ಮಂಗಳೂರು: ಪುಟ್ ಬಾಲ್ ಆಟದ ವಿಚಾರದಲ್ಲಿ ಅಪಹರಿಸಿ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.
ಅರೋಪಿಗಳಾದ ದಿಯಾನ್ ಹಾಗೂ ಸಲ್ಮಾನ್ ಬಂಧಿಸಿದ ಪೊಲೀಸರು.
ಅಗಸ್ಟ್ 14ರಂದು ನಡೆದ ಫುಟ್ ಬಾಲ್ ಆಟದ ವಿಚಾರದಲ್ಲಿ ಗಲಾಟೆ ಆಗಿದ್ದು ಅಗಸ್ಟ್ 19ರ ರಾತ್ರಿ ಈ ಅಪಹರಣ ಹಾಗೂ ಹಲ್ಲೆ ನಡೆದಿದೆ. ಮಂಗಳೂರಿನ ಅಲೋಶಿಯಸ್ ಕಾಲೇಜು ಹಾಗೂ ಯೆನೇಪೋಯಾ ನಡುವಿನ ಪಂದ್ಯದಲ್ಲಿ ಯೆನೇಪೋಯಾ ಕಾಲೇಜು ಗೆದ್ದಿತ್ತು. ಇದರ ದ್ವೇಷದಿಂದ ಯೆನೇಪೋಯಾ ಕಾಲೇಜು ಅಪ್ರಾಪ್ತ ವಿದ್ಯಾರ್ಥಿ ಹಾಗೂ ಮಂಗಳೂರಿನ ಮಾತಾ ಕಾಲೇಜು ವಿದ್ಯಾರ್ಥಿಗಳ ಅಪಹರಣ ಮಾಸಿ ಮಹಾಕಾಳಿ ಪಡ್ಪು, ಜೆಪ್ಪು ಮಸೀದಿ ಬಳಿ ಹಾಗೂ ಪಡೀಲ್ ನಲ್ಲಿ ನಡೆಸಲಾಗಿದೆ.
ಬಿಎನ್ ಎಸ್ 115(2), 118(1), 127(2), 137(2), 189(2), 190, 191(1), 191(3), 351(2), 352 ಅಡಿ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅರೋಪಿಗಳಾದ ದಿಯಾನ್ ಹಾಗೂ ಸಲ್ಮಾನ್ ಬಂಧನ ಮಾಡಲಾಗಿದ್ದು ಉಳಿದ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
……………………………………
ನಿನ್ನೆ ಸಂಜೆ ಯೆನೇಪೋಯಾದ ಅಪ್ರಾಪ್ತ ವಿದ್ಯಾರ್ಥಿಗಳನ್ನು ಮಂಗಳೂರಿನ ಅಲೋಶಿಯಸ್ ಕಾಲೇಜು ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದಾರೆ
ಮಹಾಕಾಳಿಪಡ್ಪು ಸೇರಿ ಬೇರೆ ಬೇರೆ ಭಾಗದಲ್ಲಿ ಹಲ್ಲೆ ಮಾಡಿದ್ದಾರೆ. ಇದರ ವಿಡಿಯೋ ಮಾಡಿ ಸಾಮಾಜಿಕ ತಾಣಗಳಲ್ಲಿ ವೈರಲ್ ಮಾಡಿದ್ದಾರೆ. ಇದರಲ್ಲಿ ಒಬ್ಬನ ತಂದೆ ನಿನ್ನೆ ರಾತ್ರಿ ನಮಗೆ ಮಾಹಿತಿ ನೀಡಿದ್ದರು. ಅದರಂತೆ ನಾವು ದೂರು ಪಡೆದು ಪ್ರಕರಣ ದಾಖಲು ಮಾಡಿದೆವು ಅ.14ರಂದು ಯೆನೇಪೋಯಾ ಹಾಗೂ ಅಲೋಶಿಯಸ್ ಕಾಲೇಜು ಮಧ್ಯೆ ಫುಟ್ ಬಾಲ್ ಮ್ಯಾಚ್ ಇತ್ತು. ಇದರಲ್ಲಿ ಗೆದ್ದ ಯೆನೇಪೋಯಾ ಕಾಲೇಜಿನವರು ಸಂಭ್ರಮಿಸ್ತಿದ್ದಾಗ ಜಗಳ ಆಗಿದೆ. ಅದರ ಮುಂದುವರೆದ ಭಾಗವಾಗಿ ಅಪಹರಿಸಿ ಹಲ್ಲೆ ಮಾಡಲಾಗಿದೆ. ಇದೀಗ ಇಬ್ಬರನ್ನು ನಾವು ಬಂಧನ ಮಾಡಿದ್ದೇವೆ, ಉಳಿದವರ ಬಂಧನ ಆಗಬೇಕಿದೆ. ಆರೋಪಿ ವಿದ್ಯಾರ್ಥಿಗಳು ಅಲೋಶಿಯಸ್ ಕಾಲೇಜಿನವರು. ಇದರಲ್ಲಿ ಕೆಲವರು ಕಾಲೇಜು ಡ್ರಾಪ್ ಔಟ್ ಆಗಿದ್ದಾರೆ. ಇವರಲ್ಲಿ ಕೆಲವರು ಕೇರಳ ಮೂಲದವರಾಗಿದ್ದಾರೆ. ಕೆಲ ವಿದ್ಯಾರ್ಥಿಗಳು ಮಾತ್ರ ಸ್ಥಳೀಯರು, ತನಿಖೆ ಆಗುತ್ತಿದೆ. ಇಬ್ಬರ ಬಂಧನ ಆಗಿದೆ, ಉಳಿದ ನಾಲ್ವರ ಬಂಧನ ಆಗಬೇಕಿದೆ
ಅನುಪಮ್ ಅಗರ್ವಾಲ್
ಮಂಗಳೂರು ಪೊಲೀಸ್ ಕಮಿಷನರ್


