
ಉಳ್ಳಾಲ: ಮುನ್ನೂರು ಗ್ರಾಮ ಪಂಚಾಯತ್ ಗೆ ಮುಂದಿನ ೧೫ ತಿಂಗಳ ಆಡಳಿತಾವಧಿಗೆ ನೂತನ ಅಧ್ಯಕ್ಷೆಯಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ರೆಹನಾ ಭಾನು ಗೆಲುವು ಸಾಧಿಸಿದ್ದಾರೆ. ಈ ಮೂಲಕ ಚುನಾವಣೆ ನಂತರ ಮೂರನೇ ಬಾರಿ ಅಧ್ಯಕ್ಷರ ಬದಲಾವಣೆ ಪ್ರಕ್ರಿಯೆ ನಡೆದಿದೆ.
ಕಾಂಗ್ರೆಸ್ ಬೆಂಬಲಿತ ವಿಶಾಲಾಕ್ಷಿ ಅಧ್ಯಕ್ಷೆ ಸ್ಥಾನಕ್ಕೆ ಇತ್ತೀಚೆಗೆ ರಾಜೀನಾಮೆ ಸಲ್ಲಿಸಿದ್ದರು. ಎರಡೂವರೆ ವರ್ಷಗಳ ಕಾಲ ಆಡಳಿತಾವಧಿ ನಡುವೆ 15 ತಿಂಗಳ ಅಗ್ರಿಮೆಂಟ್ ಮಾಡಿದ್ದ ಹಿನ್ನೆಲೆಯಲ್ಲಿ ಚುನಾವಣೆ ನಂತರದ ಅವಧಿಗೆ ಮೂರನೇ ಅಧ್ಯಕ್ಷೆಗೆ ಆಯ್ಕೆ ನಡೆದಿದೆ.
ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಚಂದ್ರಕಲಾ 9 ಮತಗಳನ್ನು ಪಡೆದರೆ, ಕಾಂಗ್ರೆಸ್ ಬೆಂಬಲಿತ ರೆಹನಾ ಭಾನು 14 ಮತಗಳನ್ನು ಪಡೆದುಕೊಂಡು ಗೆಲುವು ಸಾಧಿಸಿದ್ದಾರೆ. ಒಟ್ಟು 23 ಸದಸ್ಯರಿರುವ ಗ್ರಾಮ ಪಂಚಾಯತ್ ಆಡಳಿತದಲ್ಲಿ ಕಾಂಗ್ರೆಸ್ ಬೆಂಬಲಿತ -10, ಬಿಜೆಪಿ-9, ಎಸ್ ಡಿಪಿಐ -1, ಸಿಪಿಎಂ-3 ಸದಸ್ಯರಿದ್ದಾರೆ. ಬಿಜೆಪಿಯ ಚಂದ್ರಕಲಾ ಅವರಿಗೆ ಬಿಜೆಪಿ ಸದಸ್ಯರೇ ಬೆಂಬಲಿಸಿದ್ದರೆ, ಕಾಂಗ್ರೆಸ್ ಅಭ್ಯರ್ಥಿಗೆ ಎಸ್ ಡಿಪಿಐ ಮತ್ತು ಸಿಪಿಎಂ ಬೆಂಬಲಿತ ಸದಸ್ಯರು ಬೆಂಬಲಿಸಿದ್ದಾರೆ. ಚುನಾವಣೆ ನಂತರ ವಿಲ್ಫ್ರೆಡ್ ಡಿಸೋಜ, ನಂತರ ವಿಶಾಲಾಕ್ಷಿ ಇದೀಗ ರೆಹನಾ ಭಾನು ಅಧ್ಯಕ್ಷರಾಗಿದ್ದಾರೆ.


