Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
All News

`ಶ್ರೀ ಕೊಟ್ಟಾರ ಸ್ಥಾನ, ಮಲರಾಯ ದೈವಸ್ಥಾನದ ಭಂಡಾರಮನೆ ದೈವಚಿತ್ತದಂತೆ ಮುಂದಿನ ಬಂಡಿಯ ಮೊದಲು ನಿರ್ಮಾಣವಾಗಲಿ’ : ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ

UllalaVaniBy UllalaVaniOctober 24, 2024Updated:October 24, 2024No Comments3 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಉಳ್ಳಾಲ : ತುಳುನಾಡಿನಲ್ಲಿ ದೈವಾರಾಧನೆಗೆ ಪ್ರಾಮುಖ್ಯತೆ ಹೆಚ್ಚಿದ್ದು, ಕೌಟುಂಬಿಕ ಭದ್ರತೆ, ಸಾಮಾಜಿಕ ನ್ಯಾಯಕ್ಕಾಗಿ ದೈವಾರಾಧನೆಯ ಪರಿಕಲ್ಪನೆ ಜನರ ಮನದಲ್ಲಿ ದಟ್ಟವಾಗಿದೆ. ಇಂತಹ ನಂಬಿಕೆಯನ್ನಿಟ್ಟುಕೊಂಡು ಅನಾದಿ ಕಾಲದಿಂದ ಆಚರಿಸಿಕೊಂಡು ಬಂದಿರುವ ಶ್ರೀ ಕೊಟ್ಟಾರ ಸ್ಥಾನ, ಮಲರಾಯ ದೈವಸ್ಥಾನದ ಭಂಡಾರಮನೆ ದೈವಚಿತ್ತದಂತೆ ಮುಂದಿನ ಬಂಡಿಯ ಮೊದಲು ನಿರ್ಮಾಣವಾಗಲಿ ಎಂದು ಬ್ರಹ್ಮಶ್ರೀ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿಗಳು ಅಭಿಪ್ರಾಯ ಪಟ್ಟರು.
ಉಳ್ಳಾಲ ಬಂಡಿಕೊಟ್ಯದ ಶ್ರೀ ಕ್ಷೇತ್ರ ಕೊಟ್ಟಾರ ಸ್ಥಾನ,ಶ್ರೀ ಮಲರಾಯ ದೈವಸ್ಥಾನದಲ್ಲಿ ದೈವದ ಅಪ್ಪಣೆಯಂತೆ 2025 ರ ಬಂಡಿ ಉತ್ಸವದ ಒಳಗಾಗಿ ಸುಮಾರು 1.25 ಕೋಟಿ ವೆಚ್ಚದಲ್ಲಿ ಮಲರಾಯ ಮತ್ತು ಪರಿವಾರ ದೈವಗಳ ನೂತನ ಭಂಡಾರ ಮನೆ ನಿರ್ಮಾಣವಾಗಲಿದ್ದು ,ಗುರುವಾರದಂದು ಭಂಡಾರ ಮನೆ ಕಾಮಗಾರಿಗೆ ಬ್ರಹ್ಮಶ್ರೀ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿಗಳ ಉಪಸ್ಥಿತಿಯಲ್ಲಿ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು.
ಭಾರತೀಯ ಸಂಸ್ಕೃತಿಯು ಧರ್ಮದ ಆಧಾರದಲ್ಲೇ ಇದೆಯೇ ಹೊರತು ಮತದ ಆಧಾರದಲ್ಲಿಲ್ಲ. ಧರ್ಮದ ಸೂಕ್ಷ್ಮತೆಯನ್ನು ಅರಿತು ಜೀವನದಲ್ಲಿ ಅವುಗಳನ್ನು ಅಳವಡಿಸಿಕೊಳ್ಳಬೇಕು. ಪುರಾತನ ಕಾಲದಿಂದಲೇ ಈ ಮಣ್ಣಿನಲ್ಲಿ ದೈವಗಳ ಆರಾಧನೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾ ಬಂದಿದ್ದೇವೆ .ನಿಷ್ಕಲ್ಮಶ ಸತ್ಯಧಾದಾರದಡಿ ಭಕ್ತಿಯಿಂದ ಪ್ರಾರ್ಥಿಸಿದರೆ ದೈವವು ಎಲ್ಲರಿಗೂ ಒಲಿಯುವುದು. ದೈವಾರಾಧನೆಯಿಂದಲೇ ಇಂದಿಗೂ ಕೂಡು ಕಟ್ಟು ಉಳಿದಿದೆ. ಒಂದು ಕಾಲ ಘಟ್ಟದಲ್ಲಿ ಆಶಯದ ಕೊರತೆ, ಭಿನ್ನಾಭಿಪ್ರಾಯದಿಂದ ಇಲ್ಲಿ ದೈವಾರಾಧನೆ ನಿಂತಿತ್ತು .ಆವಾಗ ಪ್ರಮುಖರಾದ ಉಳ್ಳಾಲ ಸುಂದರ್ ಅವರು ಸಂಬಂಧ ಪಟ್ಟ ಗುರಿಕಾರ ಮನೆಯವರನ್ನು ಒಟ್ಟುಗೂಡಿಸಿ ಈ ಕ್ಷೇತ್ರವನ್ನು ಪುನರುತ್ಥಾನ ಮಾಡಿದ್ದರು. ದೈವೇಚ್ಛೆಯಂತೆ ಇಂದಿಗೂ ಇಲ್ಲಿ ಶ್ರದ್ಧೆಯಿಂದ ದೈವಾರಾಧನೆ ಮುಂದುವರೆದಿದೆ. ದೈವಗಳ ಅಪ್ಪಣೆಯ ನುಡಿಯ ಪ್ರಕಾರ ಆದಷ್ಟು ಶೀಘ್ರವಾಗಿ ಮುಂದಿನ ಬಂಡಿ ಉತ್ಸವದ ಮೊದಲಾಗಿ ಸಂಕಲ್ಪಿತ ಕಾರ್ಯವು ಪೂರ್ಣಗೊಳ್ಳಲಿ ಎಂದು ತಂತ್ರಿಗಳು ಆಶಿಸಿದರು.
ಉಳ್ಳಾಲದ ಉಳಿಯ ಶ್ರೀ ಉಳ್ಳಾಲ್ತಿ ಧರ್ಮ ಅರಸರ ಕ್ಷೇತ್ರದ ಧರ್ಮದರ್ಶಿ ದೇವು ಮೂಲ್ಯಣ್ಣ ಮಾತನಾಡಿ, ನೀಲೇಶ್ವರ ತಂತ್ರಿಗಳ ಉಪಸ್ಥಿತಿಯಲ್ಲಿ ಎಲ್ಲಾ ದೈವಸ್ಥಾನಗಳ ಧರ್ಮದರ್ಶಿಗಳು, ಪರಿಚಾರಕರು , ಮಧ್ಯಸ್ಥರು, ದೈವ ಚಾಕರಿಯವರ ಒಟ್ಟು ಸೇರುವಿಕೆಯಲ್ಲಿ ಭಂಡಾರ ಮನೆಯ ಶಿಲಾನ್ಯಾಸ ಕಾರ್ಯ ನಡೆದಿದೆ. ಈ ಪ್ರದೇಶದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಜೀರ್ಣೋದ್ಧಾರ, ಬ್ರಹ್ಮ ಕಲಶಗಳು ಸಾಂಘವಾಗಿ ನೆರವೇರಿದೆ. ಉಳಿಯ ಧರ್ಮ ಅರಸರ ಕ್ಷೇತ್ರದ ಬ್ರಹ್ಮಕಲಶ ಆದ ಕೂಡಲೇ ಮಲರಾಯ ಕ್ಷೇತ್ರದಲ್ಲೂ ಭಂಡಾರಮನೆ ನಿರ್ಮಾಣ ಕಾರ್ಯ ನಡೆಯುತ್ತಿರುವುದು ಎಲ್ಲರ ಭಾಗ್ಯ. ಈ ಸತ್ಕಾರ್ಯದಲ್ಲಿ ಜಾತಿ, ಮತಗಳ ಭೇದವಿಲ್ಲದೆ ಎಲ್ಲರೂ ಒಂದಾಗಿ ಮನಸ್ಪೂರ್ತಿಯಿಂದ ಕೆಲಸ ಮಾಡಬೇಕಿದೆ ಎಂದರು.
ಉಳಿಯ ಉಳ್ಳಾಲ್ದಿ ಧರ್ಮರಸರ ಕ್ಷೇತ್ರದ ಮೂಲ್ಯಣ್ಣ ದೇವು ಮೂಲ್ಯಣ್ಣ, ವೈದ್ಯನಾಥ ದೈವಸ್ಥಾನದ ಅರ್ಚಕ ಮುಂಡ ಪೂಜಾರಿ, ವ್ಯಾಘ್ರ ಚಾಮುಂಡೇಶ್ವರಿ ದೇವಸ್ಥಾನದ ಗುರಿಕಾರ ಗಂಗಾಧರ್ , ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಸುರೇಶ್ ಭಟ್ನಗರ, ಕೋರ‍್ದಬ್ಬು ದೈವಸ್ಥಾನ ಬಂಡಿಕೊಟ್ಯದ ಗುರಿಕಾರ ಸಂತೋಷ್ ಉಳ್ಳಾಲ್, ವೀರಭದ್ರ ದುರ್ಗಾಪರಮೇಶ್ವರಿ ದೇವಸ್ಥಾನ ಉಳ್ಳಾಲದ ಗುರಿಕಾರರು, ಲಕ್ಷಿ್ಮೀನರಸಿಂಹ ದೇವಸ್ಥಾನದ ಗುರಿಕಾರರು, ಉಳ್ಳಾಲ ಚೀರುಂಭ ಭಗವತಿ ಕ್ಷೇತ್ರದ ಗುರಿಕಾರರು, ಶ್ರೀ ಕ್ಷೇತ್ರ ಕೊಟ್ಟಾರ ಸ್ಥಾನ, ಶ್ರೀ ಮಲರಾಯ ದೈವಸ್ಥಾನ ಭಂಡಾರಮನೆ ನಿರ್ಮಾಣ ಸಮಿತಿ ಅಧ್ಯಕ್ಷರು ಉಳ್ಳಾಲ ಸುಂದರ್ , ದೈವಸ್ಥಾನದ ಅರ್ಚಕ ಲತೀಶ (ಮುಂಡ ಪೂಜಾರಿ), ಗೌರವಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಉಳ್ಳಾಲಗುತ್ತು, ಕಾರ್ಯಾಧ್ಯಕ್ಷ ನಿತಿನ್ ರಾಜ್ , ಗೌರವಾಧ್ಯಕ್ಷರು ದೇವಕಿ.ಆರ್. ಉಳ್ಳಾಲ್, ಸೋಮೇಶ್ವರ ಪುರಸಭೆ ಉಪಾಧ್ಯಕ್ಷ ರವಿಶಂಕರ್ ಸೋಮೇಶ್ವರ, ಸುರೇಂದ್ರ ಶೆಟ್ಟಿ ಮಂಚಿಲಗುತ್ತು, ಗಣೇಶ್ ಶೆಟ್ಟಿ ಕೆರೆಬೈಲು, ಜಯಲತಾ ದಿಲೀಪ್ ಉಳ್ಳಾಲ ದೊಡ್ಡಮನೆ, ರಮನಾಥ ಭಂಡಾರಿ ಉಳ್ಳಾಲಗುತ್ತು, ದಿನೇಶ್ ರೈ ಉಳ್ಳಾಲಗುತ್ತು , ಬಿಲ್ಲವ ವೇದಿಕೆ ಅಧ್ಯಕ್ಷ ಕೆ.ಟಿ.ಸುವರ್ಣ, ನಾರಾಯಣ ಗುರು ಅಧ್ಯಯನ ಪೀಠದ ಮಾಜಿ ಸದಸ್ಯ ಸತೀಶ್ ಕರ್ಕೇರ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮಾಜಿ ಸದಸ್ಯ ರಮೇಶ್ ಶೆಟ್ಟಿ ಬೋಳಿಯಾರ್, ಸಂಚಾಲಕರುಗಳಾದ ಶ್ರೀನಿವಾಸ ಕೊಡಸಾನ, ಭವಾನಿಶಂಕರ್, ಯು.ಕೆ.ಗೋಪಾಲ್, ಹರ್ಷವರ್ಧನ್ ಉಳ್ಳಾಲ್, ಮಧ್ವರಾಜ್ ತೊಕ್ಕೊಟ್ಟು, ರಾಜೇಶ್ ಕೆರೆಬೈಲ್, ಉದಯಕುಮಾರ್ ಆರ್ .ಕೆ. ಉಳ್ಳಾಲ್, ಪ್ರಶಾಂತ್ ಸುವರ್ಣ, ಬಾಲಕೃಷ್ಣ ಉಳ್ಳಾಲ್ ಬೈಲ್, ಸತೀಶ್ ಕೆರೆಬೈಲ್, ಜಗದೀಶ್ ಕೆರೆಬೈಲ್, ಲಕ್ಷö್ಮಣ್ ಬಂಡಸಾಲೆ, ಹರಿಣಾಕ್ಷಿ, ರಂಜಿತ್ ಬಂಡಿಕೊಟ್ಯ, ಗಣೇಶ್ ಬಂಡಿಕೊಟ್ಯ, ಜಗದೀಶ್ ಬಂಡಿಕೊಟ್ಯ, ಮುಂತಾದವರು ಉಪಸ್ಥಿತರಿದ್ದರು. ಜಗದೀಶ್ ಗೋಳಿಯಡಿ ನಿರೂಪಿಸಿದರು.

ದೈವತ್ವದ ಪ್ರೇರಣೆಯಿಂದಲೇ ಭಂಡಾರಮನೆ ನಿರ್ಮಾಣ : ಉಳ್ಳಾಲ ಸುಂದರ್
ಮಲರಾಯ ಮತ್ತು ಪರಿವಾರ ದೈವಗಳ ಭಂಡಾರದ ಮನೆಯಲ್ಲಿ ಊರವರಿಗೆಲ್ಲರಿಗೂ ಹಕ್ಕಿದೆ. ಹಾಗಾಗಿ ಎಲ್ಲರನ್ನೂ ಕರೆಸಿ ಅವರ ಸಮ್ಮುಖದಲ್ಲೇ ನೂತನ ಕಾಮಗಾರಿಗೆ ಶಿಲಾನ್ಯಾಸಗೈಯಲಾಗಿದೆ. ದೈವಗಳ ಪ್ರೇರಣೆಯಿಂದಲೇ ಈ ಪುಣ್ಯ ಕಾರ್ಯ ನಡೆಯುತ್ತಿದೆ.
ಉಳ್ಳಾಲ್ ಸುಂದರ್
ಅಧ್ಯಕ್ಷರು
ಭಂಡಾರ ಮನೆ ನಿರ್ಮಾಣ ಸಮಿತಿ

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಉಳ್ಳಾಲ ಪುರಸಭೆ ಮಾಜಿ ಉಪಾಧ್ಯಕ್ಷೆ ಭವಾನಿ ನಿಧನ

May 7, 2026

ಮೇ 10- ಬದ್ರಿಯಾ ವೆಲ್ಫೇರ್ ಸೊಸೈಟಿ (ರಿ) ಅಜ್ಜಿನಡ್ಕ ಇದರ ವತಿಯಿಂದ ಬೃಹತ್ ರಕ್ತದಾನ ಹಾಗೂ ವೈದ್ಯಕೀಯ ಶಿಬಿರ

May 6, 2026

ಹಿರಾ ಮಹಿಳಾ ಕಾಲೇಜು ವತಿಯಿಂದ ರಕ್ತದಾನ ಶಿಬಿರ

May 6, 2026

Comments are closed.

Advertise
ಸಂಪರ್ಕಿಸಿ

13ಗಂಟೆಗಳ ಶಸ್ತ್ರಚಿಕಿತ್ಸೆ; ಯೆನೆಪೋಯ ವೈದ್ಯರ ತಂಡಕ್ಕೆ ಬಿಗ್ ಸೆಲ್ಯೂಟ್

April 28, 2026

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ

December 15, 2025

ಸೋಮೇಶ್ವರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನೇತ್ರಾ ತಪಾಸಣಾ ಶಿಬಿರ

December 6, 2025
suddi

ಉಳ್ಳಾಲ ಪುರಸಭೆ ಮಾಜಿ ಉಪಾಧ್ಯಕ್ಷೆ ಭವಾನಿ ನಿಧನ

By UllalaVaniMay 7, 20260

ಉಳ್ಳಾಲ: ಉಳ್ಳಾಲ ಪುರಸಭೆಗೆ ಎರಡು ಬಾರಿ ಕಾಪಿಕಾಡು ವಾರ್ಡಿನಿಂದ ಸ್ಪರ್ಧಿಸಿ ಕೌನ್ಸಿಲರ್ ಆಗಿದ್ದ ಭವಾನಿ (70) ಇವರು ಅಲ್ಪಕಾಲದ ಅಸೌಖ್ಯದಿಂದ…

ಶೃಂಗೇರಿ ಶಾಸಕರ ‘ಪ್ರಮಾಣವಚನಕ್ಕೆ ಸಂಬಂಧಿಸಿದಂತೆ ಯಾವುದೇ ವಿಳಂಬ ಮಾಡಿಲ್ಲ’ – ಸ್ಪೀಕರ್ ಯು.ಟಿ. ಖಾದರ್

May 6, 2026

ಮೇ 10- ಬದ್ರಿಯಾ ವೆಲ್ಫೇರ್ ಸೊಸೈಟಿ (ರಿ) ಅಜ್ಜಿನಡ್ಕ ಇದರ ವತಿಯಿಂದ ಬೃಹತ್ ರಕ್ತದಾನ ಹಾಗೂ ವೈದ್ಯಕೀಯ ಶಿಬಿರ

May 6, 2026

ಹಿರಾ ಮಹಿಳಾ ಕಾಲೇಜು ವತಿಯಿಂದ ರಕ್ತದಾನ ಶಿಬಿರ

May 6, 2026
1 2 3 … 1,899 Next
Automatic YouTube Gallery

|| ULLALA TALUK HIGHLIGHTS || 06.05.2026

|| ULLALA TALUK HIGHLIGHTS || 06.05.2026

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for ...
trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
|| ULLALA TALUK HIGHLIGHTS || 06.05.2026
Now Playing
|| ULLALA TALUK HIGHLIGHTS || 06.05.2026
|| ULLALA TALUK HIGHLIGHTS || 06.05.2026 📍 Ullal | Dakshina Kannada | ...
|| ULLALA TALUK HIGHLIGHTS || 06.05.2026

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for ...
trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಮೇ.7ರಿಂದ ಶ್ರೀ ಆದಿಬ್ರಹ್ಮ ಮೊಗೇರರು ಮತ್ತು ಪರಿವಾರ ದೈವಗಳ ಕ್ಷೇತ್ರದ ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಹಾಗೂ ನೇಮ
Now Playing
ಮೇ.7ರಿಂದ ಶ್ರೀ ಆದಿಬ್ರಹ್ಮ ಮೊಗೇರರು ಮತ್ತು ಪರಿವಾರ ದೈವಗಳ ಕ್ಷೇತ್ರದ ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಹಾಗೂ ನೇಮ
ಬಾಳೆಪುಣಿ ಶ್ರೀ ಆದಿಬ್ರಹ್ಮ ಮೊಗೇರರು ಮತ್ತು ಪರಿವಾರ ದೈವಗಳ ಕ್ಷೇತ್ರ;ಮೇ.7ರಿಂದ ...
ಬಾಳೆಪುಣಿ ಶ್ರೀ ಆದಿಬ್ರಹ್ಮ ಮೊಗೇರರು ಮತ್ತು ಪರಿವಾರ ದೈವಗಳ ಕ್ಷೇತ್ರ;ಮೇ.7ರಿಂದ ಮೇ.10ರವರೆಗೆ ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಹಾಗೂ ನೇಮ

ಉಳ್ಳಾಲ ಪ್ರೆಸ್‌ಕ್ಲಬ್‌ನಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಜಗದೀಶ್ ಆಳ್ವ ಕುವೆತ್ತಬೈಲ್ ಮಾಹಿತಿ


📍 Ullal | Dakshina Kannada | Coastal Karnataka News ...
Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version