ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಕೊಲ್ಯ : ಉಳ್ಳಾಲದ ಕೊಲ್ಯ ಶ್ರೀ ನಾಗಬ್ರಹ್ಮ ಅನ್ನಪೂಣೇಶ್ವರಿ ಕ್ಷೇತ್ರದಲ್ಲಿ ಮುಂದಿನ ವರುಷ ಜ. 30ರಂದು ಅಷ್ಟ ಪವಿತ್ರ ನಾಗ ಮಂಡಲೋತ್ಸವ ನಡೆಯಲಿದ್ದು ಆ ಪ್ರಯುಕ್ತ ವಿವಿಧ ಸಮಿತಿಗಳ ರಚನೆಯ ಪೂರ್ವಭಾವಿ ಸಭೆ ರವಿವಾರ ಶ್ರೀ ಕ್ಷೇತ್ರದಲ್ಲಿ ವಿವಿಧ ಕ್ಷೇತ್ರದ, ಧಾರ್ಮಿಕ, ಸಾಮಾಜಿಕ ನಾಯಕರ ಸಮ್ಮುಖದಲ್ಲಿ ನಡೆಯಿತು.
ಈ ಸಂದರ್ಭ ನಾಗಮಂಡಲೋತ್ಸವ ಸಮಿತಿಗೆ ಸಂಬಂಧಿಸಿದ ಉಪ ಸಮಿತಿಯನ್ನು ಸಮಿತಿಯ ಪ್ರಧಾನ ಕಾರ್ಯದರ್ಶಿ ಮಹೇಶ್ ಮೂರ್ತಿ ಘೋಷಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೌರವಾಧ್ಯಕ್ಷ ಶಿವಣ್ಣ ಶೆಟ್ಟಿ ವಹಿಸಿದ್ದರು. ಮಾಜಿ ಶಾಸಕ ಕೆ. ಜಯರಾಮ ಶೆಟ್ಟಿ , ಜಿ.ಪಂ. ಉಪಾಧ್ಯಕ್ಷ ಸತೀಶ್ ಕುಂಪಲ, ರಾಜಕೀಯ ಮುಖಂಡರಾದ ಚಂದ್ರಶೇಖರ್ ಉಚ್ಚಿಲ್, ಕ್ಷೇತ್ರದ ಸಮಿತಿ ಅಧ್ಯಕ್ಷ ಸುಶಾಂತ್ ಭಂಡಾರಿ, ಪ್ರಮುಖರಾದ ಪ್ರವೀಣ್ ಬಗಂಬಿಲ, ರಮೇಶ್ ಶಿವಭಾಗ್, ರಾಜೀವಿ ಕೆಂಪುಮಣ್ಣು, ಸುರೇಖ ಚಂದ್ರಹಾಸ, ಲಲಿತಾ ಸುಂದರ್, ದೀಪಕ್ ಪಿಲಾರ್, ಸುಷ್ಮಾ ಜನಾರ್ಧನ್, ಸುರೇಶ್ ಭಟ್ನಗರ, ದಿನೇಶ್ ಕುಂಪಲ, ದಿವಾಕರ ಉಪಸ್ಥಿತರಿದ್ದರು.
ಧರ್ಮದರ್ಶಿಗಳಾದ ಭಾಸ್ಕರ್ ಐತಾಳ್ ಪ್ರಸ್ತಾವನೆಗೈದರು. ಮೋಹನ್‍ದಾಸ್ ಶೆಟ್ಟಿ ಸ್ವಾಗತಿಸಿದರು. ರವೀಂದ್ರನಾಥ ಪೂಂಜ ವಂದಿಸಿದರು.




