ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಪಿಲಾರು: ಮದರಸ ಅಧ್ಯಯನ ನಡೆಸಲು ಬರುವ ಅಪ್ರಾಪ್ತ ಬಾಲಕಿಗೆ ಉಸ್ತಾದನೋರ್ವ ನಿರಂತರ ಲೈಂಗಿಕ ಕಿರುಕುಳ ನೀಡುತ್ತಿದ್ದ ಪ್ರಕರಣ ತೊಕ್ಕೊಟ್ಟು ಸಮೀಪದ ಪಿಲಾರು ದಾರಂದಬಾಗಿಲು ಬಳಿ ಬೆಳಕಿಗೆ ಬಂದಿದ್ದು, ಆರೋಪಿ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಪೋಕ್ಸೊ ಕಾಯಿದೆಯಡಿ ಪ್ರಕರಣ ದಾಖಲಾಗಿದೆ.

ಮದರಸ ಶಿಕ್ಷಕ ಬಂಟ್ವಾಳ ಸಜೀಪ ನಿವಾಸಿ ಮಹಮ್ಮದ್ ಮದನಿ ವಿರುದ್ಧ ಪೋಕ್ಸೊ ಕಾಯಿದೆಯಡಿ ಪ್ರಕರಣ ದಾಖಲಾಗಿದೆ. ಈತನ ವಿರುದ್ಧ ಹಲವು ಬಾರಿ ಬಾಲಕಿ ಹೆತ್ತವರು ಮದರಸ ಸಮಿತಿಗೆ ದೂರು ನೀಡಿದರೂ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಸಮಿತಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಕಾರ್ಯದರ್ಶಿ ವಿರುದ್ಧ ಬಾಲಕಿ ಹೆತ್ತವರು ದೂರು ನೀಡಿದ್ದಾರೆ. ಬೆಳಗ್ಗಿನ ಸಮಯದಲ್ಲಿ ಅಧ್ಯಯನಕ್ಕೆ ಬರುತ್ತಿದ್ದ 9ರ ಹರೆಯದ ಬಾಲಕಿಯ ಮೇಲೆ ಶಿಕ್ಷಕ ಕಿರುಕುಳ ನೀಡುತ್ತಿದ್ದನೆನ್ನಲಾಗಿದೆ. ಪೋಕ್ಸೊ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಉಳ್ಳಾಲ ಪೊಲೀಸರು ಆರೋಪಿಗಾಗಿ ಶೋಧ ಮುಂದುವರಿಸಿದ್ದಾರೆ.


