ತೊಕ್ಕೊಟ್ಟು: ಕರ್ನಾಟಕ ರಾಜ್ಯ ಸರಕಾರಿ ನೌಕರರ ಹಾಗೂ ಸೇವಾ ನಿವೃತ್ತಿ ಹೊಂದಿರುವ ಸರಕಾರಿ ನೌಕರರ ಸಂಘಟನೆಯ ಅಭಿವೃದ್ಧಿ ಮತ್ತು ಪ್ರಮುಖ ಬೇಡಿಕೆಗಳ ಬಗ್ಗೆ ಚರ್ಚಿಸಲು ತೊಕ್ಕೊಟ್ಟು ಒಳಪೇಟೆಯ ಸೈಂಟ್ ಸೆಬಾಸ್ಟಿಯನ್ ಚರ್ಚ್ ವಾಣಿಜ್ಯ ಕಟ್ಟಡದಲ್ಲಿರುವ ರಿಚಲ್ ಸರ್ವಿಸಸ್ ಕಚೇರಿಯಲ್ಲಿ ಸ.14ರ ಶನಿವಾರದದಂದು ಬೆಳಿಗ್ಗೆ 10ಗಂಟೆಗೆ ಸಭೆ ಕರೆಯಲಾಗಿದೆ.
ಈ ಸಭೆಯಲ್ಲಿ ಉಳ್ಳಾಲ ತಾಲೂಕು ವ್ಯಾಪ್ತಿಯಲ್ಲಿರುವ ಕರ್ತವ್ಯ ನಿರತ ಹಾಗೂ ನಿವೃತ್ತಿ ಹೊಂದಿದ ಸರಕಾರಿ ನೌಕರರು ಮಾತ್ರ ಭಾಗವಹಿಸಲು ಆಹ್ವಾನಿಸಲಾಗಿದೆ. ಹಾಗೂ ನೌಕರರ ಸಂಘಟನೆಯ ಅಭಿವೃದ್ಧಿ ಮತ್ತು ಪ್ರಮುಖ ಬೇಡಿಕೆಗಳ ಬಗ್ಗೆ ಚರ್ಚಿಸಲು ಈ ಸಭೆ ಮುಖ್ಯವಾಗಿದ್ದು, ದಕ್ಷಿಣ ಕನ್ನಡ ಜಿಲ್ಲಾ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಹಾಗೂ ದಕ್ಷಿಣ ಕನ್ನಡ ನಿವೃತ್ತ ಪಿಂಚಣಿದಾರರ ಸಂಘದ ಜಿಲ್ಲಾ ಅಧ್ಯಕ್ಷರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು ಉಳ್ಳಾಲ ತಾಲೂಕಿನ ಎಲ್ಲಾ ಸರಕಾರಿ ನೌಕರರು ಹಾಗೂ ನಿವೃತ್ತ ನೌಕರರು ಈ ಸಭೆಗೆ ತಪ್ಪದೆ ಹಾಜರಾಗಬೇಕಾಗಿದ್ದು ಹೆಚ್ಚಿನ ವಿವರಿಗಳಿಗಾಗಿ ನಿವೃತ್ತ ತೋಟಗಾರಿಕೆ ಇಲಾಖೆ ನೌಕರರಾದ ಸಿರಿಲ್ ರಾಬರ್ಟ್ ಡಿ ಸೋಜ 9481517127 ಇವರನ್ನು ಸಂಪರ್ಕಿಸಬಹುದಾಗಿದೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.


