ಉಳ್ಳಾಲ : ಬಿಹಾರ ಛಾಪ್ರದಲ್ಲಿ ಫೇಸ್ ಆಫ್ ಫ್ಯೂಚರ್ ಇಂಡಿಯಾ ವತಿಯಿಂದ ನಡೆದ 9ನೇ ವರ್ಷದ ಭವಿಷ್ಯದ ಭಾರತ ಮತ್ತು ರಾಷ್ಟ್ರೀಯ ಯುವವಿನಿಮಯ ಕಾರ್ಯಕ್ರಮದಲ್ಲಿ ಯೇನೆಪೊಯ ಇನ್ಸ್ಟಿಟ್ಯೂಟ್ ಆಫ್ ಆರ್ಟ್ಸ್, ಸೈನ್ಸ್, ಕಾಮರ್ಸ್ ಮತ್ತು ಮೆನೇಜ್ಮೆಂಟ್ ವಿಭಾಗದ ವಿದ್ಯಾರ್ಥಿನಿ ಎಂ.ಎಸ್ ಅಝ್ವೀನಾ ಇವರು ‘ರಾಷ್ಟ್ರೀಯ ಪ್ರೇರಣಾ ಡೂಟ್-2024-25 ಪ್ರಶಸ್ತಿ ಪಡೆದಿದ್ದಾರೆ. ಇವರು ಹರೇಕಳ ಗ್ರಾಮದ ಕಿಸಾನ್ ನಗರ ನಿವಾಸಿಯಾಗಿರುವ ಮೈಮೂನ ಮತ್ತು ದಿ.ಅಬ್ದುಲ್ ಮಜೀದ್ ಇವರ ಪುತ್ರಿ.


