UN networks
ಉಳ್ಳಾಲ: ಬಡ ರಿಕ್ಷಾ ಚಾಲಕರ ಹೊಟ್ಟೆಗೆ ಅಧಿಕಾರಿಗಳು ಹೊಡೆಯುವ ಸಂದರ್ಭ, ಮನವಿಗೆ ಸ್ಪಂಧಿಸಿದವರು ಯು.ಟಿ ಖಾದರ್ . ಹಾಗಾಗಿ ಈ ಬಾರಿಯ ಗ್ರಾಮಾಂತರ ರಿಕ್ಷಾ ಚಾಲಕರು ಯು.ಟಿ . ಖಾದರ್ ಅವರ ಮೇಲಿನ ಅಪಪ್ರಚಾರಗಳಿಗೆ ಕಿವಿಗೊಡದೆ ಸಂಪೂರ್ಣವಾಗಿ ಬೆಂಬಲಿಸಿ ಮತ್ತೆ ಶಾಸಕರನ್ನಾಗಿ ಆಯ್ಕೆ ಮಾಡಲು ಪಣತೊಟ್ಟಿದ್ದೇವೆ ಎಂದು ಗ್ರಾಮಾಂತರ ರಿಕ್ಷಾ ಚಾಲಕ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಪ್ರಸಾದ್ ಕುರ್ನಾಡು ಹೇಳಿದ್ದಾರೆ.
ನಗರಕ್ಕೆ ಪ್ರವೇಶಿಸುವಾಗ ದೊಡ್ಡ ಮೊತ್ತದ ದಂಡ ವಿಧಿಸುತ್ತಿದ್ದರು. ಈ ಸಂದರ್ಭ ಪ್ರಥಮವಾಗಿ ಸಮಸ್ಯೆಯಯನ್ನು ಆಲಿಸಿ ಪರಿಹಾರವನ್ನು ಒದಗಿಸಿಕೊಟ್ಟವರು ಶಾಸಕ ಯು.ಟಿ ಖಾದರ್. ಜಾತ್ಯಾತೀತ , ಪಕ್ಷಾತೀತವಾಗಿ , ಧರ್ಮಾತೀತವಾಗಿ ಎಲ್ಲಾ ರಿಕ್ಷಾ ಚಾಲಕರು ಖಾದರ್ ಅವರನ್ನು ಬೆಂಬಲಿಸುವುದು ರಿಕ್ಷಾ ಚಾಲಕರ ಕರ್ತವ್ಯವಾಗಿದೆ.ಎಲ್ಲಾ ಪಾರ್ಕುಗಳಲ್ಲಿಯೂ ತಂಗುದಾಣವನ್ನು ನಿರ್ಮಿಸಿದವರು ಶಾಸಕರು. ಕಷ್ಟಗಳಿಗೆ ನೇರವಾಗಿ ಸ್ಪಂಧಿಸಿದವರು ,ಕೊರೊನಾ ಸಂದರ್ಭದಲ್ಲಿ ಗ್ರಾಮಾಂತರ ರಿಕ್ಷಾ ಚಾಲಕರಿಗೆ ಕಿಟ್ ಕೊಟ್ಟು ಸಹಾಯ ಮಾಡಿದವರು. ಬಡವರಿಗೆ ಸಿಗುವ ಏಕೈಕ ನಾಯಕನನ್ನು ಗೆಲ್ಲಿಸುವ ಜವಾಬ್ದಾರಿ ರಿಕ್ಷಾ ಚಾಲಕರದ್ದಾಗಿದೆ. ಅಪಪ್ರಚಾರಗಳಿಗೆ ಕಿವಿಗೊಡದೆ ಯು.ಟಿ ಖಾದರ್ ಅವರನ್ನು ಬೆಂಬಲಿಸಬೇಕಿದೆ ಎಂದರು.
ಸದಸ್ಯರಾದ ಜಲೀಲ್ ಕೊಡಕ್ಕಲ್ ಮಾತನಾಡಿ, ನಾಳೆಯೂ ಬೆಂಬಲಕ್ಕೆ ನಿಲ್ಲುವವರು ಖಾದರ್ ಒಬ್ಬರೇ : ಗ್ರಾಮಾಂತರ ರಿಕ್ಷಾ ಚಾಲಕರು ಇನ್ನೊಂದು ತಾಲೂಕಿಗೆ ಹೋಗುವಾಗ ಆರ್ ಟಿಓ ಅಧಿಕಾರಿಗಳು ತೊಂದರೆ ನೀಡುತ್ತಿದ್ದರು. ರೂ.5,000 ದಂಡವನ್ನು ವಿಧಿಸುತ್ತಿದ್ದರು. ಈ ಕುರಿತು ಅವರಿಗೆ ಮನವಿ ಸಲ್ಲಿಸುತ್ತಿದ್ದಂತೆ ಆರ್ ಟಿಓ ಅಧಿಕಾರಿಗಳ ಸಭೆ ನಡೆಸಿ ನಗರ ಪ್ರವೇಶಿಸುವ ಅವಕಾಶವನ್ನು ಕಲ್ಪಿಸಿದ್ದರು. ಈ ನಿಟ್ಟಿನಲ್ಲಿ ಚುನಾವಣೆಯಲ್ಲಿ ಗ್ರಾಮಾಂತರ ರಿಕ್ಷಾ ಚಾಲಕರು ಶಾಸಕ ಯು.ಟಿ ಖಾದರ್ ಅವರನ್ನು ಬೆಂಬಲಿಸಬೇಕಿದೆ, ನಾಳೆಯೂ ಅವರು ರಿಕ್ಷಾ ಚಾಲಕರ ಪರವಾಗಿ ನಿಲ್ಲುತ್ತಾರೆ ಅನ್ನುವ ನಂಬಿಕೆಯಿದೆ. ಒಂದು ಮನವಿಗೆ ನಾಲ್ಕು ಬಾರಿ ವಾಪಸ್ಸು ಕರೆ ಮಾಡಿ ಕಷ್ಟಗಳನ್ನು ಕೇಳಿದವರು ಶಾಸಕರು, ಕರೆಗೆ ಸ್ಪಂಧಿಸುವ ಏಕೈಕ ನಾಯಕ . ಇದರಿಂದ ದುಡಿಯುವ ವರ್ಗದ ಪರವಾಗಿ ನಿಲ್ಲುವ ಖಾದರ್ ಅವರಿಗೆ ಬೆಂಬಲಿಸುವುದು ತಪ್ಪೆಂದು ಅನಿಸುವುದಿಲ್ಲ ಎಂದರು.
ಆಟೋ ರಾಜಕನ್ಮಾರ್ ಯೂನಿಯನ್ನಿನ ಅಧ್ಯಕ್ಷ ಸಿದ್ದೀಖ್ ಕೊಡಕ್ಕಲ್ ಮಾತನಾಡಿ , ಮನೆಯ ಜವಾಬ್ದಾರಿ, ಮಕ್ಕಳ ವಿದ್ಯಾಭ್ಯಾಸ ಎಲ್ಲವನ್ನೂ ಗ್ರಾಮಾಂತರ ರಿಕ್ಷಾ ಚಾಲಕರು ನಿಭಾಯಿಸುವುದು ಹರಸಾಹಸ. ಈ ನಡುವೆ ಆರ್ ಟಿಓ ಅಧಿಕಾರಿಗಳು ಗ್ಯಾಸ್ ಹಾಕಲು ತೆರಳುವ ಸಂದರ್ಭದಲ್ಲೂ ರೂ. 5,000, 10,000 ದೊಡ್ಡ ಮೊತ್ತದ ದಂಡ ವಿಧಿಸಿ ಲೂಟಿ ನಡೆಸುತ್ತಿದ್ದರು. ಇದನ್ನು ಶಾಸಕರಿಗೆ ತಿಳಿಸಿದಾಗ ತಕ್ಷಣ ಸ್ಪಂಧಿಸಿ ಧೈರ್ಯದಿಂದ ಮಂಗಳೂರಿಗೆ ಹೋಗಿ ಬರುವಂತೆ ಮಾಡಿದವರು. ಯಾವುದೇ ಸಮಯದಲ್ಲಿ ಕಷ್ಟಕ್ಕೆ ಸ್ಪಂಧಿಸಿ ಕರೆಯನ್ನು ಸ್ವೀಕರಿಸುವವರು ಖಾದರ್ ಒಬ್ಬರೇ. ಈ ಕಾರಣಕ್ಕಾಗಿ ಪ್ರಚಂಡ ಬಹುಮತದಿಂದ ಅವರನ್ನು ಪುನರಾಯ್ಕೆಗೊಳಿಸುವುದು ಗ್ರಾಮಾಂತರ ರಿಕ್ಷಾ ಚಾಲಕರೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಭ್ರಷ್ಟ ಬಿಜೆಪಿ ಸರಕಾರವನ್ನು ಕಿತ್ತೊಗೆಯಿರಿ : ಪ್ರಶಾಂತ್ ಕಾಜವ
ಪ್ರಜ್ಞಾವಂತ ಮತದಾರರು ಕಾಂಗ್ರೆಸ್ ಪಕ್ಷದ ಪರವಾಗಿ ಮತದಾನ ಮಾಡಿ, ಭ್ರಷ್ಟ ಬಿಜೆಪಿ ಪಕ್ಷವನ್ನು ಕಿತ್ತೊಗೆಯಬೇಕಿದೆ ಎಂದು ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ ಹೇಳಿದ್ದಾರೆ. ಕಾಂಗ್ರೆಸ್ ಸರಕಾರ ರಚಿಸಲು ಯು.ಟಿ ಖಾದರ್ ಅವರನ್ನು ಸ್ಪಷ್ಟವಾದ ಬಹುಮತದಿಂದ ಎಲ್ಲರೂ ಗೆಲ್ಲಿಸಬೇಕು. ಈ ಮೂಲಕ ಕಾಂಗ್ರೆಸ್ ಸರಕಾರವನ್ನು ರಚಿಸುವಂತೆ ಬೆಂಬಲಿಸಬೇಕಿದೆ ಎಂದರು.


