
ಕೊಲ್ಯ: ಸೋಮೇಶ್ವರ ಕೊಲ್ಯ ಇಲ್ಲಿನ ಶ್ರೀ ರಾಮ ಭಜನಾ ಮಂದಿರದ 74 ನೇ ವಾರ್ಷಿಕೋತ್ಸವಕ್ಕೆ ಶಶಿಪ್ರಭಾ ಮತ್ತು ತಾರನಾಥ ಗಟ್ಟಿ ಕುತ್ತಾರು ದಂಪತಿ ದೀಪ ಬೆಳಗಿಸಿ ಉದ್ಘಾಟಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭ ಮಂದಿರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅಶೋಕ್ ಗಟ್ಟಿ ದ್ವಾರಕಾನಗರ, ಪ್ರಧಾನ ಕಾರ್ಯದರ್ಶಿ ಪ್ರೀತಂ ಕುಮಾರ್ ಕೊಲ್ಯ, ಕೋಶಾಧಿಕಾರಿ ದಿನೇಶ್ ಪರ್ಯತ್ತೂರು, ಗೌರವ ಸಲಹೆಗಾರರಾದ ಶೇಖರ್ ಕನೀರುತೋಟ, ಈಶ್ವರ್ ಸುವರ್ಣ ಕನೀರುತೋಟ, ಜಯಂತ್ ಪರ್ಯತ್ತೂರು, ಶ್ರೀ ರಾಮ್ ಫ್ರೆಂಡ್ಸ್ ಸರ್ಕಲ್ ನ ಅಧ್ಯಕ್ಷ ವಿಶ್ವಾಸ್ ಕುಲಾಲ್, ಉಪಾಧ್ಯಕ್ಷ ಚೇತನ್ ಕುಲಾಲ್, ಕಾರ್ಯದರ್ಶಿ ಜಿತೇಶ್ ಮಾಡೂರು, ಮಹಿಳಾ ಮಂಡಲದ ಅಧ್ಯಕ್ಷೆ ಚಂಚಲಾಕ್ಷಿ ಕೊಲ್ಯ, ಶಾರದಾ ಕೊಲ್ಯ, ಕುಸುಮ ಕಾಸಿಂಬೆಟ್ಟು, ದೇವಕಿ ಕೊಲ್ಯ, ದೇವಕಿ ಕಾಸಿಂಬೆಟ್ಟು, ಜಯಶ್ರೀ , ಸುಂದರಿ, ಪ್ರವೀಣ್ ಕೊಲ್ಯ ಮುಂತಾದವರು ಉಪಸ್ಥಿತರಿದ್ದರು.

