ದುಬೈ: ಬಿಲ್ಲವಸ್ ಫ್ಯಾಮಿಲಿ ದುಬೈ ಇವರ ವತಿಯಿಂದ ಬ್ರಹ್ಮ ಶ್ರೀ ನಾರಾಯಣ ಗುರುವರ್ಯರ 170 ನೇ ಗುರು ಜಯಂತಿಯು ದುಬೈ ನ ಗ್ಲೆಂಡಲೆ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಭಾನುವಾರದಂದು ವಿಜೃಂಭಣೆಯಿಂದ ನಡೆಯಿತು.
ಕಾರ್ಯಕ್ರಮದಲ್ಲಿ ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿಯ ವತಿಯಿಂದ ಭಜನೆ ನಡೆಯಿತು. ಬಿಲ್ಲವ ಸಮಾಜದ ಪುಟಾಣಿ ಮಕ್ಕಳು, ಮಹಿಳೆಯರ ಹಾಗೂ ಪುರುಷರ ತಂಡಗಳ ನೃತ್ಯ ಭಜನೆಯಲ್ಲಿ ಪಾಲ್ಗೊಂಡರು.




ಕಾರ್ಯಕ್ರಮದಲ್ಲಿ ಅಧಿಕ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ಮಹಾಪೂಜೆಯ ನಂತರ ಮಹಾಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆಯೂ ನಡೆಯಿತು.
ಮಹರ್ಷಿ ದರ್ಶನ ಖ್ಯಾತಿಯ ಶ್ರೀ ಆನಂದ ಗುರುಜಿಯವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗುರುಗಳ ಪ್ರಸಾದವನ್ನು ಸ್ವೀಕರಿಸಿದರು.
ಸಂಘಟನೆಯ ಅಧ್ಯಕ್ಷರಾದ ದೀಪಕ್ ಎಸ್ ಪಿ ಹಾಗೂ ಎಲ್ಲಾ ಪದಾಧಿಕಾಸರಿ ಪೂಜೆಯ ಸಿದ್ಧತೆ, ಪ್ರಸಾದ ಹಾಗೂ ಅನ್ನಸಂತರ್ಪಣೆಯ ಎಲ್ಲಾ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.


