ಉಳ್ಳಾಲ: ದೇರಳಕಟ್ಟೆಯ ಯೆನೆಪೋಯ ದಂತ ಕಾಲೇಜು ಮತ್ತು ಆಸ್ಪತ್ರೆ pierre fauchard academy ನೀಡಲ್ಪಡುವ ಪ್ರತಿಷ್ಠಿತ ಪ್ರಶಸ್ತಿ “ಅಂತರಾಷ್ಟ್ರೀಯ ಉತ್ತಮ ದಂತ ಕಾಲೇಜು ಸಂಸ್ಥೆ ” ಯನ್ನು ಏಷ್ಯಾ ವಿಭಾಗದಿಂದ ಪಡೆದುಕೊಂಡಿದೆ.
ದಂತ ವೈದ್ಯಕೀಯ ಕ್ಷೇತ್ರದಲ್ಲಿ ಯೆನೆಪೋಯ ದಂತ ಕಾಲೇಜು ನಡೆಸಿರುವ ದಂತ ವೈದ್ಯಕೀಯ ಶಿಕ್ಷಣ, ಸಂಶೋಧನೆ, ಸಮುದಾಯ ದಂತ ವೈದ್ಯಕೀಯ ಸೇವೆಯನ್ನು ಪರಿಗಣಿಸಿ ನೀಡಲಾಗಿದೆ.
ಇದೆ ಸಂದರ್ಭದಲ್ಲಿ ಜೀವನ ಶ್ರೇಷ್ಠ ಸಾಧಕ ಪ್ರಶಸ್ತಿಯನ್ನು ಯೆನೆಪೋಯ ದಂತ ಕಾಲೇಜು ಪ್ರಾಂಶುಪಾಲ ಡಾ. ಲಕ್ಷ್ಮೀಕಾಂತ್ ಛಾತ್ರ ಹಾಗೂ ಅತ್ಯುನ್ನತ ದಂತ ಶಿಕ್ಷಕ ಪ್ರಶಸ್ತಿಯನ್ನು ಫ್ಯಾಕಲ್ಟಿ ಆಫ್ ಡೆಂಟಿಸ್ಟ್ರೀ ಇಲ್ಲಿನ ಡೀನ್ ಡಾ. ಶಾಮ್ ಎಸ್ ಭಟ್ ಪಡೆದುಕೊಂಡಿರುತ್ತಾರೆ.

ಈ ಅತ್ಯುನ್ನತ ಪ್ರಶಸ್ತಿಯನ್ನು ಏ. 6 ರಂದು ರಾಡಿಸನ್ ಹೋಟೆಲ್, ಕೊಲಂಬೊ, ಶ್ರೀಲಂಕಾ ದಲ್ಲಿ ನಡೆಯುವ ಸಮಾರಂಭದಲ್ಲಿ ನೀಡಿ ಗೌರವಿಸಲಾಗುವುದು. ಪುರಸ್ಕೃತ ಸಂಸ್ಥೆ ಹಾಗೂ ವೈದ್ಯರನ್ನು ಕುಲಾಧಿಪತಿ ವೈ.ಅಬ್ದುಲ್ಲಾ ಕುಂಞಿ ಅಭಿನಂದಿಸಿದ್ದಾರೆ.


