ತೊಕ್ಕೊಟ್ಟು: ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ, ಗ್ರಾಮಚಾವಡಿ ಇದರ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ ಪಂಚಲೋಹ ವಿಗ್ರಹದ ಪುನರ್ ಪ್ರತಿಷ್ಠೆ, ಮಹಾಕುಂಭಾಭಿಷೇಕ ಹಾಗೂ ಸಂಘದ 44ನೇ ವಾರ್ಷಿಕೋತ್ಸವ ಸಮಾರಂಭವು ಡಿ.22ರಿಂದ ಡಿ.25ರವರೆಗೆ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯೊಂದಿಗೆ ನಡೆಯಲಿರುವುದು ಎಂದು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ, ಗ್ರಾಮಚಾವಡಿ ಇದರ ಅಧ್ಯಕ್ಷ ರವೀಂದ್ರ ಬಂಗೇರ ತಿಳಿಸಿದ್ದಾರೆ.



ಅವರು ಶುಕ್ರವಾರ ದಂದು ತೊಕ್ಕೊಟ್ಟು ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ನಡೆಸಿದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿ
ಡಿ.22 ರಂದು ಬೆಳಿಗ್ಗೆ 9.25ಕ್ಕೆ ಸರಿಯಾಗಿ ಉಗ್ರಾಣ ಮುಹೂರ್ತ, 10.15ಕ್ಕೆ ಕೊಪ್ಪರಿಗೆ ಮುಹೂರ್ತ ಮುಂತಾದ ಧಾರ್ಮಿಕ ಕಾರ್ಯಗಳು ನಡೆಯಲಿದೆ. 12.30ಕ್ಕೆ ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿಯಲ್ಲಿ ವಿಗ್ರಹ ಪೂಜೆ ನೆರವೇರಿಸಿದ ನಂತರ ಪಂಚಲೋಹ ವಿಗ್ರಹದ ಶೋಭಾಯಾತ್ರೆಯು ಮಂಗಳೂರು, ತೊಕ್ಕೊಟ್ಟು ಹಾಗೂ ಮಧ್ಯಾಹ್ನ ಗಂಟೆ 3.30ಕ್ಕೆ ಅಸೈಗೋಳಿ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದ ಬಳಿ ತಲುಪಿ, ಬೃಹತ್ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆಯು ಉದ್ಘಾಟನೆ ಗೊಂಡು ಮಂಗಳೂರು ವಿಶ್ವವಿದ್ಯಾನಿಲಯದ ರಸ್ತೆಯ ಮೂಲಕ ಗ್ರಾಮಚಾವಡಿ ಗುರುಮಂದಿರ ತಲುಪಲಿದೆ. ಸಂಜೆ ಗಂಟೆ 7.00ರಿಂದ ಸೋಲೂರು ಮಠದ ಪೀಠಾಧಿಪತಿಗಳಾದ ವಿಖ್ಯಾತಾನಂದ ಸ್ವಾಮೀಜಿ ಹಾಗೂ ಶ್ರೀ ಕ್ಷೇತ್ರ ಕಣಿಯೂರು ಮಠದ ಮಹಾಬಲೇಶ್ವರ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ.
ಮಂಗಳೂರು ತಾಲೂಕು ಬಿಲ್ಲವರ ಸಂಘದ ಅಧ್ಯಕ್ಷರಾದ ಜಿತೇಂದ್ರ ಜೆ. ಸುವರ್ಣ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಸಮಾರಂಭದ ಉದ್ಘಾಟನೆಯನ್ನು ಬಂಟ್ವಾಳ ಬಿಲ್ಲವರ ಸೇವಾ ಸಮಾಜ ಗಾಣದಪಡ್ಡು ಬಿ.ಸಿರೋಡ್ ಇದರ ಅಧ್ಯಕ್ಷ ಸಂಜೀವ ಪೂಜಾರಿ ಬಿ.ಸಿ.ರೋಡ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್ ಮತ್ತಿತ್ತರ ರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ರಾತ್ರಿ 9.00 ಗಂಟೆಯಿಂದ ಅನ್ನಸಂತರ್ಪಣೆ ಹಾಗೂ ರಾತ್ರಿ ಗಂಟೆ 9.30 ರಿಂದ ಶ್ರೀ ಅಂಬಿಕಾ ಅನ್ನಪೂಣೇಶ್ವರಿ ಪ್ರಸಾದಿತ ಯಕ್ಷಗಾನ ಮಂಡಳಿ, ಸುಂಕದಕಟ್ಟೆ ಇವರಿಂದ ಗುಂಡದ ಗುರ್ಕಾರೆ ಎಂಬ ತುಳು ಯಕ್ಷಗಾನ ಬಯಲಾಟ ನಡೆಯಲಿದೆ.
ಡಿ. 23ರಂದು ವಿವಿಧ ವೈದಿಕ ವಿಧಿವಿಧಾನಗಳು ನಡೆಯಲಿದ್ದು ಡಿ.24ರಂದು ವಿವಿಧ ವೈಧಿಕ ಕಾರ್ಯಕ್ರಮಗಳ ಜೊತೆಗೆ ಸಂಜೆ ಗಂಟೆ 6.00ರಿಂದ ಶ್ರೀ ದುರ್ಗಾನಮಸ್ಕಾರ ಪೂಜೆ ನಂತರ ಅನ್ನಸಂತರ್ಪಣೆ ನಡೆಯಲಿದೆ. ಡಿ. 25ರಂದು ಬ್ರಹ್ಮಶ್ರೀ ನಾರಾಯಣ ಗುರುಗಳ ಪಂಚಲೋಹ ವಿಗ್ರಹದ ಪ್ರತಿಷ್ಠೆ ಮಹಾಕುಂಭಾಭಿಷೇಕ ನಡೆಯಲಿದ್ದು, ಮಧ್ಯಾಹ್ನ 12.00ರಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಮಹಾಅನ್ನಸಂತರ್ಪಣೆಯು ನಡೆಯಲಿದೆ. ಮಧ್ಯಾಹ್ನ ಗಂಟೆ 2.00 ರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಆ ಪ್ರಯುಕ್ತ ಪಾವೂರು, ಹರೇಕಳ, ಕೊಣಾಜೆ, ಪಜೀರು ಹಾಗೂ ಬೋಳ್ಯಾರು ಗ್ರಾಮಸಮಿತಿಗಳಿಂದ ಹಾಗೂ ಮಹಿಳಾ ಘಟಕಗಳ ವತಿಯಿಂದ “ವೈವಿಧ್ಯಮಯ ಕಾರ್ಯಕ್ರಮ’, ಮಧ್ಯಾಹ್ನ ಗಂಟೆ 3.00ರಿಂದ ಯುವವಾಹಿನಿ ಗ್ರಾಮಚಾವಡಿ ಕೊಣಾಜೆ ಘಟಕದ ಸದಸ್ಯರಿಂದ “ನೃತ್ಯ ವೈಭವ’, 3.30ರಿಂದ ನೃತ್ಯಲಹರಿ ನಾಟ್ಯಾಲಯ ಪಜೀರು ಇದರ ನೃತ್ಯ ಗುರು ವಿದುಷಿ ರೇಷ್ಠಾ ನಿರ್ಮಲ್ ಭಟ್ ಮತ್ತು ಶಿಷ್ಯ ವೃಂದದವರಿAದ “ನೃತ್ಯ ಸಂಭ್ರಮ” ಸಂಜೆ ಗಂಟೆ 4.00ರಿಂದ ಶಿವರಂಜನಿ ಕಲಾಕೇಂದ್ರ ಪೊಳಲಿ/ಬೊಕ್ಕಸ ಇವರಿಂದ “ಗಾನಾಮೃತ’, ಕಾರ್ಯಕ್ರಮ ನಡೆಯಲಿದೆ.
ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಶಿವಗಿರಿ ಮಠ ವರ್ಕಳ ಇದರ ನಿಕಟಪೂರ್ವ ಅಧ್ಯಕ್ಷ ವಿಶ್ವದಾನಂದ ಸ್ವಾಮೀಜಿ ,ಸೋಲೂರು ಮಠ ಪೀಠಾಧಿಪತಿಗಳಾದ ವಿಖ್ಯಾತಾನಂದ ಸ್ವಾಮೀಜಿ ಅಶೀರ್ವಚನ ನೀಡಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಅಖಿಲ ಭಾರತ ಬಿಲ್ಲವರ ಯೂನಿಯನ್ ಕುದ್ರೋಳಿ ಇದರ ಅಧ್ಯಕ್ಷರಾದ ನವೀನ್ ಚಂದ್ರ ಡಿ. ಸುವರ್ಣ ವಹಿಸಲಿದ್ದಾರೆ.
ಕರ್ನಾಟಕ ವಿಧಾನ ಪರಿಷತ್ ಸದಸ್ಯರಾದ ಬಿ.ಕೆ. ಹರಿಪ್ರಸಾದ್ ಸಮಾರಂಭದ ಉದ್ಘಾಟನೆಯನ್ನು ಮಾಡಲಿದ್ದಾರೆ. ಕರ್ನಾಟಕ ಸರಕಾರದ ಸಭಾಧ್ಯಕ್ಷರಾದ ಯು.ಟಿ ಖಾದರ್ ಬಹುಮಾನ ವಿತರಣಾ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಅರ್ಚಕರ ಕೊಠಡಿಯ ಉದ್ಘಾಟನೆಯನ್ನು ಲೋಕಸಭಾ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ,ಆಂಬ್ಯುಲೆನ್ಸ್ ಲೋಕಾರ್ಪಣೆಯನ್ನು ಸಂಸದ ಬ್ರಿಜೇಶ್ ಚೌಟಿ ನೆರವೇರಿಸಲಿದ್ದಾರೆ. ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ ಇದರ ಅಧ್ಯಕ್ಷರಾದ ಎಸ್.ಎಚ್. ಸಾಯಿರಾಂ
ಇವರು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ಸನ್ಮಾನವನ್ನು ಮಾಡಲಿದ್ದಾರೆ. ಸಂಘದ ಹಿರಿಯ ಸದಸ್ಯರಿಗೆ, ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ. ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರ ಕಂಕನಾಡಿ ಇದರ ಅಧ್ಯಕ್ಷರಾದ ಚಿತ್ತರಂಜನ್ ಗರೋಡಿ, ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಮುಲ್ಕಿ ಇದರ ಅಧ್ಯಕ್ಷರಾದ ಡಾ.ರಾಜಶೇಖರ ಕೋಟ್ಯಾನ್ ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಅದೇ ದಿನ ರಾತ್ರಿ ನಯನ ಕೋಟ್ಯಾನ್ ಸಾರಥ್ಯದ ತುಳುನಾಡ ತುಡರ್ ಮಂಗಳೂರು ಇವರಿಂದ “ದೈವದ ಬೂಳ್ಯ’ ತುಳುನಾಟಕ ನಡೆಯಲಿದೆ. ಡಿ. 26 ರಿಂದ 48 ದಿನಗಳ ಕಾಲ ವಿವಿಧ ಭಜನಾ ತಂಡಗಳ ಸಹಯೋಗದೊಂದಿಗೆ ಸಂಧ್ಯಾ ಭಜನಾ ಕಾರ್ಯಕ್ರಮವು ಪ್ರತಿದಿನ ಜರಗಲಿದ್ದು, ಶ್ರೀ ಕ್ಷೇತ್ರ ಧಾಮ ಮಾಣಿಲz ಮೋಹನದಾಸ ಪರಮಹಂಸ ಸ್ವಾಮಿಗಳು ಉದ್ಘಾಟಿಸಲಿದ್ದಾರೆ.
ಸುದ್ಧಿಗೋಷ್ಠಿಯಲ್ಲಿ ಪಂಚಲೋಹ ವಿಗ್ರಹ ಪ್ರತಿಷ್ಠಾನ ಸಮಿತಿ ಅಧ್ಯಕ್ಷರುಗಳಾದ ಕೆ.ಟಿ.ಸುವರ್ಣ ಹಾಗೂ ಯಶವಂತ ಡಿ.ದೇರಾಜೆಗುತ್ತು, ಕಾರ್ಯಾಧ್ಯಕ್ಷೆ ದೇವಕಿ ಆರ್. ಉಳ್ಳಾಲ್, ಪ್ರಧಾನ ಸಂಚಾಲಕರಾದ ಕೆ.ಪಿ.ಸುರೇಶ್, ಬ್ರಹ್ಮಶ್ರೀ ನಾರಾಯಣ ಗುರು ಸೇವಾಸಂಘ ಗ್ರಾಮಚಾವಡಿ ಪ್ರಧಾನ ಕಾರ್ಯದರ್ಶಿ ಸುಭಾಷ್ ಬೋಳಿಯಾರ್, ಮಾಜಿ ಅಧ್ಯಕ್ಷ ಎ. ಲಕ್ಷö್ಮಣ ಸಾಲಿಯಾನ್, ಬ್ರಹ್ಮಶ್ರೀ ನಾರಾಯಣ ಗುರು ಸೇವಾಸಂಘ ಗ್ರಾಮಚಾವಡಿ ಮಹಿಳಾ ಮಂಡಲ ದ ಅಧ್ಯಕ್ಷೆ ಗೀತಾ ಡಿ. ಕುಂದರ್ ಉಪಸ್ಥಿತರಿದ್ದರು.


