಲು ಕೋಟೆಕಾರು ಪ.ಪಂ ಗೆ ಉಳ್ಳಾಲ ತಾಲೂಕು ತಹಶೀಲ್ದಾರ್‌ ಆದೇಶಿಸಿದ್ದು, ಕೋಟೆಕಾರು ವ್ಯಾಪ್ತಿಯಲ್ಲಿ ನಿವೇಶನ ರಹಿತರ ಸಂಖ್ಯೆ ಅಧಿಕವಿದ್ದರೂ, ಕ್ರೀಡಾಂಗಣ, ವಾಕಿಂಗ್‌ ಪಾತ್ ‌, ಪಾರ್ಕಿಂಗ್‌ ಮೀಸಲಿರಿಸಿದ್ದ ಜಮೀನನ್ನು ಇದೀಗ ಏಕಾಏಕಿ ಕೊಳಚೆ ಸ್ಥಾವರ ನಿರ್ಮಿಸಲು ಮುಂದಾಗಿರುವುದು ಬಗಂಬಿಲ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಪಟ್ಟಣ ಪಂಚಾಯತ್‌ ನ ನಿರ್ಣಯ ಪಡೆದುಕೊಳ್ಳದೇ, ಅಲ್ಲದೆ ಸಂಬಂಧಿಸಿದ ಪರಿಸರ ಇಲಾಖೆಯಿಂದ ನಿರಾಕ್ಷೇಪಣಾ ಪತ್ರವನ್ನು ಪಡೆಯದೇ ಏಕಾಏಕಿ ನಿರ್ಧಾರ ಕೈಗೊಂಡಿರುವುದು ಹಲವರ ಅನುಮಾನಕ್ಕೆ ಕಾರಣವಾಗಿದೆ.

ಬಗಂಬಿಲ ಪರಿಸರದಲ್ಲಿ ಕೊಳಚೆ ನೀರು ಸಂಸ್ಕರಿಸುವ ಘಟಕವನ್ನು ಸ್ಥಾಪಿಸಲು ಉದ್ದೇಶಿಸುವ ಮೂಲಕ ಬಗಂಬಿಲ ಪರಿಸರ ನಿವಾಸಿ ಜನರ ಜೀವದ ಜೊತೆಗೆ ಅಧಿಕಾರಿಗಳು ಚೆಲ್ಲಾಟವಾಡುತ್ತಿದ್ದಾರೆ. ಜನತೆ ಹಿತವನ್ನು ಕಾಪಾಡಬೇಕಾದ ಕೋಟೆಕಾರು ಪಟ್ಟಣ ಪಂಚಾಯತ್‌ ಕೌನ್ಸಿಲರುಗಳ ವಿಶ್ವಾಸವನ್ನು ಪಡೆದುಕೊಳ್ಳದೇ ತಹಶೀಲ್ದಾರ್‌ ನಿರ್ಣಯಕ್ಕೆ ಮುಂದಾಗಿರುವುದು ಜನತೆ ಆಕ್ರೋಶಕ್ಕೆ ಕಾರಣವಾಗಿದೆ. ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣವಾದಲ್ಲಿ ಮಗುವಿನಿಂದ ಹಿಡಿದು ವಯಸ್ಸಾದವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಇದರಿಂದ ಶ್ವಾಸಕೋಶ ಸಂಬಂಧಿಸಿದ ಕಾಯಿಲೆ, ಕ್ಯಾನ್ಸರ್ ಹಾಗೂ ಇನ್ನಿತರ ಆರೋಗ್ಯ ಸಮಸ್ಯೆಗಳು ಎದುರಾಗಲಿದೆ ಎಂಬ ಆತಂಕವನ್ನು ಬಗಂಬಿಲ ನಿವಾಸಿಗಳು ವ್ಯಕ್ತಪಡಿಸಿದ್ದಾರೆ.

ಕಾನೂನು ಚೌಕಟ್ಟು ಮೀರಿದ  ತಹಸೀಲ್ದಾರರು!?
ಸ್ಥಳೀಯ ನಿವಾಸಿಗಳಿಗೂ, ಕೋಟೆಕಾರು ಪಟ್ಟಣ ಪಂಚಾಯತ್ ಸದಸ್ಯರಿಗೂ ಮಾಹಿತಿ ನೀಡದೆ, ಕನಿಷ್ಠ ನಿರ್ಣಯವನ್ನೂ ಮಾಡದೆ ಕೋಟೆಕಾರು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗೆ ಉಳ್ಳಾಲ ತಾಲೂಕು ತಹಶಿಲ್ದಾರರು ಪೋನ್ ಕರೆ ಮಾಡಿ ಮೌಖಿಕ ಅದೇಶ ಮಾಡುವ ಎಫ್ ಎಸ್ ಟಿಪಿ/ ಎಸ್ ಟಿ ಪಿ ಗೆ  ಕೂಡಲೇ ಜಾಗ ಕಾಯ್ದಿರಿಸಲು ಒತ್ತಡ ತಂದಿರುವ ಬಗ್ಗೆ ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.

ಆದೇಶ ನೀಡುವಾಗ ಕೋಟೆಕಾರು ಪಂಚಾಯತ್ ಮುಖ್ಯಾಧಿಕಾರಿಗಳ ಫೋನ್ ಕರೆಯ ಪತ್ರದ ಬಗ್ಗೆ ಸಹಾಯಕ ಕಮಿಷನರ್ ಪ್ರಶ್ನೆ ಮಾಡಿ ಸ್ಪಷ್ಟ ನೆಯನ್ನು ತಹಶೀಲ್ದಾರಿಗೆ ಕೇಳಿಲ್ಲ . ಇದರ ಹಿಂದೆ ಕಾಂಗ್ರೆಸ್ ಮುಖಂಡರು ಹಾಗೂ ಈ ಭಾಗದ ಶಾಸಕರ ಕೈವಾಡವಿದೆ ಅನ್ನುವ ಆರೋಪ ಮಾಡಿದ್ದಾರೆ.

ಕಾನೂನು ಪ್ರಕಾರ ಯಾವುದೇ ತ್ಯಾಜ್ಯ ಘಟಕವನ್ನು ವಸತಿ ಪ್ರದೇಶಗಳಿರುವ ಕಡೆ ಮಾಡುವಂತಿಲ್ಲ. ಇದು ಮಾಡುವ ಮುನ್ನ  ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆಯಬೇಕು.ಕೋಟೆಕಾರು ಪಟ್ಟಣ ಪಂಚಾಯತ್ ನಿಂದ ನಿರಪೇಕ್ಷಣಾ ಪತ್ರ ಎನ್ ಓಸಿ ಪಡೆಯುವುದು ಕಡ್ಡಾಯ . ಸಾಮಾನ್ಯ ಘನ ತ್ಯಾಜ್ಯ ಘಟಕಗಳಿಗೆ 200-500 ಮೀಟರ್, ಲ್ಯಾಂಡ್‌ಫಿಲ್‌ಗೆ 500 ಮೀಟರ್-1 ಕಿಮೀ, ಮತ್ತು ಅಪಾಯಕಾರಿ ತ್ಯಾಜ್ಯ ಘಟಕಗಳಿಗೆ 500 ಮೀಟರ್-1 ಕಿಮೀ ದೂರವನ್ನು ಬೇಕೆಂದು ಕಾನೂನು ಇದೆ. ವಸತಿ ಪ್ರದೇಶದ ಸಮೀಪದ ಸಮುದಾಯದಿಂದ ಯಾವುದೇ ವಿರೋಧವಿಲ್ಲ ಎಂಬುದನ್ನು ಖಾತರಿಪಡಿಸಿಕೊಳ್ಳಲು ಸಾರ್ವಜನಿಕ ಸಮಾಲೋಚನೆ ನಡೆಸಬೇಕು. ಈ ಬಗ್ಗೆ ದಾಖಲೆಯನ್ನು ಸಹಾಯಕ ಕಮಿಷನರ್ ಅಥವಾ ತಹಶೀಲ್ದಾರರ ಬಳಿ ಇರಬೇಕು. ಅಷ್ಟೂ ಪ್ರಕ್ರಿಯೆಗಳು ನಡೆಸಿರುವ ಸಾಧ್ಯತೆಗಳೇ ಇಲ್ಲ.

ಬಹುಮುಖ್ಯವಾಗಿ ಆರೋಗ್ಯ ಇಲಾಖೆ ಮೂಲಕ ಪೂರ್ವಭಾವಿ ತಪಸಾಣೆ ವರದಿ ಪಡೆದಿದ್ದಾರೆಯೇ ಎಂಬ ಬಗ್ಗೆ ಅನುಮಾನ ವ್ಯಕ್ತಪಡಿಸಲಾಗಿದೆ.

ಈಗಾಗಲೇ ಆಸ್ಪತ್ರೆಗಳ ಹಬ್‌ ಅನಿಸಿಕೊಂಡಿರುವ ಉಳ್ಳಾಲ ತಾಲೂಕಿನಲ್ಲಿ ಅತಿ ಹೆಚ್ಚು ಜನರಿಗೆ ಕ್ಯಾನ್ಸರ್ ಕಾಯಿಲೆ ಹಾಗೂ ಶ್ವಾಸಕೋಶದ ತೊಂದರೆಗಳು , ಹೃದಯಾಘಾತಗಳಿಂದ ಸಾವನ್ನಪ್ಪುತ್ತಿರುವ ಸಂಖ್ಯೆ ಹೆಚ್ಚಿದೆ . ಕೊಳಚೆಯುಕ್ತ ನೀರು ಜಲ, ನೆಲ ಸೇರಿ ಮಾನವನ ಜೀವಕ್ಕೆ ಸೇರುವ ಸ್ಥಿತಿ ಈ ಭಾಗದಲ್ಲಿ ನಿರ್ಮಾಣವಾಗಿದೆ. ಸಂವಿಧಾನದ ಪರಿಚ್ಛೇದ 21 ರಂತೆ ಇರುವ  ಜನರ ಬದುಕುವ ಹಕ್ಕು ನ್ನು ಕಸಿಯುವ ಕೆಲಸಗಳಾಗುತ್ತಿವೆ. ಇದು ಕೇವಲ ನಿರ್ಲಕ್ಷ್ಯವಲ್ಲ, ನೇರವಾಗಿ ಜನರ ಆರೋಗ್ಯದ ಮೇಲೆ ದಬ್ಬಾಳಿಕೆ ಎಂಬ ಆಕ್ರೋಶ ಕೇಳಿಬಂದಿದೆ.

ಜನರ ಬದುಕಿನ ಮೇಲಿನ ರಾಜಕೀಯ  ದಬ್ಬಾಳಿಕೆ:

ಒಂದು ಕಾಲದಲ್ಲಿ ಬಗಂಬಿಲ ಪ್ರದೇಶವು ಸಮೃದ್ದ ಕೃಷಿ ಭೂಮಿ ಹೊಂದಿದ್ದು ಈಗ ರೋಗಗಳ ತಾಣವಾಗಿ ಪರಿಣಮಿಸಿದೆ . ಮಕ್ಕಳಿಗೆ ಶುದ್ಧ ನೀರು ಕನಸಾಗಲಿದೆ. ಪರಿಸರ ಹಾಳಾಗುತ್ತದೆ ಜನರು ಆಸ್ಪತ್ರೆಗಳ ಕಡೆ ಓಡಬೇಕಾಗುತ್ತದೆ ಕಾನೂನು ವ್ಯಾಪ್ತಿ ಮೀರಿದ ತಹಶೀಲ್ದಾರರ ಮತ್ತು ಸಹಾಯಕ ಕಮಿಷನರ್ ಕ್ರಮದ ವಿರುದ್ಧ ಗ್ರಾಮಸ್ಥರು ಉಗ್ರ ಪ್ರತಿಭಟನೆಗಳಿಗೆ ಸಜ್ಜಾಗಿದ್ದಾರೆ.

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ನಮ್ಮ ಎಲ್ಲಾ ಕಷ್ಟ ಮತ್ತು ಸುಖಗಳಿಗೆ ನಮ್ಮ ಮನಸ್ಸೇ ಕಾರಣ – ಡಾ. ಸರ್ಫ್ರಾಜ್ ಜೆ ಹಾಸಿಮ್

June 17, 2026

ಉಳ್ಳಾಲ; ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ…!!

June 16, 2026

ಹರೇಕಳ ಗ್ರಾಮದಲ್ಲಿ ಜಲಜೀವನ್ ಮಿಷನ್ ಹಾಗೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಕುರಿತು ಸಾರ್ವಜನಿಕರಿಂದ ದೂರು

June 16, 2026

Comments are closed.

Advertise
ಸಂಪರ್ಕಿಸಿ

ಕರ್ನಾಟಕದಾದ್ಯಂತ ಆರೋಗ್ಯ ಇಲಾಖೆಯಲ್ಲಿ ಮೆಗಾ ನೇಮಕಾತಿ: ಸಾರ್ವಜನಿಕ ಆರೋಗ್ಯ ಸೇವೆ ಬಲಪಡಿಸಲು ಮಹತ್ವದ ಹೆಜ್ಜೆ

June 11, 2026

ರಾಜ್ಯದಲ್ಲಿ ಖಾಸಗಿ ಅಸ್ಪತ್ರೆಯಲ್ಲಿ ಆಯುಷ್ಮಾನ್ ಯೋಜನೆ ಸಮರ್ಪಕ ಜಾರಿಗೆ ಜ್ಯಾರಿ ಆಗದಿದ್ದರೆ ಜಿಲ್ಲೆಯ ಅರೋಗ್ಯಧಾರಿಗಳ ಮೇಲೆ ಕ್ರಮ :- ಅರೋಗ್ಯ ಸಚಿವ ಯು.ಟಿ ಖಾದರ್

June 9, 2026

ಫೀಲ್ಡ್ ಗೆ ಇಳಿದ ಯು.ಟಿ. ಖಾದರ್ – ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ಕ್ಲಾಸ್…!

June 5, 2026

ವೆನ್ಲಾಕ್ ಆಸ್ಪತ್ರೆಯಲ್ಲಿ ಮನೋವೈದ್ಯರು ಮತ್ತು ಕ್ಲಿನಿಕಲ್ ಸೈಕಾಲಜಿಸ್ಟ್‌ಗಳ ತೀವ್ರ ಕೊರತೆ – ಬಡ ರೋಗಿಗಳ ನಿರ್ಲಕ್ಷ್ಯ ಯಾಕೆ ಎಂದು ಸಾರ್ವಜನಿಕರ ಪ್ರಶ್ನೆ

May 26, 2026
suddi

ನಮ್ಮ ಎಲ್ಲಾ ಕಷ್ಟ ಮತ್ತು ಸುಖಗಳಿಗೆ ನಮ್ಮ ಮನಸ್ಸೇ ಕಾರಣ – ಡಾ. ಸರ್ಫ್ರಾಜ್ ಜೆ ಹಾಸಿಮ್

By UllalaVaniJune 17, 20260

ನಮ್ಮ ಆಲೋಚನೆಗಳು ನಮ್ಮ ಸಂತೋಷ ಮತ್ತು ದುಃಖವನ್ನು ನಿರ್ಧರಿಸುತ್ತದೆ ನಮ್ಮ ಜೀವನದ ಅನುಭವಗಳು ಭಾವನೆಗಳು ಕಷ್ಟ ಮತ್ತು ದುಃಖಕ್ಕೆ ನಮ್ಮ…

ರಕ್ಷಣಾ ಕ್ಷೇತ್ರದಲ್ಲಿ ದಾಖಲೆಯ 1.78 ಲಕ್ಷ ಕೋಟಿ ರೂ. ಉತ್ಪಾದನೆ- ಕೇಂದ್ರ ಸಚಿವ ರಾಜನಾಥ್ ಸಿಂಗ್

June 17, 2026

ಕ್ಯಾಮರೂನ್‌ ದೇಶದ ಮಹಿಳಾ ರೋಗಿಗೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಹೃದಯ ಶಸ್ತ್ರಚಿಕಿತ್ಸೆ

June 17, 2026

ಬಡವರ ಆಸ್ಪತ್ರೆ ಖಾಸಗೀಕರಣ ಬೇಡ: ಸುರತ್ಕಲ್‌ನಲ್ಲಿ ಬೃಹತ್ ಮಾನವ ಸರಪಳಿ

June 17, 2026
1 2 3 … 1,972 Next
Automatic YouTube Gallery

ಅವರುಗಳು ಬದುಕಿದ ರೀತಿ ಇಂದಿಗೂ ಆದರ್ಶ; ಪ್ರಾಧ್ಯಾಪಕ ಉಮೇಶ್ಚಂದ್ರ

ಕರ್ನಾಟಕ ದಲಿತ ಸಂಘರ್ಷ ಸಮಿತಿ ಮಂಗಳೂರು ವತಿಯಿಂದ;ಪ್ರೋ.ಬಿ.ಕೃಷ್ಣಪ್ಪ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮದಿನ ಆಚರಣೆ

ಮಂಗಳೂರು ವಿಶ್ವವಿದ್ಯಾನಿಲಯದ ಪ್ರಾಧ್ಯಪಕರಾದ ಉಮೇಶ್ಚಂದ್ರ ಅವರ ಭಾಷಣ
📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ...
ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಅವರುಗಳು ಬದುಕಿದ ರೀತಿ ಇಂದಿಗೂ ಆದರ್ಶ; ಪ್ರಾಧ್ಯಾಪಕ ಉಮೇಶ್ಚಂದ್ರ
Now Playing
ಅವರುಗಳು ಬದುಕಿದ ರೀತಿ ಇಂದಿಗೂ ಆದರ್ಶ; ಪ್ರಾಧ್ಯಾಪಕ ಉಮೇಶ್ಚಂದ್ರ
ಕರ್ನಾಟಕ ದಲಿತ ಸಂಘರ್ಷ ಸಮಿತಿ ಮಂಗಳೂರು ವತಿಯಿಂದ;ಪ್ರೋ.ಬಿ.ಕೃಷ್ಣಪ್ಪ ಹಾಗೂ ...
ಕರ್ನಾಟಕ ದಲಿತ ಸಂಘರ್ಷ ಸಮಿತಿ ಮಂಗಳೂರು ವತಿಯಿಂದ;ಪ್ರೋ.ಬಿ.ಕೃಷ್ಣಪ್ಪ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮದಿನ ಆಚರಣೆ

ಮಂಗಳೂರು ವಿಶ್ವವಿದ್ಯಾನಿಲಯದ ಪ್ರಾಧ್ಯಪಕರಾದ ಉಮೇಶ್ಚಂದ್ರ ಅವರ ಭಾಷಣ
📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ...
ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ತೊಕ್ಕೊಟ್ಟು ಒಳಪೇಟೆಯ ಎಬಿಸಿ ಸಂಘಟನೆ ಕಚೇರಿ ಮುಂಭಾಗ ಅ#ಪಘಾ*ತ
Now Playing
ತೊಕ್ಕೊಟ್ಟು ಒಳಪೇಟೆಯ ಎಬಿಸಿ ಸಂಘಟನೆ ಕಚೇರಿ ಮುಂಭಾಗ ಅ#ಪಘಾ*ತ
ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆ 📍 Ullal | Dakshina Kannada | Coastal ...
ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆ
📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and ...
fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version