ಕೊಣಾಜೆ: ನಂಬಿಕೆ ಎಂಬುವುದೇ ನಮಗೆಲ್ಲರಿಗೂ ಶಕ್ತಿ. ನಂಬಿಕೆ ಇದ್ದರೆ ಯಾವುದೇ ಪುಣ್ಯ ಕಾರ್ಯ ಯಶಸ್ವಿಯಾಗಿ ನೆರವೇರಬಲ್ಲುದು. ನಮ್ಮನಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಪಾಲಿಸಿಕೊಂಡು ಬಂದರೆ ಜೀವನದ ಸಾರ್ಥಕತೆಯನ್ನು ಪಡೆಯಲು ಸಾಧ್ಯ. ಊರವರು, ಐದು ಗ್ರಾಮದವರು ಸೇರಿಕೊಂಡು ಶ್ರೀ ಉಳ್ಳಾಲ್ತಿ ಕ್ಷೇತ್ರದ ಅಭಿವೃದ್ಧಿಗಾಗಿ ನಿಸ್ವಾರ್ಥದಿಂದ ದುಡಿದಿದ್ದಾರೆ. ಎಲ್ಲರಿಗೂ ಉಳ್ಳಾಲ್ತಿಯ ಅನುಗ್ರಹ ಖಂಡಿತಾ ಇರುತ್ತದೆ ಎಂದು ಶ್ರೀ ಕ್ಷೇತ್ರ ಕಣಿಯೂರಿನ ಶ್ರೀ ಮಹಾಬಲ ಸ್ವಾಮೀಜಿ ಅವರು ಹೇಳಿದರು.

ಅವರು ಕೂಟತ್ತಜೆ ಶ್ರೀ ಉಳ್ಳಾಲ್ತಿ ಅಮ್ಮ, ಬಂಟಜಾವದೆ ಮತ್ತು ಪರಿವಾರ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಅಂಗವಾಗಿ ಸೋಮವಾರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಸನಾತನ ಧರ್ಮ ಅತ್ಯಂತ ಶ್ರೇಷ್ಠವಾಗಿರುವ ಧರ್ಮವಾಗಿದೆ. ಪ್ರಪಂಚವು ಹುಟ್ಟುವಾಗಲೇ ನಮ್ಮ ಸನಾತನ ಧರ್ಮವೂ ಹುಟ್ಟಿಕೊಂಡಿದೆ. ಹಿಂದೂ ಮಹಾಸಾಗರರ ನೀರನ್ನು ಬರಿದಾಗಿಸಲು ಸಾಧ್ಯವಿಲ್ಲವೋ ಹಾಗೆಯೇ ಹಿಂದೂ ಧರ್ಮವು ಕೂಡಾ ಬಲಿಷ್ಠವಾಗಿದೆ. ಧರ್ಮದ ಕಾರ್ಯದಲ್ಲಿ ನಾವೆಲ್ಲರೂ ತೊಡಗಿಸಿಕೊಂಡು ಮುನ್ನಡೆಯಬೇಕು ಎಂದರು.
ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ರವೀಂದ್ರ ಶೆಟ್ಡಿ ಪಾವುಲಗುತ್ತು ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.
ಬಾಜಪದ ಮಂಗಳೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಜಗದೀಶ್ ಆಳ್ವ ನಾರ್ಯಗುತ್ತು, ಇನೋಳಿ ಸೋಮನಾಥೇಶ್ಬರ ದೇವಸ್ಥಾನದ ಚಂದ್ರಹಾಸ್ ಪೂಂಜಾ ಕಿಲ್ಲೂರುಗುತ್ತು, ಕಣಂತೂರು ವೈದ್ಯನಾಥ ಸೇವಾ ಸಂಘದ ಅಧ್ಯಕ್ಷರಾದ ಮಹೇಶ್ ಚೌಟ ಚಕ್ರಕೋಡಿ, ನೇತ್ರ ತಜ್ಞರಾದ ಡಾ.ಶ್ರೀಧರ ಭಟ್, ಯೆನೆಪೋಯ ವಿವಿ ಪ್ರಾಧ್ಯಾಪಕ ಡಾ.ಗಣೇಶ್ ಪ್ರಸಾದ್ ಭಟ್ ಪಾಲ್ದಾರ್ , ಮುಖಂಡರಾದ ಗೋಪಾಲ್ ಶೆಟ್ಡಿ ಅರಿಬೈಲ್, ಮೋಹನ್ ದಾಸ್ ರೈ ದೆಬ್ಬೇಳಿಗುತ್ತು, ಜಯರಾಮ ಪೂಜಾರಿ ಇರಾ, ವೈ.ಬಿ.ಸುಂದರ್ ಇರಾ , ದೀಪಕ್ ಶೆಟ್ಟಿ ಬರಿಕೆ, ಉದ್ಯಮಿಗಳಾದ ಅನುಪ್ ನಾಯಕ್ ಬಜಿಲಕೇರಿಯ, ಚಂದ್ರಶೇಖರ್ ಮಂಟಮೆ, ಕರುಣಾಕರ ಶೆಟ್ಟಿ ಮುಂಡಾಜೆ, ಅಜಿತ್ ಕುಮಾರ್ ಮುಡಿಪು, ಸುಕೇಶ್ ಮುಡಿಪು ಮೊದಲಾದವರು ಉಪಸ್ಥಿತರಿದ್ದರು.
ರವಿ ರೈ ಪಜೀರು ಸ್ವಾಗತಿಸಿದರು. ಚಂದ್ರ ಮುದುಂಗಾರುಕಟ್ಟೆ ಕಾರ್ಯಕ್ರಮ ನಿರೂಪಿಸಿದರು.





