Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
All News

ಪೊಲೀಸರಿಗೆ ಮರಳುಗಾರಿಕೆ ಮಾಹಿತಿ ನೀಡಿದ ಸೋಮೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯನ ಕೊಲೆಯತ್ನ , ಮುಂದುವರಿದ ಅಕ್ರಮ ಮರಳುಗಾರಿಕೆ

UllalaVaniBy UllalaVaniNovember 5, 2024No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಉಳ್ಳಾಲ: ಅಕ್ರಮ ಮರಳುಗಾರಿಕೆ ವಿರುದ್ಧ ಪೊಲೀಸರಿಗೆ ದೂರು ನೀಡಿದ ಕಾರಣಕ್ಕೆ, ಮರಳು ದಂಧೆಯ ಆರೋಪಿ ಸೋಮೃಏಶ್ವರ ದೇವಸ್ಥಾನ ವ್ಯವಸ್ಥಾಪನ ಸಮಿತಿ ಸದಸ್ಯರೊಬ್ಬರಿಗೆ ರಾಡ್‌ ನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿರುವ ಘಟನೆ ಸೋಮೇಶ್ವರ ಪುರಸಭೆ ಕಚೇರಿ ಸಮೀಪ ನಿನ್ನೆ ತಡರಾತ್ರಿ ವೇಳೆ ಸಂಭವಿಸಿದೆ. ಪ್ರತಿಭಟನೆ ನಂತರ ಕೆಲ ದಿನಗಳ ಕಾಲ ಮರಳುಗಾರಿಕೆ ಸ್ಥಗಿತಗೊಂಡಿದ್ದರೂ, ಇದೀಗ ತಡರಾತ್ರಿ ಉಳ್ಳಾಲ ತಾಲೂಕಿನ ಎಲ್ಲಾ ರಸ್ತೆಗಳಲ್ಲಿಯೂ ಮರಳುಗಾರಿಕೆಯ ಲಾರಿಗಳು ಸಂಚರಿಸಲು ಆರಂಭವಾಗಿದೆ.
ಸೋಮೇಶ್ವರ ಉಚ್ಚಿಲದ,ಫಿಶರೀಶ್ ರೋಡ್ ನಿವಾಸಿ ಸೋಮೇಶ್ವರ ಸೋಮನಾಥ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಕಿಶೋರ್ ಎಮ್ ಉಚ್ಚಿಲ(೫೩)ಹಲ್ಲೆಗೊಳಗಾದ ವ್ಯಕ್ತಿ. ಉಚ್ಚಿಲ ಬಟ್ಟಪ್ಪಾಡಿ ಪ್ರದೇಶದಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿರುವ ಸುನಿಲ್ ಪೂಜಾರಿ ಹಲ್ಲೆಗೈದಿರುವುದಾಗಿ ಆರೋಪಿಸಲಾಗಿದೆ.
ಕಿಶೋರ್ ಅವರು ಸೋಮವಾರ ಬೆಳಿಗ್ಗೆ ತನ್ನ ಮಿತ್ರ ಪುಷ್ಪರಾಜ್ ಎಂಬವರ ಜತೆಯಲ್ಲಿ ಸೋಮೇಶ್ವರದ ಹೊಟೇಲಲ್ಲಿ ಚಹಾ ಕುಡಿದು ಸ್ಕೂಟರಲ್ಲಿ ಸಹ ಸವಾರನಾಗಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ಸೋಮೇಶ್ವರ ಪುರಸಭಾ ಕಚೇರಿ ಸಮೀಪದಲ್ಲಿ ಆರೋಪಿ ಸುನಿಲ್ ಪೂಜಾರಿ ತಡೆದಿದ್ದಾನೆ. ಆರೋಪಿ ಸುನಿಲ್ ಕಿಶೋರ್ ಅವರಲ್ಲಿ ಮರಳುಗಾರಿಕೆಯ ಬಗ್ಗೆ ಭಾರೀ ಪೊಲೀಸರಿಗೆ ಮಾಹಿತಿ ನೀಡುತ್ತೀಯ, ನಿಮ್ಮಂತಹವರು ಜೀವವಿದ್ದರೆ ನಮ್ಮಂತವರಿಗೆ ಉಳಿಗಾಲವಿಲ್ಲ. ಇನ್ನು ಮೂರು ತಿಂಗಳೊಗೆ ನೀನೊಬ್ಬನೆ ಸಿಕ್ಕಿದರೆ ಕೊಂದು ಬಿಡುತ್ತೇನೆಂದು ಭುಜ ಮತ್ತು ಸೊಂಟಕ್ಕೆ ಹಲ್ಲೆ ನಡೆಸಿದ್ದು,ಬಳಿಕ ಸೊಂಟದಿಂದ ಚಾಕು ಹೊರ ತೆಗೆದು ಇರಿಯಲು ಮುಂದಾಗಿದ್ದಾನೆ .ಈ ವೇಳೆ ಸ್ನೇಹಿತ ಪುಷ್ಪರಾಜ್ ಅವರು ಸ್ಕೂಟರನ್ನು ವೇಗವಾಗಿ ಚಲಾಯಿಸಿದರ ಪರಿಣಾಮ ನಾನು ಪ್ರಾಣಾಪಾಯದಿಂದ ಪಾರಾಗಿದ್ದೇನೆಂದು ಹಲ್ಲೆಗೊಳಗಾದ ಕಿಶೋರ್ ಆರೋಪಿಸಿದ್ದಾರೆ.
ಉಚ್ಚಿಲ ಬಟ್ಟಂಪಾಡಿ ಪ್ರದೇಶದಲ್ಲಿ ತಿಂಗಳುಗಳ ಹಿಂದಷ್ಟೆ ಸಿಸಿಬಿ ಪೊಲೀಸರು ಅಕ್ರಮ ಮರಳುಗಾರಿಕೆ ಅಡ್ಡೆಗೆ ದಾಳಿ ನಡೆಸಿ ಅಪಾರ ಪ್ರಮಾಣದ ಮರಳು ವಶಪಡಿಸಿದ್ದರು. ಆ ಪ್ರಕರಣದಲ್ಲಿ ಮರಳುಗಾರಿಕೆ ನಡೆಸುತ್ತಿದ್ದ ಆರೋಪದಲ್ಲಿ ಸುನಿಲ್ ಪೂಜಾರಿ ವಿರುದ್ಧವೂ ಪ್ರಕರಣ ದಾಖಲಾಗಿತ್ತು. ಹಲ್ಲೆಗೊಳಗಾದ ಕಿಶೋರ್ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು ಉಳ್ಳಾಲ ಠಾಣೆಯಲ್ಲಿ ಆರೋಪಿ ಸುನಿಲ್ ಪೂಜಾರಿ ವಿರುದ್ಧ ಪ್ರಕರಣ ದಾಖಲಾಗಿದೆ. ಸುನಿಲ್‌ ವಿರುದ್ಧ ಈಗಾಗಲೇ ಎರಡು ಪ್ರಕರಣಗಳು ಉಳ್ಳಾಲ ಪೊಲೀಸ್‌ ಠಾಣೆಯಲ್ಲಿದ್ದು, ಇದೀಗ ಮೂರನೇ ಪ್ರಕರಣ ದಾಖಲಾಗಿದೆ. ಕೆಲ ದಿನಗಳ ಹಿಂದಷ್ಠೇ ಕೆಥೋಲಿಕ್‌ ಮಹಾಸಭಾ ಮುಖಂಡ, ಆಲ್ವಿನ್‌ ಡಿಸೋಜ ವಿರುದ್ಧ ಅಡ್ಯಾರು ಸಮೀಪ ಮರಳು ಮಾಫಿಯಾ ದವರಿಂದ ಹಲ್ಲೆ ನಡೆದಿತ್ತು. ಪ್ರತಿಭಟನೆ ಹಲ್ಲೆ ಬಳಿಕ ಕೆಲ ದಿನಗಳ ಕಾಲ ಮರಳುಗಾರಿಕೆ ಸ್ಥಗಿತಗೊಂಡಿತ್ತಾದರೂ, ಇದೀಗ ತಡರಾತ್ರಿ ೧೧ ರ ನಂತರ ಉಳ್ಳಾಲ ತಾಲೂಕಿನ ಎಲ್ಲಾ ರಸ್ತೆಗಳಲ್ಲಿಯೂ ಮರಳು ಹೊತ್ತ ಟಿಪ್ಪರ್‌ ಲಾರಿಗಳ ಅಟ್ಟಹಾಸ ಮುಂದುವರಿದಿದೆ.

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಬ್ರಹ್ಮ ಶ್ರೀ ನಾರಾಯಣ ಗುರು ಜನ್ಮ ದಿನೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

August 7, 2026

ಭಾರತದ 79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಆಗಸ್ಟ್ 9ರಂದು “ಅಖಂಡ ಭಾರತ ಸಂಕಲ್ಪ ದಿನ”

August 7, 2026

ಯುವತಿಯರೇ, ಬದುಕು ಅಂದರೆ ಸೋಲಿಗೆ ಶರಣಾಗುವುದು ಅಲ್ಲ

August 7, 2026

Comments are closed.

Advertise
ಸಂಪರ್ಕಿಸಿ

ಹಣ ಇಲ್ಲದಿದ್ದರೆ ಯಾರೂ ಸಾಯಬಾರದು – ಸಂವಿಧಾನದ ಪರಿಚ್ಛೇದ 21ರ ಬೆಳಕಿನಲ್ಲಿ ತುರ್ತಾಗಿ ಆರೋಗ್ಯ ಸಚಿವ ಯು.ಟಿ ಖಾದರ್ ಕೂಡಲೇ ಸ್ಪಂದಿಸುವ ಅಗತ್ಯ ಇದೆ.

August 1, 2026

ತಂದೆಯ ಸಾವು; ವಿಧವೆ ತಾಯಿಯ ಜವಾಬ್ದಾರಿ ಹೊತ್ತಿದ್ದ ಯುವತಿ ಈಗ ಐಸಿಯುನಲ್ಲಿ….! ಸುಮಾರು ₹20 ಲಕ್ಷ ಚಿಕಿತ್ಸಾ ವೆಚ್ಚ; ಆರೋಗ್ಯ ಸಚಿವ ಯು.ಟಿ.ಖಾದರ್‌ ಸಹಕಾರ ಅಗತ್ಯ

July 31, 2026

ಸಾವಿರ ವರ್ಷ ಕಳೆದರೂ ಕೊರೋನಾ ವೈರಸ್ ಇರುತ್ತೆ- ಭಯ ಬೇಡ ಎಚ್ಚರವಿರಲಿ: ಆರೋಗ್ಯ ಸಚಿವ ಯು.ಟಿ. ಖಾದರ್

July 22, 2026

ಕರ್ನಾಟಕದಾದ್ಯಂತ ಆರೋಗ್ಯ ಇಲಾಖೆಯಲ್ಲಿ ಮೆಗಾ ನೇಮಕಾತಿ: ಸಾರ್ವಜನಿಕ ಆರೋಗ್ಯ ಸೇವೆ ಬಲಪಡಿಸಲು ಮಹತ್ವದ ಹೆಜ್ಜೆ

June 11, 2026
suddi

ಉಡುಪಿಯಲ್ಲಿ ಮತ್ತೊಂದು ಶೂಟೌಟ್‌; ಗುಂಡಿಕ್ಕಿ ಕಾಂಗ್ರೆಸ್‌ ಮುಖಂಡನ ಬರ್ಬರ ಹತ್ಯೆ

By UllalaVaniAugust 7, 20260

ಉಡುಪಿ, ಆಗಸ್ಟ್​​ 07: ಇತ್ತೀಚೆಗೆ ಕರಾವಳಿಯ ಕಡಲತಡಿಯಲ್ಲಿ ನಡೆದ ಶೂಟೌಟ್​​ನಲ್ಲಿ  ಓರ್ವ ಉದ್ಯಮಿ ಕೊಲೆಯಾಗಿದ್ದರು. ಇದೀಗ ಉಡುಪಿ ಜಿಲ್ಲೆಯಲ್ಲಿ ಮತ್ತೊಂದು ಶೂಟೌಟ್‌ ಘಟನೆ…

ಉಡುಪಿ: ಮಣಿಪಾಲ ಕೆಫೆ ಮೇಲೆ ದಾಳಿ- ಅಕ್ರಮ ಹುಕ್ಕಾ ಸೇವನೆ ಆರೋಪ. ವ್ಯವಸ್ಥಾಪಕ ಸೇರಿದಂತೆ 8 ಮಂದಿ ವಿರುದ್ಧ ಪ್ರಕರಣ ದಾಖಲು

August 7, 2026

ಬ್ರಹ್ಮ ಶ್ರೀ ನಾರಾಯಣ ಗುರು ಜನ್ಮ ದಿನೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

August 7, 2026

ಭಾರತದ 79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಆಗಸ್ಟ್ 9ರಂದು “ಅಖಂಡ ಭಾರತ ಸಂಕಲ್ಪ ದಿನ”

August 7, 2026
1 2 3 … 2,050 Next
Automatic YouTube Gallery

||MISSING|| ಮoಜನಾಡಿ ಅಹ್ಮದ್ ಕಬೀರ್ ನಾಪತ್ತೆ ಪ್ರಕರಣ..!

ಮಂಜನಾಡಿಯಲ್ಲಿ ವಾಸವಾಗಿರುವ ಅಹ್ಮದ್ ಕಬೀರ್ ನಾಪತ್ತೆ ಪ್ರಕರಣ; ತಂದೆಗಾಗಿ ಹಂಬಲಿಸುತ್ತಿರುವ ಮಕ್ಕಳು

ಮಾಹಿತಿ ಸಿಕ್ಕಲ್ಲಿ 7795764098, 98440 90985 ಸಂಪರ್ಕಿಸಿ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ ...
Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
||MISSING|| ಮoಜನಾಡಿ ಅಹ್ಮದ್ ಕಬೀರ್ ನಾಪತ್ತೆ ಪ್ರಕರಣ..!
Now Playing
||MISSING|| ಮoಜನಾಡಿ ಅಹ್ಮದ್ ಕಬೀರ್ ನಾಪತ್ತೆ ಪ್ರಕರಣ..!
ಮಂಜನಾಡಿಯಲ್ಲಿ ವಾಸವಾಗಿರುವ ಅಹ್ಮದ್ ಕಬೀರ್ ನಾಪತ್ತೆ ಪ್ರಕರಣ; ತಂದೆಗಾಗಿ ...
ಮಂಜನಾಡಿಯಲ್ಲಿ ವಾಸವಾಗಿರುವ ಅಹ್ಮದ್ ಕಬೀರ್ ನಾಪತ್ತೆ ಪ್ರಕರಣ; ತಂದೆಗಾಗಿ ಹಂಬಲಿಸುತ್ತಿರುವ ಮಕ್ಕಳು

ಮಾಹಿತಿ ಸಿಕ್ಕಲ್ಲಿ 7795764098, 98440 90985 ಸಂಪರ್ಕಿಸಿ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ ...
Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
|PM_VIKAS||  ಮಹಿಳೆಯರು ಸದೃಢವಾಗುವ ನಿಟ್ಟಿನಲ್ಲಿ ಸ್ವ-ಉದ್ಯೋಗ ಕೌಶಲ್ಯ ತರಬೇತಿ
Now Playing
|PM_VIKAS|| ಮಹಿಳೆಯರು ಸದೃಢವಾಗುವ ನಿಟ್ಟಿನಲ್ಲಿ ಸ್ವ-ಉದ್ಯೋಗ ಕೌಶಲ್ಯ ತರಬೇತಿ
ಮೀನುಗಾರಿಕಾ ಚಟುವಟಿಕೆ, ಸದೃಢ ಬಳಕೆ ಕುರಿತು ಮಾಹಿತಿ ನೀಡಿದ ಮಂಗಳೂರು ಮೀನುಗಾರಿಕಾ ...
ಮೀನುಗಾರಿಕಾ ಚಟುವಟಿಕೆ, ಸದೃಢ ಬಳಕೆ ಕುರಿತು ಮಾಹಿತಿ ನೀಡಿದ
ಮಂಗಳೂರು ಮೀನುಗಾರಿಕಾ ಮಹಾವಿದ್ಯಾಲಯದ ಫ್ರೋ.ಮಂಜ ನಾಯ್ಕ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು ...
Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version