Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
ಗ್ರಾಮ

ಉಪನ್ಯಾಸಕನ ವಿರುದ್ಧ ಸುಮೋಟೊ ಪ್ರಕ್ರರಣ ದಾಖಲುಸಾಂವಿಧಾನಿಕ ವಾಕ್ ಸ್ವಾತಂತ್ರ್ಯ ದಮನಿಸುವ ಕಾರ್ಯ : ವಿ.ಹಿಂ.ಪ ಮುಖಂಡ ಶಿವಾನಂದ ಮೆಂಡನ್ ಆಕ್ರೋಶ

UllalaVaniBy UllalaVaniOctober 16, 2024No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ತೊಕ್ಕೊಟ್ಟು: ಸಾಂವಿಧಾನಿಕವಾಗಿ ವಾಕ್ ಸ್ವಾತಂತ್ರ್ಯವನ್ನು ಪ್ರತಿಪಾದಿಸಿ ಧರ್ಮದ  ವಿಚಾರಧಾರೆಗಳ ಕುರಿತು ಹಿಂದೂ ಸಮಾಜಕ್ಕೆ ಹೇಳಿರುವ ಉಪನ್ಯಾಸಕನ ವಿರುದ್ಧ ಪ್ರಕರಣ ದಾಖಲಿಸುವ ರಾಜ್ಯ ಸರಕಾರ ಅಸಾಂವಿಧಾನಿಕವಾಗಿ ಧರ್ಮವನ್ನು ಹಿಯ್ಯಾಳಿಸುವವರ  ವಿರುದ್ಧ ಕಠಿಣ ಕ್ರಮ ಜರುಗಿಸದೇ ಇರುವುದು  ತಾರತಮ್ಯವಲ್ಲವೇ ಎಂದು ವಿಶ್ವ ಹಿಂದೂ ಪರಿಷತ್  ಜಿಲ್ಲಾ ಸಹ ಕಾರ್ಯದರ್ಶಿ ಶಿವಾನಂದ ಮೆಂಡನ್ ಆಕ್ರೋಶ ವ್ಯಕ್ತಪಡಿಸಿದರು.


ಸಾಹಿತಿ ಹಾಗೂ ಉಪನ್ಯಾಸಕ ಡಾ.ಅರುಣ್ ಉಳ್ಳಾಲ್ ಮಾಡಿದ ಹಿಂದೂ ಧರ್ಮ ಜಾಗೃತಿಯ ಬಾಷಣದ ವಿರುದ್ಧ ದಾಖಲಾಗಿರುವ ಸುಮೊಟೊ ಕೇಸನ್ನು ಹಿಂಪಡೆಯಲು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ,ಬಜರಂಗದಳ ಉಳ್ಳಾಲ ಪ್ರಖಂಡದ ವತಿಯಿಂದ ತೊಕ್ಕೊಟ್ಟು ಜಂಕ್ಷನ್ ನಲ್ಲಿ ಮಂಗಳವಾರ ಸಂಜೆ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಕಿನ್ಯಾದಲ್ಲಿ ಜರಗಿದ ನವ ದಂಪತಿ ಸಮಾವೇಶದಲ್ಲಿ ನವ ವಿವಾಹಿತರಾಗಿ ಭಾಗವಹಿಸಿದ್ದ ಉಪನ್ಯಾಸಕ ಅರುಣ್ ಉಳ್ಳಾಲ್, ಹಿಂದೂಗಳು ಹಿಂದೂಗಳ ಸಭಾಂಗಣಗಳಲ್ಲೇ ಮದುವೆಯಾಗಿ ಎಂದು ಸಮಾಜಕ್ಕೆ ಕಿವಿಮಾತು ಹೇಳಿದ್ದಾರೆಯೇ ಹೊರತು ಯಾವುದೇ ಧರ್ಮವನ್ನ ಅಣಕಿಸಿ ,ನಿಂದಿಸಿಲ್ಲ. ಧರ್ಮದ ಬಗ್ಗೆ ಜಾಗೃತಿ ಮಾತುಗಳನ್ನಾಡಲೂ ಇಲ್ಲಿ ವಾಕ್ ಸ್ವಾತಂತ್ರ‍್ಯ ಇಲ್ಲವೇ..?. ದೈವ ,ದೇವರನ್ನು ಹಿಯ್ಯಾಳಿಸಿದ ಜೆರೋಝ ಶಾಲಾ ಶಿಕ್ಷಕಿಯ ವಿರುದ್ಧ ಕಠಿಣ ಕಾನೂನು ಕ್ರಮ  ಕೈಗೊಳ್ಳುವುದಿಲ್ಲ. ಧರ್ಮ ಜಾಗೃತಿಯ ಮಾತುಗಳನ್ನಾಡಿದರೆ ಸುಮೋಟೊ ಪ್ರಕರಣ ದಾಖಲಿಸುತ್ತಾರೆ. ರಾಜ್ಯದ ಸಿದ್ಧರಾಮಯ್ಯ ನೇತೃತ್ವದ ಸರಕಾರದಲ್ಲಿ ಹಿಂದೂ ದೈವ ,ದೇವರುಗಳನ್ನ ತುಚ್ಚವಾಗಿ ನಿಂದಿಸಿದವರಿಗೆ ಪುರಸ್ಕಾರ ನೀಡಲಾಗುತ್ತಿದೆ.ಆದರೆ ಹಿಂದೂ ಧರ್ಮದ ಬಗ್ಗೆ ಜಾಗೃತಿಯ ಬಾಷಣ ಮಾಡಿದವರ ಮೇಲೆ ಕೇಸುಗಳನ್ನ ಹಾಕಿ ದಮನಿಸುವ ಕಾರ್ಯ ನಡೆಯುತ್ತಿದೆ . ಉಪನ್ಯಾಸಕರಾಗಿರುವ ಅರುಣ್ ಉಳ್ಳಾಲ್ ಅವರು ಹಿಂದೂ ಸಮಾಜದ ಮಕ್ಕಳಿಗೆ ಧರ್ಮಶಿಕ್ಷಣ ನೀಡುತ್ತಿರುವುದೇ ಮಹಾಪರಾಧವಾಗಿದೆ. ಮೂರು ತಿಂಗಳ ಹಿಂದೆಯೇ ಅರುಣ್ ಅವರು ಕೆಲಸ ಮಾಡುತ್ತಿದ್ದ ಮಂಗಳೂರಿನ ಕ್ರೈಸ್ತ ಧರ್ಮೀಯರ ಕಾಲೇಜು ಆಡಳಿತವು  ಕೆಲಸದಿಂದ ತೆಗೆದಿದ್ದಾರೆ. ಅರುಣ್ ಜೊತೆಗೆ ೧೨ ಹಿಂದೂ ಉಪನ್ಯಾಸಕರನ್ನು ಕೆಲಸದಿಂದ ತೆಗೆಯುತ್ತಾರೆ. ಈ ಪೈಕಿ ಇಬ್ಬರು ಕಾನೂನು ಹೋರಾಟ ನಡೆಸುತ್ತಿದ್ದಾರೆ. ಇದು ಸರಕಾರದ ಕಣ್ಣಿಗೆ ಕಾಣದಿರುವುದು ದುರದೃಷ್ಟಕರ.
ಬಜರಂಗದಳ ಉಳ್ಳಾಲ ನಗರ,ಪ್ರಖಂಡ ಸಂಯೋಜಕರಾದ ಅರ್ಜುನ್ ಮಾಡೂರು ಮಾತನಾಡಿ ,  ಭಾರತ ಮಾತೆಗೆ ಜೈಕಾರ ಹಾಕಿದವರ ಮೇಲೆ ಕೇಸ್ ಹಾಕುವ ಸರಕಾರ ಇದ್ದರೆ ಅದು ಸಿದ್ಧರಾಮಯ್ಯ ನೇತೃತ್ವದ ಕರ್ನಾಟಕ ಸರಕಾರ .ಪೊಲೀಸ್ ಠಾಣೆಗೆ ಕಲ್ಲೆಸೆದವರ ಮೇಲೆ ಕೇಸಿಲ್ಲ. ಮಂಗಳೂರಿನ ಬೀದಿಗಳಲ್ಲಿ ನಮಾಝ್ ಮಾಡಿದವರ ಮೇಲೆ ಸುಮೊಟೊ ಕೇಸ್ ಮಾಡಿದ ಪೊಲೀಸ್ ಅಧಿಕಾರಿಂ ಎತ್ತಂಗಡಿ ಮಾಡಲಾಗುತ್ತದೆ. ಅರುಣ್ ಉಳ್ಳಾಲ್ ಏಕಾಂಗಿಯಲ್ಲ ಹಿಂದೂ ಸಮಾಜ,ಹಿಂದೂ ಸಂಘಟನೆಗಳು ಅವರ ಜತೆ ನಿಲ್ಲುತ್ತದೆ. .ಸಿದ್ಧರಾಮಯ್ಯ ಸರಕಾರವು ಹುಬ್ಬಳ್ಳಿ ಪ್ರಕರಣವನ್ನು ಹಿಂಪಡೆಯುತ್ತದೆ. ಹಿಂದೂಗಳು ಇನ್ನೂ ಸುಮ್ಮನಿದ್ದರೆ ಡಿಜೆ ಹಳ್ಳಿ, ಕೆಜೆ ಹಳ್ಳಿಯ ಕೇಸನ್ನೂ ಹಿಂಪಡೆಯುತ್ತಾರೆ.ಯಾವುದೇ ತಪ್ಪು ಮಾಡದ ವಿದ್ಯಾವಂತ ಸಾಹಿತಿ ಅರುಣ್ ಉಳ್ಳಾಲ್ ಮೇಲಿನ ಕೇಸು ದಾಖಲಿಸಿರುವ ನಡೆ ಖಂಡನೀಯ. ಉದ್ಯೋಗ ಭದ್ರತೆಯ ಬಗ್ಗೆಯೂ ವಿ.ಹಿಂ.ಪ ಅರುಣ್ ಅವರಿಗೆ ವಿಶ್ವಾಸ ನೀಡಿದೆ ಎಂದರು.
ವಿಶ್ವ ಹಿಂದೂ ಪರಿಷತ್ನ ಮಠ,ಮಂದಿರ,ಅರ್ಚಕ ವಿಭಾಗ ಪ್ರಮುಖ್ ಪೊಳಲಿ ಗಿರಿಪ್ರಕಾಶ್ ತಂತ್ರಿ , ವಿ.ಹಿಂ.ಪ ಜಿಲ್ಲಾಧ್ಯಕ್ಷರಾದ ಹೆಚ್.ಕೆ ಪುರುಷೋತ್ತಮ್, ಉಪಾಧ್ಯಕ್ಷರಾದ ಮನೋಹರ್ ಸುವರ್ಣ,ಪ್ರಮುಖರಾದ ಕೃಷ್ಣ ಮೂರ್ತಿ, ಗೋಪಾಲ ಕುತ್ತಾರು, ನಾರಾಯಣ ಕುಂಪಲ, ರವಿ ಅಸೈಗೋಳಿ, ಗುರುಪ್ರಸಾದ್ ಕಡಂಬಾರ್, ಶಿವಪ್ರಸಾದ್ ಕೊಣಾಜೆ, ಕಿಶನ್ ತಾರಿಪಡ್ಪು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ನಾಗೇಶ್ ಕುಂಪಲ, ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ, ಉಪಾಧ್ಯಕ್ಷರಾದ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ಕ್ಷೇತ್ರಾಧ್ಯಕ್ಷರಾದ ಜಗದೀಶ ಆಳ್ವ ಕುವೆತ್ತಬೈಲು, ಕ್ಷೇತ್ರ ಮಹಿಳಾ ಮೋರ್ಚದ ಅಧ್ಯಕ್ಷೆ ಮಾಧವಿ ಉಳ್ಳಾಲ್, ಯುವ ಮೋರ್ಚದ ಅಧ್ಯಕ್ಷ ಮುರಳಿ ಕೊಣಾಜೆ, ಪ್ರಮುಖರಾದ ಚಂದ್ರಶೇಖರ್ ಉಚ್ಚಿಲ್ , ಲಲಿತಾ ಸುಂದರ್, ಜಗದೀಶ ಶೇಣವ ಮೊದಲಾದವರು ಉಪಸ್ಥಿತರಿದ್ದರು.
ವಿ.ಹಿಂ.ಪ ಜಿಲ್ಲಾ ಪ್ರಚಾರ ಮತ್ತು ಪ್ರಸಾರ ವಿಭಾಗದ ಪ್ರಮುಖ್ ಆಶಿಕ್ ಗೋಪಾಲಕೃಷ್ಣ ಸ್ವಾಗತಿಸಿ ನಿರೂಪಿಸಿದರು. ಬಜರಂಗದಳ ಉಳ್ಳಾಲ ನಗರ ಪ್ರಖಂಡ ಸಂಯೋಜಕರಾದ ಅರ್ಜುನ್ ಮಾಡೂರು ಪ್ರಾಸ್ತಾವಿಕವಾಗಿ ಮಾತನಾಡಿದರು.ಪ್ರಮುಖರಾದ ಹರಿಪ್ರಸಾದ್ ಕೈರಂಗಳ ವಂದಿಸಿದರು.

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಮಂಗಳೂರು: ಬೈಕ್‌ ಸವಾರಿ ವೇಳೆ ಮಕ್ಕಳಿಗೆ ಹೆಲ್ಮೆಟ್‌ ಕಡ್ಡಾಯ-ಪೊಲೀಸರ ಜಾಗೃತಿ ಅಭಿಯಾನ

June 17, 2026

ಕೃಷಿ ಪಂಪ್‌ಸೆಟ್‌ಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಕೆ ವಿರೋಧಿಸಿ ಹೋರಾಟಕ್ಕೆ ಕರೆ

June 17, 2026

ಉಳ್ಳಾಲ; ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ…!!

June 16, 2026

Comments are closed.

Advertise
ಸಂಪರ್ಕಿಸಿ

ಕರ್ನಾಟಕದಾದ್ಯಂತ ಆರೋಗ್ಯ ಇಲಾಖೆಯಲ್ಲಿ ಮೆಗಾ ನೇಮಕಾತಿ: ಸಾರ್ವಜನಿಕ ಆರೋಗ್ಯ ಸೇವೆ ಬಲಪಡಿಸಲು ಮಹತ್ವದ ಹೆಜ್ಜೆ

June 11, 2026

ರಾಜ್ಯದಲ್ಲಿ ಖಾಸಗಿ ಅಸ್ಪತ್ರೆಯಲ್ಲಿ ಆಯುಷ್ಮಾನ್ ಯೋಜನೆ ಸಮರ್ಪಕ ಜಾರಿಗೆ ಜ್ಯಾರಿ ಆಗದಿದ್ದರೆ ಜಿಲ್ಲೆಯ ಅರೋಗ್ಯಧಾರಿಗಳ ಮೇಲೆ ಕ್ರಮ :- ಅರೋಗ್ಯ ಸಚಿವ ಯು.ಟಿ ಖಾದರ್

June 9, 2026

ಫೀಲ್ಡ್ ಗೆ ಇಳಿದ ಯು.ಟಿ. ಖಾದರ್ – ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ಕ್ಲಾಸ್…!

June 5, 2026

ವೆನ್ಲಾಕ್ ಆಸ್ಪತ್ರೆಯಲ್ಲಿ ಮನೋವೈದ್ಯರು ಮತ್ತು ಕ್ಲಿನಿಕಲ್ ಸೈಕಾಲಜಿಸ್ಟ್‌ಗಳ ತೀವ್ರ ಕೊರತೆ – ಬಡ ರೋಗಿಗಳ ನಿರ್ಲಕ್ಷ್ಯ ಯಾಕೆ ಎಂದು ಸಾರ್ವಜನಿಕರ ಪ್ರಶ್ನೆ

May 26, 2026
suddi

ರಕ್ಷಣಾ ಕ್ಷೇತ್ರದಲ್ಲಿ ದಾಖಲೆಯ 1.78 ಲಕ್ಷ ಕೋಟಿ ರೂ. ಉತ್ಪಾದನೆ- ಕೇಂದ್ರ ಸಚಿವ ರಾಜನಾಥ್ ಸಿಂಗ್

By UllalaVaniJune 17, 20260

ನವದೆಹಲಿ, ಜೂ. 17 : ಭಾರತದ ರಕ್ಷಣಾ ಉತ್ಪಾದನೆಯು 2025-26ರ ಹಣಕಾಸು ವರ್ಷದಲ್ಲಿ ದಾಖಲೆಯ 1.78 ಲಕ್ಷ ಕೋಟಿ ರೂ. ಮಟ್ಟ…

ಕ್ಯಾಮರೂನ್‌ ದೇಶದ ಮಹಿಳಾ ರೋಗಿಗೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಹೃದಯ ಶಸ್ತ್ರಚಿಕಿತ್ಸೆ

June 17, 2026

ಬಡವರ ಆಸ್ಪತ್ರೆ ಖಾಸಗೀಕರಣ ಬೇಡ: ಸುರತ್ಕಲ್‌ನಲ್ಲಿ ಬೃಹತ್ ಮಾನವ ಸರಪಳಿ

June 17, 2026

ಮಂಗಳೂರು: ಬೈಕ್‌ ಸವಾರಿ ವೇಳೆ ಮಕ್ಕಳಿಗೆ ಹೆಲ್ಮೆಟ್‌ ಕಡ್ಡಾಯ-ಪೊಲೀಸರ ಜಾಗೃತಿ ಅಭಿಯಾನ

June 17, 2026
1 2 3 … 1,972 Next
Automatic YouTube Gallery

ಬಜ್ಜೆ: ಪ್ರೋ.ಬಿ.ಕೃಷ್ಣಪ್ಪ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮದಿನ ಆಚರಣೆ

ಕರ್ನಾಟಕ ದಲಿತ ಸಂಘರ್ಷ ಸಮಿತಿ ಮಂಗಳೂರು ವತಿಯಿಂದ: ಪ್ರೋ.ಬಿ.ಕೃಷ್ಣಪ್ಪ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮದಿನ ಆಚರಣೆ

ಬಜ್ಜೆ ಸಿದ್ಧಾರ್ಥನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೊಳಗಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕ್ರಾಂತಿಗೀತೆ

📍 Ullal | Dakshina Kannada | Coastal Karnataka ...
News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಬಜ್ಜೆ: ಪ್ರೋ.ಬಿ.ಕೃಷ್ಣಪ್ಪ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮದಿನ ಆಚರಣೆ
Now Playing
ಬಜ್ಜೆ: ಪ್ರೋ.ಬಿ.ಕೃಷ್ಣಪ್ಪ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮದಿನ ಆಚರಣೆ
ಕರ್ನಾಟಕ ದಲಿತ ಸಂಘರ್ಷ ಸಮಿತಿ ಮಂಗಳೂರು ವತಿಯಿಂದ: ಪ್ರೋ.ಬಿ.ಕೃಷ್ಣಪ್ಪ ಹಾಗೂ ...
ಕರ್ನಾಟಕ ದಲಿತ ಸಂಘರ್ಷ ಸಮಿತಿ ಮಂಗಳೂರು ವತಿಯಿಂದ: ಪ್ರೋ.ಬಿ.ಕೃಷ್ಣಪ್ಪ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮದಿನ ಆಚರಣೆ

ಬಜ್ಜೆ ಸಿದ್ಧಾರ್ಥನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೊಳಗಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕ್ರಾಂತಿಗೀತೆ

📍 Ullal | Dakshina Kannada | Coastal Karnataka ...
News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ತೊಕ್ಕೊಟ್ಟು ಒಳಪೇಟೆಯ ಎಬಿಸಿ ಸಂಘಟನೆ ಕಚೇರಿ ಮುಂಭಾಗ ಅ#ಪಘಾ*ತ
Now Playing
ತೊಕ್ಕೊಟ್ಟು ಒಳಪೇಟೆಯ ಎಬಿಸಿ ಸಂಘಟನೆ ಕಚೇರಿ ಮುಂಭಾಗ ಅ#ಪಘಾ*ತ
ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆ 📍 Ullal | Dakshina Kannada | Coastal ...
ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆ
📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and ...
fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version